ಬೆಳ್ತಂಗಡಿ : Tulu Times l ಹಾಡಹಗಲೇ ಕಿಡ್ನಾಪ್ ಕೇಸ್ ಹೆಚ್ಚಾಗ್ತಾ ಇದೆ. ಸ್ಕೂಟರ್ ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಕಿಡ್ನಾಪ್ ಮಾಡಲು ಯತ್ನಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಕಾಶಿಬೆಟ್ಟು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಎಂದಿನಂತೆ ಫೆ.9 ರಂದು ಬೆಳಗ್ಗೆ ಸುಮಾರು 8:30 ಕ್ಕೆ ತಂದೆಯ ಸ್ಕೂಟರ್ ನಲ್ಲಿ ಸಂತೆಕಟ್ಟೆ ಬಸ್ ಹತ್ತಲು ಹೋಗುವಾಗ ಈ ಘಟನೆ ನಡೆದಿರುವುದು ವರದಿಯಾಗಿದೆ.
ಕಾರಿನೊಂದಿಗೆ ಅಪರಿಚಿತರು ಪರಾರಿ ;
ಅಪರಿಚಿತ ನಂಬರ್ ಪ್ಲೇಟ್ ಗೆ ಬಟ್ಟೆಯನ್ನು ಕಟ್ಟಿ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಸ್ಕೂಟರ್ ಅಡ್ಡಗಟ್ಟಿ, ವಿದ್ಯಾರ್ಥಿನಿಯನ್ನು ಕಾರಿನೊಳಗೆ ಎಳೆದು ತಂದಾಗ ಬೊಬ್ಬೆ ಹೊಡೆದು ವಿರೋಧ ವ್ಯಕ್ತಪಡಿಸಿ ಹೊರಬಂದಾಗ ಹಿಂಭಾಗದಿಂದ ಸ್ಕೂಟರ್ ಬರುವುದನ್ನು ನೋಡಿ ಚೂರಿಯಿಂದ ಕೈಗೆ, ಬೆರಳಿಗೆ ಚುಚ್ಚಿ ಕಾಲೇಜು ಬ್ಯಾಗ್ ಹಿಡಿದುಕೊಂಡು ಮತ್ತೆ ಕಾರಿನೊಂದಿಗೆ ಅಪರಿಚಿತರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಗಾಯಗೊಂಡ ವಿದ್ಯಾರ್ಥಿನಿಯನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳ್ತಂಗಡಿ ಪೊಲೀಸರು ಆಸ್ಪತ್ರೆಗೆ ಆಗಮಿಸಿ ವಿದ್ಯಾರ್ಥಿನಿ ಬಳಿಯಿಂದ ಮಾಹಿತಿ ಪಡೆದುಕೊಂಡು ತನಿಖೆ ಚುರುಕುಗೊಳಿಸಿರುವುದು ತಿಳಿದು ಬಂದಿದೆ.
Belthangady: Attempt to kidnap a student in broad daylight – ತುಳು ಟೈಮ್ಸ್
ಇದನ್ನೂ ಓದಿ : ಡಿಜಿಟಲ್ ಯುಗದಲ್ಲಿ ಮಕ್ಕಳ ಭವಿಷ್ಯದ ಬಗ್ಗೆ ಎಚ್ಚರಿಕೆ ವಹಿಸಿ
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/bXVRChrgqts?si=SQPaxel35P9PQT_S











