ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಮಂಗಳೂರುಮೂಡಬಿದಿರೆ

Moodabidre : ಟ್ರ‍್ಯಾಕ್ಟರ್ ಸಹಿತ ಬಾವಿಗೆ ಬಿದ್ದು ವ್ಯಕ್ತಿ ಸಾವು.

ಮೂಡುಬಿದಿರೆ : ಟ್ರ‍್ಯಾಕ್ಟರ್ ತೊಳೆಯುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಟ್ರ‍್ಯಾಕ್ಟರ್ ಸಹಿತ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಂಟ್ರಾಡಿ ಕೊಂಬೆಟ್ಟು ಎಂಬಲ್ಲಿ ನಡೆದಿದೆ. ಒಂಬೆಟ್ಟು ನಿವಾಸಿ ರಾಜೇಶ್ (38) ಮೃತಪಟ್ಟ ದುರ್ದೈವಿ.

ರಾಜೇಶ್ ಮನೆಯ ಪಕ್ಕದಲ್ಲಿ ಸಂಬಂಧಿಕರಿಗೆ ಸೇರಿದ ಟ್ರ‍್ಯಾಕ್ಟರ್ ಅನ್ನು ಬಾವಿಯ ಸಮೀಪ ನಿಲ್ಲಿಸಿ ತೊಳೆಯುತ್ತಿದ್ದರು. ಈ ವೇಳೆ ಟ್ರ‍್ಯಾಕ್ಟರ್ ಆಕಸ್ಮಿಕವಾಗಿ ಬಾವಿಯ ಕಡೆಗೆ ಚಲಿಸಲಾರಂಭಿಸಿದೆ. ಅದನ್ನು ನಿಲ್ಲಿಸಲು ಮುಂದಾದ ರಾಜೇಶ್ ಕೂಡಾ ನಿಯಂತ್ರಣ ತಪ್ಪಿ ಟ್ರ‍್ಯಾಕ್ಟರ್ ಜೊತೆ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರು ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.

ಇದನ್ನೂ ಓದಿ :Puttur: ಹೆಜ್ಜೇನು ದಾಳಿಗೆ ಬಾಲಕಿ ಬಲಿ – ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ


ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess  

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 171

You cannot copy content of this page