ಬ್ರೇಕಿಂಗ್ ನ್ಯೂಸ್
ಶೈಕ್ಷಣಿಕ

ಡಿಜಿಟಲ್ ಯುಗದಲ್ಲಿ ಮಕ್ಕಳ ಭವಿಷ್ಯದ ಬಗ್ಗೆ ಎಚ್ಚರಿಕೆ ವಹಿಸಿ

ಡಿಜಿಟಲ್ ಯುಗ : Tulu Times | ಡಿಜಿಟಲ್ ಯುಗದಲ್ಲಿ ಮಕ್ಕಳ ಮಾನಸಿಕ ಸುರಕ್ಷತೆಯ ಬಗ್ಗೆ ಗಂಭೀರ ಎಚ್ಚರಿಕೆ ನೀಡಬೇಕಾಗಿದೆ. ಮೊಬೈಲ್ ನಲ್ಲಿ ಒಂದು ಗೇಮ್ ಗೆ ಲಾಗಿನ್ ಆಗಿ ಅದರಲ್ಲಿ ಆಟಕ್ಕೆ ಇಳಿಯುವ ಮುನ್ನ ಇರುವ ಮಕ್ಕಳ ಮಾನಸಿಕ ಸ್ಥಿತಿಗೂ ದಿನ ಹೋದಾಗೆ ಬದಲಾಗುವ ಮನಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಕೆಲವೆಡೆ ಸಾಮಾನ್ಯ ಗೇಮ್ ಗಳಲ್ಲದೆ ಸೋಶಿಯಲ್ ಮೀಡಿಯಾ ಮೂಲಕ ಅಪರಿಚಿತ ವ್ಯಕ್ತಿಗಳು ಮಕ್ಕಳನ್ನು ಸಂಪರ್ಕಿಸಿ, ತಾವು ಕೋರಿಯನ್ ಎಂದು ಹೇಳಿಕೊಂಡು ಸ್ನೇಹ ಬೆಳೆಸುತ್ತಾರೆ.

ಬಳಕೆದಾರರಿಗೆ ಸಣ್ಣ ಸಣ್ಣ ಟಾಸ್ಕ್‌ಗಳನ್ನು ನೀಡಲಾಗುತ್ತದೆ. ಆರಂಭದಲ್ಲಿ ಸುಲಭವಾಗಿರುವ ಈ ಟಾಸ್ಕ್‌ಗಳು, ನಂತರ ಮಾನಸಿಕ ಒತ್ತಡ ಹೇರುವ ಮತ್ತು ಭಯ ಹುಟ್ಟಿಸುವ ಹಂತಕ್ಕೆ ತಲುಪುತ್ತವೆ. ಟಾಸ್ಕ್ ಪೂರ್ಣಗೊಳಿಸದಿದ್ದರೆ ಬೆದರಿಕೆ ಹಾಕುವ ಮೂಲಕ ಬಳಕೆದಾರರನ್ನು ತಮ್ಮ ಜಾಲದಲ್ಲಿ ಪೂರ್ತಿಯಾಗಿ ಸಿಲುಕಿಸಿಕೊಳ್ಳಲಾಗುತ್ತದೆ.

ಕುಟುಂಬ ಮತ್ತು ಸ್ನೇಹಿತರಿಂದ ದೂರವಿರುವುದು ;

ಮನೋವಿಜ್ಞಾನಿಗಳ ಪ್ರಕಾರ, ಅಪ್ರಾಪ್ತ ವಯಸ್ಸಿನ ಮಕ್ಕಳ ಮೆದುಳು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರದ ಕಾರಣ, ಅವರು ವರ್ಚುವಲ್‌ ಜಗತ್ತನ್ನೇ ನೈಜ ಎಂದು ನಂಬುತ್ತಾರೆ. ಸೋಲು ಮತ್ತು ಭಯದ ಭಾವನೆ ಅವರನ್ನು ಖಿನ್ನತೆಗೆ ದೂಡುತ್ತದೆ. 2011ರ ನಂತರ ಆನ್‌ಲೈನ್ ಗೇಮಿಂಗ್ ವ್ಯಸನದಿಂದಾಗಿ ಯುವಜನರಲ್ಲಿ ಖಿನ್ನತೆ ಮತ್ತು ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಾಗಿವೆ ಎಂದು ಅಮೆರಿಕದ ಮನೋವಿಜ್ಞಾನಿ ಹೇಳಿರುತ್ತಾರೆ. ಇನ್ನು ಕೆಲ ಮಕ್ಕಳಿಗೆ ಗೇಮ್ ಆಡದಂತೆ ತಡೆದರೆ ತೀವ್ರ ಕೋಪ ಅಥವಾ ಕಿರಿಕಿರಿ ತೋರಿಸುತ್ತಾರೆ. ಅಲ್ಲದೇ, ಕುಟುಂಬ ಮತ್ತು ಸ್ನೇಹಿತರಿಂದ ದೂರವಿರುವುದು, ನಿದ್ರೆ ಮತ್ತು ಆಹಾರದ ಕ್ರಮದಲ್ಲಿ ಏರುಪೇರಾಗುವುದು,‌ ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುವುದು ಇತ್ಯಾದಿ ಸಮಸ್ಯೆ ಎದುರಾಗುತ್ತವೆ.

ಮಕ್ಕಳಿಗೆ ಮೊಬೈಲ್‌ ನೀಡುವುದು ತಪ್ಪಲ್ಲ, ಆದರೆ ಅವರ ಆನ್‌ಲೈನ್ ನಡವಳಿಕೆಯ ಮೇಲೆ ನಿಗಾ ಇಡುವುದು ಅತ್ಯಗತ್ಯ. ಮುಖ್ಯವಾಗಿ, ಮಕ್ಕಳೊಂದಿಗೆ ಮುಕ್ತವಾಗಿ ಸಂಭಾಷಣೆ ನಡೆಸುವುದು, ಮಕ್ಕಳ ಸ್ಟ್ರೀನ್ ಟೈಮ್ ಮೇಲೆ ಮಿತಿ ಹೇರುವುದು, ಮಕ್ಕಳು ಯಾವ ರೀತಿಯ ಆ್ಯಪ್ ಅಥವಾ ಗೇಮ್ ಬಳಸುತ್ತಿದ್ದಾರೆ ಎಂಬುದನ್ನು ಗಮನಿಸುವುದು ಮುಖ್ಯವಾಗಿರುತ್ತದೆ.

Be careful about the future of children in the digital age – ತುಳು ಟೈಮ್ಸ್

ಇದನ್ನೂ ಓದಿ : ಬೆಳ್ತಂಗಡಿ: ಸಾಕು ನಾಯಿಯನ್ನು ಹೊತ್ತೊಯ್ದ ಚಿರತೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/bXVRChrgqts?si=SQPaxel35P9PQT_S

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

You cannot copy content of this page