ಬೆಳ್ತಂಗಡಿ: Tulu Times | ಉಜಿರೆಯಲ್ಲಿ ಕುಳಿತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಉಜಿರೆ-ಚಾರ್ಮಾಡಿ ರಸ್ತೆಯ ಬ್ಯಾಂಕ್ ಕಟ್ಟಡದ ಬದಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಫೆ.7 ರಂದು ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಚಾರ್ಮಾಡಿ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡದ ಕಟ್ಟಡದ ಬದಿಯಲ್ಲಿ ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಕುಳಿತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಸುರ್ಯ ಬರಮೇಲು ನಿವಾಸಿ ದೇವರಾಜ್(50) ಎಂಬುವವರು ಎಂದು ತಿಳಿದುಬಂದಿದೆ. ಬ್ಯಾಂಕ್ ನ ಸಿಬ್ಬಂದಿಗಳು ಬದಿಯಲ್ಲಿ ನಡೆದುಕೊಂಡು ಹೋಗುವಾಗ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ರೀ-ಎಂಟ್ರಿ ಕೊಟ್ಟ ‘ಯಾರೇ ನೀನು ಚೆಲುವೆ’ ನಟಿ ..ಸಂಗೀತ ಹೊಸ ಸಿನಿಮಾ ಯಾವುದು?
ಬೆಳ್ತಂಗಡಿ: ಸಾಕು ನಾಯಿಯನ್ನು ಹೊತ್ತೊಯ್ದ ಚಿರತೆ
ಬೆಳ್ತಂಗಡಿ: ಪ್ರತ್ಯೇಕ ಪ್ರಕರಣದಲ್ಲಿ, ಮನೆಯ ಹೊರ ಛಾವಣಿಯಿಂದ ಚಿರತೆಯೊಂದು ಸಾಕು ನಾಯಿಯನ್ನು ಹೊತ್ತೊಯ್ದ ಘಟನೆ ನಡೆದಿದೆ. ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನಲ್ಲಿ ಚಿರತೆಗಳ ಹಾವಳಿ ಹೆಚ್ಚಾಗುತ್ತಿದೆ.
ಫೆ.5 ರಂದು ಮಲವಂತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ದಿಡುಪಿ ಕುಂಡಾಲ್ ಮನೆ ಜಯಂತ್ ಎಂಬವರ ಮನೆಯ ಹೊರಛಾವಣಿಯಲ್ಲಿದ್ದ ಸಾಕು ನಾಯಿಯನ್ನು ಚಿರತೆಯೊಂದು ಹೊತ್ತೊಯ್ದ ಘಟನೆ ಮಧ್ಯರಾತ್ರಿ ನಡೆದಿದೆ. ಮನೆಯಿಂದ ನಾಯಿಯನ್ನು ಹೊತ್ತೊಯ್ಯ ದೃಶ್ಯವು ಅವರ ಮನೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ.
ಇದನ್ನೂ ಓದಿ: ಹಿಂದೂಗಳಲ್ಲಿ ಬಡವರು ಇಲ್ಲವೇ ? : ಅಲ್ಪಸಂಖ್ಯಾತರ ಬಡ್ಡಿ ಮನ್ನಾ ವಿಷಯಕ್ಕೆ ಖಂಡನೆ
ಚಿರತೆಯ ದಾಳಿಗೆ ತಾಲೂಕಿನಲ್ಲಿ ಸಾಕು ಪ್ರಾಣಿಗಳಾದ ನಾಯಿ, ದನಕರುಗಳು ಬಲಿಯಾಗುತ್ತಿದೆ. ಚಿರತೆ ಕೆಲವು ಪ್ರದೇಶಗಳಿಗೆ ಪ್ರವೇಶ ಮಾಡಿರುವುದು ಜನರಿಗೆ ಭಯ ತಂದಿದೆ. ದಿನನಿತ್ಯ ಶಾಲಾಕಾಲೇಜುಗಳಿಗೆ ತೆರಳುವ ಮಕ್ಕಳು ಇರುವುದರಿಂದ ಸಂಜೆ ಮನೆಗೆ ಬರುವಾಗ ರಾತ್ರಿಯಾಗುವ ಕಾರಣದಿಂದ ಶೀಘ್ರದಲ್ಲೇ ಕಾಡುಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಆಗ್ರಹವನ್ನು ಮಾಡುತ್ತಿದ್ದಾರೆ.
Body found on side of building in Ujire- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











