ಬ್ರೇಕಿಂಗ್ ನ್ಯೂಸ್
ಕರ್ನಾಟಕಬೆಳ್ತಂಗಡಿ

ಬೆಳ್ತಂಗಡಿ: ಸಾಕು ನಾಯಿಯನ್ನು ಹೊತ್ತೊಯ್ದ ಚಿರತೆ

ಬೆಳ್ತಂಗಡಿ: Tulu Times | ಮನೆಯ ಹೊರ ಛಾವಣಿಯಿಂದ ಚಿರತೆಯೊಂದು ಸಾಕು ನಾಯಿಯನ್ನು ಹೊತ್ತೊಯ್ದ  ಘಟನೆ ನಡೆದಿದೆ.  ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನಲ್ಲಿ ಚಿರತೆಗಳ ಹಾವಳಿ ಹೆಚ್ಚಾಗುತ್ತಿದೆ.

ಫೆ.5 ರಂದು ಮಲವಂತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ದಿಡುಪಿ ಕುಂಡಾಲ್ ಮನೆ ಜಯಂತ್ ಎಂಬವರ ಮನೆಯ ಹೊರಛಾವಣಿಯಲ್ಲಿದ್ದ ಸಾಕು ನಾಯಿಯನ್ನು  ಚಿರತೆಯೊಂದು  ಹೊತ್ತೊಯ್ದ ಘಟನೆ ಮಧ್ಯರಾತ್ರಿ ನಡೆದಿದೆ. ಮನೆಯಿಂದ ನಾಯಿಯನ್ನು ಹೊತ್ತೊಯ್ಯ ದೃಶ್ಯವು ಅವರ ಮನೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ.

ಚಿರತೆಯ ದಾಳಿಗೆ ತಾಲೂಕಿನಲ್ಲಿ ಸಾಕು ಪ್ರಾಣಿಗಳಾದ ನಾಯಿ, ದನಕರುಗಳು ಬಲಿಯಾಗುತ್ತಿದೆ.  ಚಿರತೆ ಕೆಲವು ಪ್ರದೇಶಗಳಿಗೆ ಪ್ರವೇಶ  ಮಾಡಿರುವುದು ಜನರಿಗೆ ಭಯ ತಂದಿದೆ. ದಿನನಿತ್ಯ ಶಾಲಾಕಾಲೇಜುಗಳಿಗೆ ತೆರಳುವ ಮಕ್ಕಳು ಇರುವುದರಿಂದ ಸಂಜೆ ಮನೆಗೆ ಬರುವಾಗ ರಾತ್ರಿಯಾಗುವ ಕಾರಣದಿಂದ ಶೀಘ್ರದಲ್ಲೇ ಕಾಡುಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಆಗ್ರಹವನ್ನು ಮಾಡುತ್ತಿದ್ದಾರೆ.

ಬೆಳ್ತಂಗಡಿ: ಗಡಾಯಿಕಲ್ಲು ಟ್ರಕ್ಕಿಂಗ್‌ ನಿಷೇಧ

ಬೆಳ್ತಂಗಡಿ: ಪ್ರತ್ಯೇಕ ಪ್ರಕರಣದಲ್ಲಿ, ಬೆಳ್ತಂಗಡಿ ತಾಲೂಕಿನ ಪ್ರವಾಸಿತಾಣ ಗಡಾಯಿಕಲ್ಲು ಚಾರಣ ಪ್ರವೇಶ ತಾತ್ಕಾಲಿಕ ನಿಷೇಧ ಮಾಡಲಾಗಿದೆ. ಫೆ.7 ರಿಂದ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ನಿಷೇಧಿಸಿ ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದಿಂದ ಆದೇಶವನ್ನು ಹೊರಡಿಸಲಾಗಿದೆ.

ಬೇಸಿಗೆ ಸಮಯದಲ್ಲಿ ಉಂಟಾಗುವ ಕಾಡ್ತಿಚ್ಚಿನ ಸಂಭವದಿಂದ ಜಾಗೃತಿ ಮೂಡಿಸುವ ಸಲುವಾಗಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಗಡಾಯಿಕಲ್ಲು ಚಾರಣವನ್ನು ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧ ಮಾಡಲಾಗಿದೆ.

ಗಡಾಯಿಕಲ್ಲು ಬಗ್ಗೆ ನಿಮಗೆಷ್ಟು ಗೊತ್ತು..?

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪವಿರುವ ಗಡಾಯಿಕಲ್ಲು (ಜಮಲಾಬಾದ್ ಕೋಟೆ) ಚಾರಣವು ಸಾಹಸಪ್ರಿಯರಿಗೆ ಅತ್ಯಂತ ಆಕರ್ಷಕ ತಾಣವಾಗಿದೆ. ಇದು ಸುಮಾರು 1,788 ಅಡಿ ಎತ್ತರವಿದ್ದು, ಶಿಖರ ತಲುಪಲು ಸುಮಾರು 1,876 ಕಲ್ಲಿನ ಮೆಟ್ಟಿಲುಗಳನ್ನು ಹತ್ತಬೇಕು.ಚಾರಣಕ್ಕೆ ಸಾಮಾನ್ಯವಾಗಿ 1.5 ರಿಂದ 2 ಗಂಟೆ ಬೇಕಾಗುತ್ತದೆ. ಇಳಿಯಲು ಸುಮಾರು 1 ಗಂಟೆ ಸಾಕು. ಬೆಳಿಗ್ಗೆ 6:00 ರಿಂದ ಸಂಜೆ 4:00 ರವರೆಗೆ ಮಾತ್ರ ಅವಕಾಶವಿರುತ್ತದೆ.ತಲಾ ₹50 ಪ್ರವೇಶ ಶುಲ್ಕವಿರುತ್ತದೆ (ನಗದು ರೂಪದಲ್ಲಿ ಮಾತ್ರ). ಕಾಡ್ಲಿಚ್ಚಿನ ಮುನ್ನೆಚ್ಚರಿಕೆ ಕ್ರಮವಾಗಿ ಫೆಬ್ರವರಿ 7, 2026 ರಿಂದ ಗಡಾಯಿಕಲ್ಲು ಚಾರಣಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ.

ನೀವು ಹೋಗುವ ಮೊದಲು ಸ್ಥಳೀಯ ಅರಣ್ಯ ಇಲಾಖೆ ಅಥವಾ ಸಂಬಂಧಿತ ಅಧಿಕಾರಿಗಳಿಂದ ಪ್ರವೇಶದ ಬಗ್ಗೆ ಖಚಿತಪಡಿಸಿಕೊಳ್ಳುವುದು ಸೂಕ್ತ. ಇನ್ನು ಚಾರಣ ಹೋರುವಿರಾದರೆ ಕೆಲವು ಸಲಹೆಗಳನ್ನು ನೋಡೋದಾದ್ರೆ, ಬೆಟ್ಟದ ಮೇಲೆ ಯಾವುದೇ ಅಂಗಡಿಗಳಿಲ್ಲದ ಕಾರಣ ಸಾಕಷ್ಟು ನೀರು ಮತ್ತು ಲಘು ಆಹಾರವನ್ನು ಕೊಂಡೊಯ್ದಿರಿ. ಅನುಕೂಲಕರವಾದ ಬಟ್ಟೆ ಮತ್ತು ಉತ್ತಮ ಹಿಡಿತವಿರುವ ಶೂಗಳನ್ನು ಧರಿಸಿ. ಚಾರಣದ ನಂತರ ಧರ್ಮಸ್ಥಳ (17 ಕಿ.ಮೀ), ಎರ್ಮಾಯಿ ಜಲಪಾತ ಅಥವಾ ಸೂರ್ಯ ದೇವಸ್ಥಾನಗಳಿಗೆ ಭೇಟಿ ನೀಡಬಹುದು.

Belthangady: Leopard carrying pet dog-‌ ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 127

You cannot copy content of this page