ಸಿನಿಮಾ: Tulu Times | ಯಾರೇ ನೀನು ಚೆಲುವೆ’ ಸಿನಿಮಾ ಖ್ಯಾತಿ ನಟಿ ಸಂಗೀತ ಮಾಧವನ್ ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದಾರೆ. ಹೊಸ ತಂಡವೊಂದು ಇವರನ್ನು ಕನ್ನಡ ಚಿತ್ರರಂಗಕ್ಕೆ ಕರೆ ತಂದಿದೆ. ಲಾಂಗ್ ಗ್ಯಾಪ್ ಬಳಿಕ ಸಂಗೀತ ಕನ್ನಡ ಚಿತ್ರಪ್ರೇಮಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ.
ಕಿಚ್ಚ ಸುದೀಪ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕಿರಣ್ ವಿಶ್ಚನಾಥ್ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ರನ್ನ, ವಿಕ್ಟರಿ ಚಿತ್ರಗಳಲ್ಲಿ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅವರೀಗ ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ. ಅವರ ಚೊಚ್ಚಲ ಚಿತ್ರದಲ್ಲಿ ಸಂಗೀತ ಮಾಧವನ್ ಅಭಿನಯಿಸುತ್ತಿದ್ದಾರೆ. ಸಂಗೀತ ಭಾಗ್ಯ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕನ ತಾಯಿಯಾಗಿ ಅವರು ಜೀವ ತುಂಬಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಚಿತ್ರತಂಡ ಮಹಾನಟಿ ಖ್ಯಾತಿಯ ಪ್ರಿಯಾಂಕಾ ಆಚಾರ್ ಅವರನ್ನು ನಾಯಕಿಯಾಗಿ ಪರಿಚಯಿಸಿತ್ತು. ಇದೀಗ ಸಂಗೀತ ಅವರು ಸಿನಿಮಾದ ಭಾಗವಾಗಿರುವ ಬಗ್ಗೆ ಮಾಹಿತಿ ನೀಡಿದೆ.
ಈ ಸಿನಿಮಾದ ನಾಯಕ ಯಾರು ಅನ್ನೋದನ್ನು ಚಿತ್ರತಂಡ ಸಸ್ಪೆನ್ಸ್ ಆಗಿ ಇಟ್ಟಿದೆ. ದೊಡ್ಡದಾಗಿ ಹೀರೋ ಇಂಟರ್ಡ್ಯೂಸ್ ಮಾಡಲು ಯೋಜನೆ ಕೂಡ ಹಾಕಿಕೊಂಡಿದೆ. ಗೌರಿ ಆರ್ಟ್ಸ್ ಬ್ಯಾನರ್ ನಡಿ ಮೂಡಿ ಬರುತ್ತಿರುವ ಮೊದಲ ಸಿನಿಮಾ ಇದಾಗಿದೆ. ಮುಂದಿನ ದಿನಗಳಲ್ಲಿ ಒಂದೊಂದೇ ಮಾಹಿತಿಯನ್ನು ಸಿನಿಮಾ ತಂಡ ನೀಡಲಿದೆ.
ಹೊಸ ಸಿರೀಸ್ ಘೋಷಿಸಿದ zee5.. ಫೆ.20ರಿಂದ ರಾಕ್ಷಸ ಸ್ಟ್ರೀಮಿಂಗ್
ಅಯ್ಯನ ಮನೆ, ಮಾರಿಕಲ್ಲು ವೆಬ್ ಸರಣಿ ಸಕ್ಸಸ್ ಬಳಿಕ zee5 ಕನ್ನಡ ಇದೀಗ ಕನ್ನಡ ಒರಿಜಿನಲ್ ಸಿರೀಸ್ ಘೋಷಿಸಿದೆ. ಈ ಸರಣಿಗೆ ರಾಕ್ಷಸ ಎಂಬ ಟೈಟಲ್ ಇಡಲಾಗಿದೆ. ನಂಬಿಕೆ ಮತ್ತು ಕೊಲೆಯಲ್ಲಿ ಬೇರೂರಿರುವ ಕರಾಳ ಅಪರಾಧ ಕಥೆಯ ಸುತ್ತ ಈ ಸರಣಿ ಸಾಗಲಿದೆ. ಬಿಡುಗಡೆಯಾಗಿರುವ ರಾಕ್ಷಸ ಟ್ರೇಲರ್ ಕುತೂಹಲ ಹೆಚ್ಚಿಸಿದ್ದು, ಈ ಮೂಲಕ zees ಮತ್ತೊಂದು ವಿಶೇಷ ಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸಲಿದೆ.
ಸುಹಾನ್ ಪ್ರಸಾದ್ ಮತ್ತು ಅಪೂರ್ವ ಬರೆದು, ಸುಹಾನ್ ಪ್ರಸಾದ್ ನಿರ್ದೇಶಿಸಿರುವ ಈ ಸರಣಿಯನ್ನು ಖ್ಯಾತ ನಿರ್ದೇಶಕ ತರುಣ್ ಸುಧೀರ್ ತಮ್ಮದೇ ತರುಣ್ ಸುಧೀರ್ ಪ್ರೊಡಕ್ಷನ್ಸ್ ನಿರ್ಮಿಸಿದ್ದಾರೆ. ಚಿನ್ನಾರಿ ಮುತ್ತ ಖ್ಯಾತಿಯ ವಿಜಯ್ ರಾಘವೇಂದ್ರ ರಾಕ್ಷಸ ಮೂಲಕ ಸಿರೀಸ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಯೂರಿ, ಅವಿನಾಶ್, ಮಾಳವಿಕ, ಅಪ್ಪಣ್ಣ ಮತ್ತು ಅಭಿಜಿತ್ ತಾರಾಬಳಗದಲ್ಲಿದ್ದಾರೆ.
ತಮ್ಮ ಚೊಚ್ಚಲ ಒಟಿಟಿ ಪ್ರವೇಶದ ಬಗ್ಗೆ ಮಾತನಾಡಿದ ನಾಯಕ ನಟ ವಿಜಯ್ ರಾಘವೇಂದ್ರ “ರಾಕ್ಷಸ OTT ಜಾಗಕ್ಕೆ ನನ್ನ ಮೊದಲ ಹೆಜ್ಜೆಯಾಗಿದೆ. ಈ ಪ್ರಯಾಣವನ್ನು ಪ್ರಾರಂಭಿಸಲು ನಾನು ಇದಕ್ಕಿಂತ ಪ್ರಾಮಾಣಿಕ ಅಥವಾ ಸವಾಲಿನ ಕಥೆಯನ್ನು ಕೇಳಲು ಸಾಧ್ಯವಿಲ್ಲ ನನ್ನನ್ನು ಆಕರ್ಷಿಸಿದ್ದು ಅಪರಾಧ ಅಥವಾ ಸಸ್ಪೆನ್ಸ್ ಮಾತ್ರವಲ್ಲ, ಕರ್ತವ್ಯ, ನಂಬಿಕೆ ಮತ್ತು ವೈಯಕ್ತಿಕ ಜವಾಬ್ದಾರಿಯ ನಡುವೆ ಹರಿದ ವ್ಯಕ್ತಿ ಪಾತ್ರದ ಭಾವನಾತ್ಮಕ ತೂಕ. ZEE5 ಬೇರೂರಿರುವ, ಶಕ್ತಿಯುತವಾದ ಕನ್ನಡ ಕಥೆಗಳಿಗೆ ಜಾಗವನ್ನು ಸೃಷ್ಟಿಸುತ್ತಿದೆ ಮತ್ತು OTT ರಾಕ್ಷಸದಂತಹ ನಿರೂಪಣೆಗಳು ಉಸಿರಾಡಲು ಮತ್ತು ಪ್ರೇಕ್ಷಕರೊಂದಿಗೆ ಹೆಚ್ಚು ಕಾಲ ಉಳಿಯಲು ಅನುವು ಮಾಡಿಕೊಡುತ್ತದೆ. ಅಂತಿಮ ಸಂಚಿಕೆಯ ನಂತರವೂ ಈ ಸರಣಿಯು ಶಾಶ್ವತವಾದ ಪ್ರಭಾವ ಬೀರುತ್ತದೆ ಎಂದು ನಾನು ನಂಬುತ್ತೇನೆ ” ಎಂದರು.
The ‘Yare Ninu Cheluve’ actress has re-entered the Kannada film industry..What is the new musical movie?- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











