ಬ್ರೇಕಿಂಗ್ ನ್ಯೂಸ್
ಪುತ್ತೂರು

ಹಿಂದೂಗಳಲ್ಲಿ ಬಡವರು ಇಲ್ಲವೇ ? : ಅಲ್ಪಸಂಖ್ಯಾತರ ಬಡ್ಡಿ ಮನ್ನಾ ವಿಷಯಕ್ಕೆ ಖಂಡನೆ

ಪುತ್ತೂರು : Tulu Times | ನಿನ್ನೆ (ಫೆ.06) ನಡೆದ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ 2013-14 ರಿಂದ 2018-19ನೇ ಸಾಲಿನವರೆಗೆ ವಿವಿಧ ಯೋಜನೆಗಳಡಿ ನೀಡಲಾಗಿರುವ ಸಾಲಗಳಿಗೆ ಒಟಿಎಸ್‌ ಅಡಿ ಬಡ್ಡಿ ಮನ್ನಾ ಮಾಡಲು ರಾಜ್ಯ ಸರ್ಕಾರವು ನಿರ್ಧರಿಸಿದ್ದು, ಈ ಬಗ್ಗೆ ಪುತ್ತೂರಿನ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಈ ಯೋಜನೆಯನ್ನು ಖಂಡಿಸಿದ್ದು, ತಮ್ಮ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿರುತ್ತಾರೆ.

ವಿವಿಧ ಯೋಜನೆಗಳಡಿಯಲ್ಲಿ ನೀಡಿರುವ ಸಾಲಕ್ಕೆ ಸಂಬಂಧಿಸಿದ ಬಡ್ಡಿ ಮನ್ನಾ ಮಾಡಿದಲ್ಲಿ ಇನ್ನಿತರೆ ನಿಗಮಗಳಿಗೂ ಇದೊಂದು ಪೂರ್ವ ನಿದರ್ಶನವಾಗಲಿದೆ ಎಂದು ಆರ್ಥಿಕ ಇಲಾಖೆ ಹೇಳಿದ್ದರೂ ಸಹ ಈ ಪ್ರಸ್ತಾವವನ್ನು ಸಚಿವ ಸಂಪುಟ ಅಂಗೀಕರಿಸಿದ್ದು ವಿಷಾದನೀಯ ಎಂದು ಹೇಳಿರುತ್ತಾರೆ.

ಈ ರೀತಿ ನಿತ್ಯ ನಿರಂತರವಾಗಿ ಅಲ್ಪಸಂಖ್ಯಾತರ ಒಲೈಕೆ ಮಾಡುವ ಕಾಂಗ್ರೆಸ್‌ ಸರ್ಕಾರಕ್ಕೆ ಬಹುಸಂಖ್ಯಾತ ಹಿಂದೂ ಸಮುದಾಯದ ಮತ ಯಾಕೆ ಎಂಬ ಪ್ರಶ್ನೆ ಕಾಡುತ್ತಿದೆ. ಅಲ್ಪಸಂಖ್ಯಾತರ ಸಾಲಕ್ಕೆ ಬಡ್ಡಿ ಮನ್ನಾ ಮಾಡುವ ಸರ್ಕಾರವು ರೈತರ ಕೃಷಿ ಸಾಲದ ಬಡ್ಡಿ ಮನ್ನಾ ಯಾಕೆ ಮಾಡುತ್ತಿಲ್ಲ? ಅದೇ ರೀತಿ ಹಿಂದುಗಳಲ್ಲಿ ಬಡವರು ಇಲ್ಲವೇ? ಈ ತಾರತಮ್ಯ ನೀತಿ ಯಾಕೆ? ಎಂಬ ಬಗ್ಗೆ ಅರುಣ್ ಕುಮಾರ್ ಪುತ್ತಿಲ ಸರ್ಕಾರದ ಈ ನೀತಿಯನ್ನು ಒಪ್ಪದೆ, ರಾಜ್ಯದ ಜನತೆಯ ತೆರಿಗೆ ಹಣವನ್ನು ಮುಸ್ಲಿಮರ ಓಲೈಕೆಗೆ ಬಳಸುವುದನ್ನು ಖಂಡಿಸುತ್ತೇನೆ ಎಂದು ಬರೆದುಕೊಂಡಿರುತ್ತಾರೆ.

Are there no poor people among Hindus?: Condemnation of interest waiver for minorities – ತುಳು ಟೈಮ್ಸ್

ಇದನ್ನೂ ಓದಿ : ಹೊಸ ಸಿರೀಸ್ ಘೋಷಿಸಿದ zee5..ಫೆ.20ರಿಂದ ರಾಕ್ಷಸ ಸ್ಟ್ರೀಮಿಂಗ್

========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/i7k9wBeq7_I?si=14i9ZHQ0VXcChe5j

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 12

You cannot copy content of this page