ಬೆಳ್ತಂಗಡಿ: Tulu Times | ಇಂದಬೆಟ್ಟು ಗ್ರಾಮದ ಅಂಬೋಲಿ ಎಂಬಲ್ಲಿ ರಬ್ಬರ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಬಿಗ್ ಟಿಕೆಟ್ ಡ್ರಾನಲ್ಲಿ 49 ಕೋಟಿ ಗೆದ್ದ ಉಡುಪಿಯ ಹುಡುಗ..!
ಮಿತ್ತಬಾಗಿಲು ಗ್ರಾಮದ ಕಿಲ್ಲೂರು ದರ್ಖಾಸು ಮನೆ ನಿವಾಸಿ ರಾಧಾಕೃಷ್ಣ ಆಚಾರ್ಯ (45)ರವರು ರಬ್ಬರ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಮದುವೆಯಾಗದೇ ಮನೆಯಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಜೊತೆಗೆ ಮರದ ಕೆಲಸ ಮಾಡಲು ಹೋಗುತ್ತಿದ್ದರು. ಕೆಲವು ತಿಂಗಳುಗಳಿಂದ ಮಾನಸಿಕವಾಗಿ ನೊಂದಿರುವ ಇವರು ಖಿನ್ನತೆಯಿಂದ ಬಳಲುತ್ತಿದ್ದರು. ಇವರು ತಾಯಿ, ಸಹೋದರಿಯರು, ಬಂಧು ಬಳಗವನ್ನು ಅಗಲಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬಂಟ್ವಾಳ: ನನ್ನ ಮೇಲೆ ಮಾವ ಹಲ್ಲೆ, ಜೀವಬೆದರಿಕೆ ನೀಡುತ್ತಿದ್ದಾರೆ..ಮಹಿಳೆ ದೂರು!
ಬೆಳ್ತಂಗಡಿ: ವಿದ್ಯುತ್ ಆಘಾತದಿಂದ ಕಾರ್ಮಿಕ ಸಾವು
ಬೆಳ್ತಂಗಡಿ: ವಿದ್ಯುತ್ ಆಘಾತಕ್ಕೆ ಒಳಗಾಗಿ ಪುತ್ತಿಲ ಗ್ರಾಮದ ಕೊಪ್ಪರಿಗೆ ಮಜಲು ಎಂಬಲ್ಲಿ ಚತ್ತೀಸ್ ಗಡ್ ಮೂಲದ ಕಾರ್ಮಿಕ ಶಿವ ಎಕ್ಕ (33) ಕಾರ್ಮಿಕ ಸಾವನ್ನಪ್ಪಿದ ಘಟನೆ ನಡೆದಿದೆ.
ವಿದ್ಯುತ್ ಆಘಾತಕ್ಕೆ ಸಿಲುಕಿದ್ದು ಹೇಗೆ..?
ಫೆ. 3 ರಂದು ರಫೀಕ್ ಎಂಬವರು ತಮ್ಮ ತಂದೆಗೆ ಸೇರಿದ ಜಾಗದಲ್ಲಿ ಹಾಳಾದ ಬೋರ್ ವೆಲ್ ಅನ್ನು ರಿಪೇರಿ ಮಾಡಿಸಲುಹಮೀದ್ ಎಂಬವರಿಗೆ ಸೇರಿದ ಬೋರ್ ವೆಲ್ ರಿಂಗ್ ವಾಹನವನ್ನು ಕರೆಸಿ ರಿಪೇರಿ ಮಾಡಿಸಿದಾಗ ಬೋರ್ ವೆಲ್ ಕೆಲಸ ಮುಗಿಸಿದ ಬಳಿಕ ಲಾರಿಯ ಡ್ರಿಲ್ ಮಾಡುವ ಯಂತ್ರವನ್ನು ಅದರ ಚಾಲಕ ಸಂಪತ್ ಕುಮಾರ್ ಜಾಗ್ರತೆ ವಹಿಸದ ನಿರ್ಲಕ್ಷ್ಯತನದಿಂದ ಕೆಳಗೆ ಇಳಿಸಿದ್ದರು.
ಹಾಗಾಗಿ, ವಿದ್ಯುತ್ ಲೈನಿಗೆ ತಾಗಿದೆ ಈ ಸಂದರ್ಭದಲ್ಲಿ ವಾಹನದ ಸಮೀಪ ನೀರಿನಲ್ಲಿ ನಿಂತಿದ್ದ ಕಾರ್ಮಿಕ ಶಿವ ಎಕ್ಕ ವಿದ್ಯುತ್ ಆಘಾತಕ್ಕೆ ಈಡಾಗಿ ಕೆಳಗೆ ಬಿದ್ದಿದ್ದು ಆತನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ ದಾರಿ ಮಧ್ಯೆ ಇವರು ಸಾವನ್ನಪ್ಪಿದ್ದಾರೆ. ಈ ಕುರಿತು ರಫೀಕ್ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Belthangady: Man committed suicide by hanging himself from rubber tree!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











