ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕ

ಉಪ್ಪಿನಂಗಡಿಯ ಯುವತಿ ನಾಪತ್ತೆ ಕೇಸ್‌ ದಾಖಲು!

ಉಪ್ಪಿನಂಗಡಿ: Tulu Times | ಫೆ.03 ರಂದು ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಮಜಿಕುಡೇಲು ಎಂಬಲ್ಲಿನ ಯುವತಿ ಸುಪ್ರೀತಾ(20)
ಮನೆಯಿಂದ  ನಾಪತ್ತೆಯಾಗಿದ್ದಾಳೆ.

ಮಂಗಳವಾರ ನಸುಕಿನ ಜಾವದಿಂದ ನಾಪತ್ತೆಯಾಗಿರುವ ಯುವತಿ, ಫೆ.2 ರಂದು ಸೋಮವಾರ ರಾತ್ರಿ ಎಂದಿನಂತೆ ಮಲಗಿದ್ದವರು ಮರುದಿನ ನಸುಕಿನ ವೇಳೆ ಕಾಣಿಸದೇ ಇದ್ದು, ಮೊಬೈಲ್ ಫೋನ್ ಕರೆಯೂ ಸ್ವೀಕರಿಸಿರಲಿಲ್ಲ. ಬಳಿಕ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಆಕೆಯ ಮನೆಯವರು ಹೇಳಿದ್ದಾರೆ.

ದಿ. ಶೀನಪ್ಪ ಎಂಬವರ ಮಗಳಾಗಿದ್ದು,  ಹತ್ತನೇ ತರಗತಿಯ ವರೆಗೆ ಕಲಿತಿರುವ ಈಕೆ 4 ಅಡಿ 6 ಇಂಚು ಎತ್ತರವಿದ್ದು, ಸಪೂರ ಶರೀರ, ಉರುಟು ಮುಖವನ್ನು ಹೊಂದಿರುತ್ತಾರೆ. ಕನ್ನಡ ತುಳು ಭಾಷೆಯನ್ನು ಮಾತನಾಡುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಈಕೆಯ ಬಗ್ಗೆ ತಿಳಿದವರು ಉಪ್ಪಿನಂಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಠಾಣಾಧಿಕಾರಿ ಸುಕೇಶ್ ಎಸ್  ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದಾಳಿ ಮಾಡಲು ಸಂಚು!

ಬೆಳ್ತಂಗಡಿ: ವಿದ್ಯುತ್‌ ಆಘಾತದಿಂದ ಕಾರ್ಮಿಕ ಸಾವು

ಬೆಳ್ತಂಗಡಿ: ಪ್ರತ್ಯೇಕ ಪ್ರಕರಣದಲ್ಲಿ,ವಿದ್ಯುತ್ ಆಘಾತಕ್ಕೆ ಒಳಗಾಗಿ ಪುತ್ತಿಲ ಗ್ರಾಮದ ಕೊಪ್ಪರಿಗೆ ಮಜಲು ಎಂಬಲ್ಲಿ ಚತ್ತೀಸ್ ಗಡ್ ಮೂಲದ ಕಾರ್ಮಿಕ ಶಿವ ಎಕ್ಕ (33) ಕಾರ್ಮಿಕ ಸಾವನ್ನಪ್ಪಿದ ಘಟನೆ ನಡೆದಿದೆ.

ವಿದ್ಯುತ್‌ ಆಘಾತಕ್ಕೆ ಸಿಲುಕಿದ್ದು ಹೇಗೆ..?

ಫೆ. 3 ರಂದು ರಫೀಕ್ ಎಂಬವರು ತಮ್ಮ ತಂದೆಗೆ ಸೇರಿದ ಜಾಗದಲ್ಲಿ ಹಾಳಾದ ಬೋರ್ ವೆಲ್ ಅನ್ನು ರಿಪೇರಿ ಮಾಡಿಸಲುಹಮೀದ್ ಎಂಬವರಿಗೆ ಸೇರಿದ ಬೋರ್ ವೆಲ್ ರಿಂಗ್ ವಾಹನವನ್ನು ಕರೆಸಿ ರಿಪೇರಿ ಮಾಡಿಸಿದಾಗ ಬೋರ್ ವೆಲ್ ಕೆಲಸ ಮುಗಿಸಿದ ಬಳಿಕ ಲಾರಿಯ ಡ್ರಿಲ್ ಮಾಡುವ ಯಂತ್ರವನ್ನು ಅದರ ಚಾಲಕ ಸಂಪತ್ ಕುಮಾರ್ ಜಾಗ್ರತೆ ವಹಿಸದ ನಿರ್ಲಕ್ಷ್ಯತನದಿಂದ ಕೆಳಗೆ ಇಳಿಸಿದ್ದರು.

ಹಾಗಾಗಿ, ವಿದ್ಯುತ್ ಲೈನಿಗೆ ತಾಗಿದೆ ಈ ಸಂದರ್ಭದಲ್ಲಿ ವಾಹನದ ಸಮೀಪ ನೀರಿನಲ್ಲಿ ನಿಂತಿದ್ದ ಕಾರ್ಮಿಕ ಶಿವ ಎಕ್ಕ ವಿದ್ಯುತ್ ಆಘಾತಕ್ಕೆ ಈಡಾಗಿ ಕೆಳಗೆ ಬಿದ್ದಿದ್ದು ಆತನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ ದಾರಿ ಮಧ್ಯೆ ಇವರು ಸಾವನ್ನಪ್ಪಿದ್ದಾರೆ. ಈ ಕುರಿತು ರಫೀಕ್ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ: ಟ್ಯಾಕ್ಸ್ ಕಟ್ಟದ ವಿದೇಶಿ ಕಂಪನಿ-ಗ್ರಾ.ಪಂ ನಿಂದ ಹೋರಾಟಕ್ಕೆ ಗಡುವು!

A case has been registered for the disappearance of a young woman from Uppinangadi!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 171

You cannot copy content of this page