ಬೆಳ್ತಂಗಡಿ: Tulu Times | ವಿದ್ಯುತ್ ಆಘಾತಕ್ಕೆ ಒಳಗಾಗಿ ಪುತ್ತಿಲ ಗ್ರಾಮದ ಕೊಪ್ಪರಿಗೆ ಮಜಲು ಎಂಬಲ್ಲಿ ಚತ್ತೀಸ್ ಗಡ್ ಮೂಲದ ಕಾರ್ಮಿಕ ಶಿವ ಎಕ್ಕ (33) ಕಾರ್ಮಿಕ ಸಾವನ್ನಪ್ಪಿದ ಘಟನೆ ನಡೆದಿದೆ.
ವಿದ್ಯುತ್ ಆಘಾತಕ್ಕೆ ಸಿಲುಕಿದ್ದು ಹೇಗೆ..?
ಫೆ. 3 ರಂದು ರಫೀಕ್ ಎಂಬವರು ತಮ್ಮ ತಂದೆಗೆ ಸೇರಿದ ಜಾಗದಲ್ಲಿ ಹಾಳಾದ ಬೋರ್ ವೆಲ್ ಅನ್ನು ರಿಪೇರಿ ಮಾಡಿಸಲುಹಮೀದ್ ಎಂಬವರಿಗೆ ಸೇರಿದ ಬೋರ್ ವೆಲ್ ರಿಂಗ್ ವಾಹನವನ್ನು ಕರೆಸಿ ರಿಪೇರಿ ಮಾಡಿಸಿದಾಗ ಬೋರ್ ವೆಲ್ ಕೆಲಸ ಮುಗಿಸಿದ ಬಳಿಕ ಲಾರಿಯ ಡ್ರಿಲ್ ಮಾಡುವ ಯಂತ್ರವನ್ನು ಅದರ ಚಾಲಕ ಸಂಪತ್ ಕುಮಾರ್ ಜಾಗ್ರತೆ ವಹಿಸದ ನಿರ್ಲಕ್ಷ್ಯ ತನದಿಂದ ಕೆಳಗೆ ಇಳಿಸಿದ್ದರು.
ಹಾಗಾಗಿ, ವಿದ್ಯುತ್ ಲೈನಿಗೆ ತಾಗಿದೆ ಈ ಸಂದರ್ಭದಲ್ಲಿ ವಾಹನದ ಸಮೀಪ ನೀರಿನಲ್ಲಿ ನಿಂತಿದ್ದ ಕಾರ್ಮಿಕ ಶಿವ ಎಕ್ಕ ವಿದ್ಯುತ್ ಆಘಾತಕ್ಕೆ ಈಡಾಗಿ ಕೆಳಗೆ ಬಿದ್ದಿದ್ದು ಆತನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ ದಾರಿ ಮಧ್ಯೆ ಇವರು ಸಾವನ್ನಪ್ಪಿದ್ದಾರೆ. ಈ ಕುರಿತು ರಫೀಕ್ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಂಟ್ವಾಳ: ನನ್ನ ಮೇಲೆ ಮಾವ ಹಲ್ಲೆ ಜೀವಬೆದರಿಕೆ ನೀಡುತ್ತಿದ್ದಾರೆ..ಮಹಿಳೆ ದೂರು!
ಬಂಟ್ವಾಳ: ಅನುಚಿತವಾಗಿ ವರ್ತಿಸಿ ಮಾವ ನನ್ನ ಮೇಲೆ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ್ದಾರೆ ಎಂಬ ಆರೋಪದಡಿ ಮಹಿಳೆಯೊಬ್ಬರು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.
ರಾತ್ರಿಯ ವೇಳೆ 7.30 ಗಂಟೆಗೆ ಮಾವ ಅಕ್ರಮವಾಗಿ ಪ್ರವೇಶಿಸಿ ಅನುಚಿತವಾಗಿ ವರ್ತಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ತಿಳಿಸಿದ್ದಾಳೆ. ನಂತರ ಮಾವನಿಂದ ತಪ್ಪಿಸಿಕೊಂಡು ಆಚೆ ಬಂದಾಗ ತನ್ನ ಗಂಡನೂ ತಂದೆಯ ಪರವಾಗಿ ವರ್ತಿಸಿ, ಚಿಕಿತ್ಸೆ ಕೊಡಿಸಲು ನಿರಾಕರಿಸಿರುತ್ತಾರೆ ಎಂದು ಮಹಿಳೆ ದೂರಿದ್ದಾಳೆ. ಮಹಿಳೆಯ ತಂದೆ-ತಾಯಿ ಅವರನ್ನು ಸಂಪಾಜೆ ಸರಕಾರಿ ಆಸ್ಪತ್ರೆಗೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬ್ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸುಳ್ಯ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿ ತನಿಖೆ ನಡೆಸಲಾಗುತ್ತಿದೆ.
Belthangady: Worker dies due to electric shock- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











