ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದಾಳಿ ಮಾಡಲು ಸಂಚು!

ಕರ್ನಾಟಕ: Tulu Times | ಪ್ರಧಾನಿ ಮೇಲೆ ದಾಳಿಗೆ ಕಾಂಗ್ರೆಸ್ ಸಂಚು ಹೂಡಿದೆ ಎಂದು  ಲೋಕಸಭಾ ಸಚಿವಾಲಯದಿಂದ ಸ್ಪೋಟಕ ಹೇಳಿಕೆ ಹೊರಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದಾಳಿ ಮಾಡಲು ವಿರೋಧ ಪಕ್ಷಗಳು ಸಂಚು ರೂಪಿಸಿದ್ದವು ಎಂದು ಸ್ಫೋಟಕ ಹೇಳಿಕೆ ನೀಡಿದೆ.

ಸಾಮಾನ್ಯವಾಗಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ವೇಳೆ ಪ್ರಧಾನಿಗಳು ಸುದೀರ್ಘ ಭಾಷಣ ಮಾಡುತ್ತಾರೆ. ಆದರೆ, ಅತೀಂದ್ರಿಯ ಪರಿಸ್ಥಿತಿಯಿಂದಾಗಿ ಮತ್ತು ಪ್ರಧಾನಿಗಳ ಸುರಕ್ಷತೆಯ ದೃಷ್ಟಿಯಿಂದ, ಮೋದಿ ಅವರು ಮಾತನಾಡದೆಯೇ ‘ಧನ್ಯವಾದ ಪ್ರಸ್ತಾವನೆ’ಯನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು. ಸುಮಾರು 22 ವರ್ಷಗಳ ನಂತರ ಇಂತಹ ಘಟನೆ ನಡೆದಿದೆ.

ವಿರೋಧ ಪಕ್ಷದ ಮಹಿಳಾ ಸಂಸದರು ಒಟ್ಟಾಗಿ ಮೋದಿ ಅವರ ಕುರ್ಚಿಯನ್ನು ಮುತ್ತಿಗೆ ಹಾಕಿ ದಾಳಿ ಮಾಡಲು ಯೋಜಿಸಿದ್ದರು ಎಂದು ಸಚಿವಾಲಯ ತಿಳಿಸಿದೆ. ಈ ಪಿತೂರಿಯಲ್ಲಿ ಮಹಿಳಾ ಸದಸ್ಯರನ್ನು ‘ಗುರಾಣಿ’ಯಾಗಿ ಬಳಸಿಕೊಳ್ಳಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.

ಬಿಗ್ ಟಿಕೆಟ್ ಡ್ರಾನಲ್ಲಿ 49 ಕೋಟಿ ಗೆದ್ದ ಉಡುಪಿಯ ಹುಡುಗ.!

ಕರ್ನಾಟಕ: ಅಬುದಾಭಿ ಲೈವ್ ಡ್ರಾದಲ್ಲಿ ಉಡುಪಿಯ ಶಂತನು ಶೆಟ್ಟಿಗಾರ್ ₹49ಕೋಟಿ ಗೆದ್ದು (20 ಮಿಲಿಯನ್ ದಿರಮ್) ರು. ಮೊತ್ತದ ಲಾಟರಿ ಗೆದ್ದಿದ್ದಾರೆ.

ಮಸ್ಕತ್‌ನಲ್ಲಿ ಉದ್ಯೋಗದಲ್ಲಿರುವ ಶಂತನು ಶೆಟ್ಟಿಗಾರ್ ಅಬುದಾಭಿಯಲ್ಲಿ ನಡೆದ ಬಿಗ್ ಟಿಕೆಟ್ ಡ್ರಾನಲ್ಲಿ ಜ.20 ರಂದು ಬಿಗ್ ಟಿಕೆಟ್‌ನಲ್ಲಿ 305810 ಸಂಖ್ಯೆ ಲಾಟರಿ ಖರೀದಿಸಿದ್ದರು. ಫೆ.3ರಂದು ಡ್ರಾ ಫಲಿತಾಂಶ ಹೊರ ಬಿದ್ದಿದೆ. ಇದರಲ್ಲಿ ಅವರಿಗೆ ಅದೃಷ್ಟ ಖುಲಾಯಿಸಿದೆ. ಆದರೆ ಶಂತನು ತನ್ನ ಸ್ನೇಹಿತರೊಬ್ಬರೊಂದಿಗೆ ಈ ಟಿಕೆಟನ್ನು ಜಂಟಿಯಾಗಿ ಖರೀದಿಸಿದ್ದರು. ಅರ್ಧ ಹಣ ಅಂದರೆ ಸರಿ ಸುಮಾರು 24.5 ಕೋಟಿ ರು. ಹಣ ಅವರ ಗೆಳೆಯನಿಗೆ ಸಿಗಲಿದೆ ಎನ್ನಲಾಗಿದೆ.

ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ..ಶಂತನು ಸಂತಸ!

ಈ ಕುರಿತು ಶಂತನು ಮಾತನಾಡಿ, ‘2021ರಿಂದಲೂ ಬಿಗ್ ಟಿಕೆಟ್ ರಾಫಲ್‌ಗಳಲ್ಲಿ ಭಾಗವಹಿಸುತ್ತಿದ್ದೆ ಈ ಗೆಲುವು ತುಂಬಾ ಅನಿರೀಕ್ಷಿತವಾಗಿತ್ತು. ನನಗೆ ಸಿಕ್ಕಿರುವುದಕ್ಕೆ ಖುಷಿಯಾಗಿದ್ದು, ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹರ್ಷಿಸಿದ್ದಾರೆ. ಇದೇ ವೇಳೆ ಅವರು, ‘ಬಹುಮಾನದಿಂದ ಬಂಧ ಹಣವನ್ನು ಹೇಗೆ ಬಳಸಬೇಕೆಂದು ಇದುವರೆಗೆ ಯೋಚಿಸಿಲ್ಲ’ ಎಂದಿದ್ದಾರೆ. ಇದು ದೇಶದ ಪ್ರಮುಖ ಲಾಟರಿ ಡ್ರಾಗಳಲ್ಲಿ ಒಂದಾಗಿದೆ. 1992ರಲ್ಲಿ ಯುಎಇನಲ್ಲಿ ಬಿಗ್ ಟಿಕೆಟ್ ಪ್ರಾರಂಭವಾಯಿತು. ಮೊದಲು, 2 ಕೋಟಿ ರು.ನಿಂದ ಆರಂಭವಾಗಿತ್ತು. ಇದೀಗ 49 ಕೋಟಿ ರು.ಗೆ ಲಾಟರಿ ಏರಿಕೆಯಾಗಿದೆ.

Conspiracy to attack Prime Minister Narendra Modi!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page