ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಜಾತಕ ಹೇಳ್ತೀನಿ ಅಂತ ಹೇಳಿ ಯುವತಿಯ ಮೇಲೆ ಅರ್ಚಕ ಅತ್ಯಾಚಾರ..!

ಕರ್ನಾಟಕ: Tulu Times | ಜಾತಕ ಹೇಳ್ತೀನಿ ಅಂತ ಹೇಳಿ ಅರ್ಚಕನೊಬ್ಬ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಜಾತಕ ದೋಷದ ಹೆಸರಲ್ಲಿ ಯುವತಿಯನ್ನು ನಂಬಿಸಿ ಅರ್ಚಕ ಕೃಷ್ಣರಾವ್   ವಂಚಿಸಿದ್ದಾನೆ. ಧರ್ಮದ ಹೆಸರಿನಲ್ಲಿ ದಲಿತ  ಯುವತಿಯ ಮೇಲೆ ದೇವಸ್ಥಾನದ ಅರ್ಚಕನೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆ ನಡೆದದ್ದೇನು..?

2025ರ ನವೆಂಬರ್ 23 ರಿಂದ 2026ರ ಫೆಬ್ರವರಿ 2ರವರೆಗಿನ ಅವಧಿಯಲ್ಲಿ ಯುವತಿಯ ಮೇಲೆ ಅರ್ಚಕ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಕೃಷ್ಣರಾವ್ ಬಳಿ 23 ವರ್ಷದ ಯುವತಿ ಮದುವೆ ವಿಚಾರವಾಗಿ ಜಾತಕ ತೋರಿಸಲು ಹೋಗಿದ್ದ ವೇಳೆ, ಅರ್ಚಕ, ‘ನಿನ್ನ ಜಾತಕದಲ್ಲಿ ಗಂಭೀರ ದೋಷವಿದೆ, ಸರಿಪಡಿಸಲು ಪೂಜೆ ಅಥವಾ ತಡೆ ಹೊಡೆಯಬೇಕು’ ಎಂದು ಯುವತಿಯನ್ನು ನಂಬಿಸಿದ್ದಾನೆ. ಹೀಗಾಗಿ ದೇವಸ್ಥಾನದ ಆವರಣದಲ್ಲಿಯೇ ಅರ್ಚಕ ಯುವತಿಯ ಜೊತೆ ಅಸಹ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಅರ್ಚಕನ ಕಾಮದೃಷ್ಠಿತಾಳಲಾರದೆ ನೊಂದ ಯುವತಿ ಅಂತಿಮವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿ, ಬಣಕಲ್ ಪೊಲೀಸರಿಗೆ ದೂರು ನೀಡಿದ್ದಾಳೆ.  ಆರೋಪಿ ಅರ್ಚಕ ಕೃಷ್ಣರಾವ್‌ನನ್ನು ಬಂಧಿಸಲಾಗಿದೆ. ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಬಿಜೆಪಿ- ಜೆಡಿಎಸ್ ಅಹೋರಾತ್ರಿ ಧರಣಿ..ಅಬಕಾರಿ ಸಚಿವರ ರಾಜೀನಾಮೆಗೆ ಒತ್ತಾಯ!

ಹೆಜಮಾಡಿ ಟೋಲ್ ಬಳಿ ಕೇರಳ ವಿದ್ಯಾರ್ಥಿಗಳ ರಂಪಾಟ

ಉಡುಪಿ: ಉಡುಪಿಯ ಹೆಜಮಾಡಿ ಟೋಲ್ ಬಳಿ ಕೇರಳ ವಿದ್ಯಾರ್ಥಿಗಳು ಹುಚ್ಚಾಟ ಮೆರೆದಿದ್ದಾರೆ.

ಉಡುಪಿ ಕಡೆಗೆ ಕೇರಳದಿಂದ ಎರಡು ಬಸ್ ಗಳಲ್ಲಿ ವಿದ್ಯಾರ್ಥಿಗಳು ರಸ್ತೆಯಲ್ಲಿ ನಿಂತು ಪುಂಡಾಟ ಮೆರೆದು, ರಸ್ತೆಯಲ್ಲೇ ಪಟಾಕಿ ಸಿಡಿಸಿ ರಂಪಾಟ ಮಾಡಿದ್ದಾರೆ. ವಿದ್ಯಾರ್ಥಿಗಳು ರಸ್ತೆಯಲ್ಲಿ ಬಸ್ ನಿಲ್ಲಿಸಿ ಬೇಕಾಬಿಟ್ಟಿ ಕುಣಿದಿದ್ದಾರೆ. ವಿದ್ಯಾರ್ಥಿಗಳ ಈ ಹುಚ್ಚಾಟದ ವೀಡಿಯೋ ಮೊಬೈಲ್ ಗಳಲ್ಲಿ ಸರೆಯಾಗಿದೆ. ಸೂಕ್ತ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Priest rapes young woman after asking her to tell her horoscope..!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page