ಬ್ರೇಕಿಂಗ್ ನ್ಯೂಸ್
ಬೆಳ್ತಂಗಡಿ

ಬೆಳ್ತಂಗಡಿಯಲ್ಲಿ ಚಿರತೆ ಭಯ.ಸೋಶಿಯಲ್ ಮೀಡಿಯಾದಲ್ಲಿ ಚಿರತೆ ಬಂತು ಚಿರತೆ !

ಬೆಳ್ತಂಗಡಿ ; tulutimes | ಬೆಳ್ತಂಗಡಿ ತಾಲೂಕಿನಲ್ಲಿ ಕೆಲವೆಡೆ ಚಿರತೆ ದಾಳಿ ನಡೆಸಿರುವ ಸುದ್ದಿ ಇತ್ತೀಚೆಗೆ ಹೊರಬಂದಿತ್ತು.ಚಿರತೆ ದಾಳಿಯಿಂದ
ವ್ಯಕ್ತಿಯೋರ್ವರು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದಿರುವ ಘಟನೆ ನಡೆದಿತ್ತು.ಆ ನಂತರದಲ್ಲಿ ಒಂದಷ್ಟು ಜನ ಇನ್ನು ಕೆಲವೆಡೆ ಚಿರತೆ ನೋಡಿದ್ದೇವೆ.
ನಾಯಿ ಹಿಡಿದುಕೊಂಡು ಹೋದದ್ದನ್ನು ಕಂಡಿದ್ದೇವೆ ಎಂದಿದ್ದಾರೆ.

ಬೆಳ್ತಂಗಡಿ ಪಣ್ಣದ ಹೊರ ವಲಯದ ಕೆಲ್ಲಗುತ್ತು ಪರಿಸರದಲ್ಲಿ ಚಿರತೆ ಓಡಾಟ ನಡೆಸಿದ ಘಟನೆ ಫೆ.4 ರಂದು ನಡೆದಿತ್ತು. ಹಗಲಿನಲ್ಲಿ ಚಿರತೆ ಓಡಾಡಿದ ಹೆಜ್ಜೆ ಗುರುತು ಪತ್ತೆಯಾಗಿದ್ದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಚಿರತೆ ಓಡಾಟ ಕಂಡುಬಂದಿದ್ದು ಸಾರ್ವಜನಿಕರಿಗೆ ಎಚ್ಚರಿಕೆ ವಹಿಸುವಂತೆ,ಅನಗತ್ಯವಾಗಿ ರಾತ್ರಿ ಮತ್ತು ಹಗಲು ಮನೆಯಿಂದ ಹೊರಗೆ ಬರದಂತೆ ಮುಂಜಾಗ್ರತಾ ಕ್ರಮವಾಗಿ ಆಟೋ ರಿಕ್ಷಾದಲ್ಲಿ ಮೈಕ್ ಅನೌನ್ಸ್ ಮಾಡುವ ಮೂಲಕ ಪಟ್ಟಣ ಪಂಚಾಯತ್ ಸೂಚನೆ ನೀಡಿತ್ತು.

ರಾತ್ರಿ ಸುಮಾರು 8 ಗಂಟೆ ವೇಳೆಗೆ ಬೆಳ್ತಂಗಡಿ ವನ್ಯಜೀವಿ ಇಲಾಖೆ ಸಮೀಪ ಸುದೆಮುಗೇರು ಪರಿಸರದಲ್ಲಿ ಚಿರತೆ ದಾಳಿಗೆ ನಾಯಿ ಬಲಿಯಾದ ವರದಿ ಬಂದಿತ್ತು ಆ ಪ್ರದೇಶದ ಜನರು ನಾಯಿಯನ್ನು ಹೊತ್ತುಕೊಂಡು ಹೋಗುತ್ತಿದ್ದ ಚಿರತೆಯನ್ನು ಕೊಂಡು ಭಯಭೀತರಾಗಿದ್ದರು. ಮನೆಯ ಕಿಟಕಿಯಲ್ಲಿ ಚಿರತೆ ಓಡಾಟವನ್ನು ಗಮನಿಸಿದ ನಿವಾಸಿಗಳು ಮನೆಯ ಬಾಗಿಲನ್ನು ಮುಚ್ಚಿ ಆತಂಕದಿಂದ ಕುಳಿತುಕೊಂಡಿದ್ದರು.ರಸ್ತೆಯಲ್ಲೇ ಚಿರತೆ ಕಂಡದ್ದರಿಂದ ಜನರು ಭಯಭೀತರಾಗಿ ಹೊರಗೆ ಬರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅರಣ್ಯ ಇಲಾಖೆ ತಕ್ಷಣವೇ ಚಿರತೆಯನ್ನು ಸೆರೆಹಿಡಿಯುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಈ ಘಟನೆಗಳ ಮಧ್ಯೇ ಸಾಮಾಜಿಕ ಜಾಲತಾಣಗಳಲ್ಲಿ ಚಿರತೆ ಬಂದದ್ರ ಬಗ್ಗೆ ಬೇರೆ ಬೇರೆ ಸುದ್ದಿಗಳು ಹರಿದಾಡುತ್ತಿವೆ.ಎಲ್ಲಿಯೋ ಕಂಡ ಚಿರತೆಗೆ ಬೆಳ್ತಂಗಡಿಯಲ್ಲಿ ಕಂಡದ್ದು ಅನ್ನೋ ಟೈಟಲ್ ನಲ್ಲಿ ಓಡಾಡುತ್ತಿವೆ,

ಇನ್ನೂ ಕೆಲವೊಮ್ಮೆ ನಿರ್ಧಿಷ್ಟ ಸ್ಥಳಗಳನ್ನು ಹೆಸರಿಸದೆ ಊರಲ್ಲಿ ಚಿರತೆ ಬಂದಿದೆ ಮಕ್ಕಳನ್ನು ಪೋಷಕರು ಕರೆದುಕೊಂಡು ಬನ್ನಿ ಎಂಬಿತ್ಯಾದಿ ವಿಚಾರಗಳು ವಾಟ್ಸಾಪ್ ಗ್ರೂಪ್ ಗಳಲ್ಲಿ ಬರುತ್ತಿವೆ.ಇದರಿಂದ ಜನರು ಆತಂಕ ಪಡುವಂತಾಗಿದೆ.

ಕಂಡಿರುವ ಚಿರತೆಗೆ ಅರಣ್ಯ ಇಲಾಖೆ ಪರಿಹಾರ ಕೊಟ್ಟರೆ ಜನರಿಗೆ ವಿಶ್ವಾಸ ಬರುತ್ತದೆ.ಆದೇ ರೀತಿ ಬಂದ ಎಲ್ಲಾ ಸುದ್ದಿಗಳನ್ನು ವಾಟ್ಸಾಪ್ ನಲ್ಲಿ ಶೇರ್ ಮಾಡುವ ಮುಂಚೆ ಹಲವು ಬಾರಿ ಜನರು ಯೋಚಿಸುವುದು ಅಗತ್ಯವಾಗಿದೆ.

 

leopard-fear-in-belthangady-leopard-appeared-on-social-media-leopard- tutlutimes

 

Read more ; ಹೆಜಮಾಡಿ ಟೋಲ್ ಬಳಿ ಕೇರಳ ವಿದ್ಯಾರ್ಥಿಗಳ ರಂಪಾಟ

ವೀಡೀಯೋ ಸುದ್ದಿಗಳಿಗಾಗಿ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 12

You cannot copy content of this page