ಬ್ರೇಕಿಂಗ್ ನ್ಯೂಸ್
ಕರ್ನಾಟಕಮಂಗಳೂರು

ಮಂಗಳೂರು: ಮೆದುಳಿನ ರಕ್ತಸ್ರಾವದಿಂದ ಹೆಡ್ ಕಾನ್ಸ್ ಟೇಬಲ್ ಸಾವು

ಮಂಗಳೂರು: Tulu Times | ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ಹೆಡ್ ಕಾನ್ಸ್ ಟೇಬಲ್  ಹಾವೇರಿ ಮೂಲದ ಮಾರುತಿ ಲಮಾಣಿ(36) ನಿಧನರಾಗಿದ್ದಾರೆ. ಮಂಗಳೂರು ನಗರ ಸಶಸ್ತ್ರ ದಳದಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿದ್ದ ಇವರು ಹೈವೇ ಪೆಟ್ರೋಲಿಂಗ್ ಮಾಡುವ ಕಾರಿನಲ್ಲಿ ಡ್ರೈವರ್ ಆಗಿ ಕರ್ತವ್ಯದಲ್ಲಿದ್ದರು.

ಮಾರುತಿ ಸಿಎಆರ್ ಯುನಿಟ್ ನಲ್ಲಿ 9 ವರ್ಷಗಳಿಂದ ಕೆಲಸ ಮಾಡುತ್ತಿದ್ದು ಹೆಡ್ ಕಾನ್ಸ್ ಟೇಬಲ್ ಆಗಿ ಭಡ್ತಿ ಪಡೆದಿದ್ದರು. ಮೃತ ಮಾರುತಿ, ಭಾನುವಾರ ಬೆಳಗ್ಗೆ ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದರು. ಇವರ ಪತ್ನಿಯೂ ಕದ್ರಿ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ.  ಮಾರುತಿ ಲಮಾಣಿ ಮನೆಗೆ ಬಂದು ಮಲಗಿದ್ದರು ಈ ಸಂದರ್ಭದಲ್ಲಿ ಮಾರುತಿ ಅಸ್ವಸ್ಥರಾಗಿದ್ದಾರೆ. ಬಳಿಕ ಸ್ಥಳೀಯರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಾರುತಿ ಲಮಾಣಿ ಸಾವನಪ್ಪಿದ್ದಾರೆ ಎನ್ನಲಾಗಿದೆ.

ಮೂಡಿಗೆರೆಯಲ್ಲಿ ಅಂಬ್ಯುಲೆನ್ಸ್‌ ನಲ್ಲೇ ಗಂಡು ಮಗು ಜನನ

ಮೂಡಿಗೆರೆ: ಅಸ್ಸಾಂ ಮೂಲದ ಮಹಿಳೆಗೆ ಹೆರಿಗೆ ನೋವು ಆರಂಭವಾದ ಹಿನ್ನೆಲೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಗಂಡು ಮಗುವಿಗೆ ಅಂಬ್ಯುಲೆನ್ಸ್‌ ನಲ್ಲೇ ಜನ್ಮ ನೀಡಿದ್ದಾರೆ.

ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ತೀವ್ರ ಹೆರಿಗೆ ನೋವು ಕಂಡು ಬಂದ ಹಿನ್ನೆಲೆ, ಫೆ.1ರಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಂಬುಲೆನ್ಸ್‌ ಚಾಲಕ ಆರೀಫ್ ಹೆರಿಗೆ ನೋವಿನಿಂದ ಬಳಲುತ್ತಿದ್ದಾಗ ಸಮಯಪ್ರಜ್ಞೆ ತೋರಿ, ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಇದೀಗ ತಾಯಿ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಈ ಬಗ್ಗೆ ಆಂಬ್ಯುಲೆನ್ಸ್‌ ಚಾಲಕ ಆರೀಫ್ ಮಾತನಾಡಿ, ದಿನದ 24 ಗಂಟೆಯೂ ಸಾರ್ವಜನಿಕರಿಗಾಗಿ ನನ್ನ ಆಂಬ್ಯುಲೆನ್ಸ್ ಮೀಸಲಿಟ್ಟಿದ್ದೇನೆ. ಕಳೆದ ಹತ್ತು ವರ್ಷದಿಂದ ಆಂಬ್ಯುಲೆನ್ಸ್ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸುತ್ತಿದ್ದೀನಿ. ನನ್ನ ಆಂಬ್ಯುಲೆನ್ಸ್ ಒಳಗಡೆಯೇ 18 ಮಕ್ಕಳ ಹೆರಿಗೆಯಾಗಿದ್ದು, ಅದರಲ್ಲಿ 10 ಮಕ್ಕಳ ಹೆರಿಗೆ ನಾನೇ ಮಾಡಿಸಿದ್ದೇನೆ. ಯಾರ ಸಹಾಯವೂ ಇಲ್ಲದೇ ನಾನೇ ಹತ್ತು ಮಕ್ಕಳ ಹೆರಿಗೆಯನ್ನು ಮಾಡಿಸಿದ್ದು, ಇಂದು ಅದೇ ರೀತಿಯೂ ಈ ಹೆರಿಗೆಯನ್ನು ಮಾಡಿಸಿದೆ. ನಂತರ ತಾಯಿ ಹಾಗೂ ಮಗುವನ್ನು ಸುರಕ್ಷಿತವಾಗಿ ಮೂಡಿಗೆರೆ, ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದರು.

Mangaluru: Head constable dies of brain hemorrhage- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 158

You cannot copy content of this page