ಬ್ರೇಕಿಂಗ್ ನ್ಯೂಸ್
ಕರ್ನಾಟಕ

ವಿಂಟೇಜ್ ಲುಕ್‌ನಲ್ಲಿ ಕಯಾದು ಲೋಹರ್…’ಪಳ್ಳಚಟ್ಟಂಬಿ’ಯಲ್ಲಿ ಟೋವಿನ್ ಥಾಮನ್ ಗೆ ನಾಯಕಿ

ಸಿನಿಮಾ: Tulu Times | ಮಲಯಾಳಂ‌ ನಟ ಟೋವಿನೋ ಥಾಮಸ್ ನಟಿಸುತ್ತಿರುವ ಬಹು ನಿರೀಕ್ಷಿತ ಪಳ್ಳಿಚಟ್ಟಂಬಿ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ನಾಯಕಿ ಕಯಾದು ಲೋಹರ್ ಫಸ್ಟ್ ಲುಕ್ ಅನಾವರಣ ಮಾಡಲಾಗಿದ್ದು, ವಿಂಟೇಜ್ ಲುಕ್ ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಡಿಜೋ ಜೋಸ್ ಆಂಟೋನಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ವಿಜಯರಾಘವನ್, ಸುಧೀರ್ ಕರಮನ, ಬಾಬುರಾಜ್, ವಿನೋದ್ ಕೆದಮಂಗಲಂ, ಪ್ರಶಾಂತ್ ಅಲೆಕ್ಸಾಂಡರ್ ತಾರಾಗಣದಲ್ಲಿದ್ದಾರೆ. 1950-60ರ ದಶಕದ ಸುತ್ತ ಕಥೆಯನ್ನು ಎಣೆಯಲಾಗಿದೆ. ಚಿತ್ರದ ಛಾಯಾಗ್ರಹಣವನ್ನು ಟಿಜೊ ಟಾಮಿ ನಿರ್ವಹಿಸಿದರೆ, ಜೇಕ್ಸ್ ಬಿಜಾಯ್ ಸಂಗೀತ ಸಂಯೋಜಿಸಿದ್ದಾರೆ. ಸಂಕಲನವನ್ನು ಶ್ರೀಜಿತ್ ಸಾರಂಗ್ ಮತ್ತು ನಿರ್ಮಾಣ ವಿನ್ಯಾಸವನ್ನು ದಿಲೀಪ್ ನಾಥ್ ನಿರ್ವಹಿಸಿದ್ದಾರೆ. ಚಿತ್ರಕಥೆಯನ್ನು ಎಸ್ ಸುರೇಶ್ ಬಾಬು ಬರೆದಿದ್ದಾರೆ.

ಪಳ್ಳಚಟ್ಟಂಬಿ ಸಿನಿಮಾ ವರ್ಲ್ಡ್ ವೈಡ್ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ನೌಫಲ್ ಮತ್ತು ಬ್ರಿಜೀಶ್ ನಿರ್ಮಿಸಿದ್ದಾರೆ, ಜೊತೆಗೆ ಸಿ ಕ್ಯೂಬ್ ಬ್ರದರ್ಸ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿಯಲ್ಲಿ ಚಾಣುಕ್ಯ ಚೈತನ್ಯ ಚರಣ್ ನಿರ್ಮಿಸಿದ್ದಾರೆ. ಪಳ್ಳಚಟ್ಟಂಬಿ ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಏಪ್ರಿಲ್ 9 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ರಾಷ್ಟ್ರೀಯ ಸ್ಪೀಡ್ ಸ್ಕೇಟಿಂಗ್-ಬ್ರಹ್ಮಾವರ ಬಾಲಕಿಯ ಚಿನ್ನದ ಬೇಟೆ

ಜೈ” ಚಿತ್ರ ಜೀ5ನಲ್ಲಿ ಬಿಡುಗಡೆ: ಜೀ5ನ ಮೊದಲ‌ ತುಳು ಚಿತ್ರ

ಭಾರತದ ಅತಿ ಮುಖ್ಯ ಡಿಜಿಟಲ್ ವೇದಿಕೆಗಳಲ್ಲಿ ಒಂದಾದ ಜೀ5 ಇದೀಗ “ಜೈ” ಎಂಬ ಕನ್ನಡ-ತುಳು ಚಿತ್ರವನ್ನು ಫೆಬ್ರವರಿ 6ರಿಂದ ಪ್ರಸಾರ ಮಾಡಲಿದೆ.

ತುಳುನಾಡಿನ ಸಾಮಾಜಿಕ -ಸಾಂಸ್ಕೃತಿಕ ಛಾಯೆಯನ್ನು ಹೊಂದಿರುವ “ಜೈ” ಚಿತ್ರವನ್ನು ರೂಪೇಶ್ ಶೆಟ್ಟಿ ನಿರ್ದೇಶನ ಮಾಡಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುತ್ತಾರೆ. ಇದೊಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಇದು ಸತ್ಯ ಎಂಬ ಸಿಂಹಬೆಟ್ಟು ಹಳ್ಳಿಯ ವ್ಯಕ್ತಿಯ ಕಥೆಯಾಗಿರುತ್ತದೆ. ತನ್ನ ಸಮುದಾಯದ ಸಮಸ್ಯೆಗಳನ್ನು ಎತ್ತಿ ಹಿಡಿಯವ ಅವನು,‌ಅವುಗಳನ್ನು ಬಗೆಹರಿಸಲು ಮಾಡುವ‌ ಹೋರಾಟ,‌ ಮುಂತಾದವುಗಳನ್ನು ಚಿತ್ರ ಬಿಚ್ಚಿ ಇಡಲಿದೆ.

ಚಿತ್ರದಲ್ಲಿ ರೂಪೇಶ್ ಶೆಟ್ಟಿಯೊಡನೆ,‌ರಾಜ್ ದೀಪಕ್ ಶೆಟ್ಟಿ, ಅದ್ವಿತಿ ಶೆಟ್ಟಿ, ಅರವಿಂದ್ ಬೋಲಾರ್, ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಭೋಜರಾಜ್ ವಮಂಜೂರ್ ಮುಂತಾದವರು ನಟಿಸಿರುತ್ತಾರೆ. ಚಿತ್ರದಲ್ಲಿ ಖ್ಯಾತ ಬಾಲಿವುಡ್ ನಟ ಸುನೀಲ್ ಶೆಟ್ಟಿ ನಟಿಸಿರುವುದು
ಹೈಲೈಟ್ ಆಗಿದೆ. “ಜೈ” ಚಿತ್ರ ಸುನೀಲ್ ಶೆಟ್ಟಿಯವರ ಮೊದಲ ತುಳು ಚಿತ್ರವಾಗಿದೆ.

ಇದನ್ನೂ ಓದಿ: ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಕೇಂದ್ರದ ಬಜೆಟ್: ಬಿ.ಎಸ್.ಯಡಿಯೂರಪ್ಪ

ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ಚಿತ್ರಿಸಿರುವ “ಜೈ” ಚಿತ್ರಮಂದಿರದಲ್ಲಿ ಭರ್ಜರಿ ಪ್ರದರ್ಶನಗಳನ್ನು ಕಂಡು ಎಲ್ಲರ ಮನೆ ಮಾತಾಗಿದೆ. ಭಾಷೆಯ ಗೆರೆಯನ್ನು ದಾಟಿ ಎಲ್ಲರ ಕಣ್ಮನ ಸೆಳೆದಿರುವ ಈ ಚಿತ್ರವು ಇದೀಗ ಜೀ5ನಲ್ಲಿ ಬಿಡುಗಡೆ ಆಗುತ್ತಿದೆ.

ಚಿತ್ರದ ನಿರ್ದೇಶಕ, ನಾಯಕ ನಟ ರೂಪೇಶ್ ಶೆಟ್ಟಿ ಮಾತನಾಡಿ, “ಈ ಚಿತ್ರವು ನಮ್ಮ ಮಣ್ಣಿನ ಕಥೆಯನ್ನು ಹೇಳುತ್ತದೆ. ದಕ್ಷಿಣ ಕರ್ನಾಟಕದ ಸಾಹಿತ್ಯ, ಸಂಸ್ಕೃತಿ ಮುಂತಾದವುಗಳನ್ನು ಚಿತ್ರ ಒಳಗೊಂಡಿದೆ. ಇದು ನನ್ನ ಬದುಕಿಗೆ ಬಹಳ ಹತ್ತಿರವಾದ ಕಥೆ ಆಗಿದ್ದು, ಇದು ಕನ್ನಡ ಹಾಗೂ ತುಳುವಿನಲ್ಲಿ ಜೀ5ನಲ್ಲಿ ಬಿಡುಗಡೆ ಆಗುತ್ತಿರುವುದು ಮತ್ತೊಂದು ಪ್ರಮುಖ ಸಂಗತಿಯಾಗಿದೆ.

ಚಿತ್ರದ ಬಗ್ಗೆ ಮಾತನಾಡಿದ ಬಾಲಿವುಡ್ ನಟ ಸುನೀಲ್ ಶೆಟ್ಟಿ,‌ “ಈ ಚಿತ್ರವನ್ನು ಒಪ್ಪಿಕೊಳ್ಳಲು ನನಗೆ ಪ್ರೇರಣೆಯಾಗಿದ್ದು ಈ ಚಿತ್ರ ತಂಡದ ಪ್ರಾಮಾಣಿಕತೆ ಮತ್ತು ಈ‌ ಕಥೆಗಿರುವ ಶಕ್ತಿ. ತುಳು ಸಿನಿಮಾ, ಸಂಸ್ಕೃತಿಯನ್ನು ಮೆರೆಯುತ್ತದೆ. ಇಂತಹ ಒಂದು ವಿಶೇಷವಾದ ಚಿತ್ರವು ಜೀ5ನಲ್ಲಿ ಬಿಡುಗಡೆ ಆಗುವುದರಿಂದ ಭಾಷೆಯ ಗೆರೆಯನ್ನು ದಾಟಿ ಎಲ್ಲರ ಗಮನ ಸೆಳೆಯಲಿದೆ ಎಂಬುದು ಮತ್ತೊಂದು ಪ್ರಮುಖ ಅಂಶವಾಗಿದೆ” ಎಂದರು.
“ಜೈ” ಚಿತ್ರವು ಜೀ5ನಲ್ಲಿ ಫೆಬ್ರವರಿ 6ರಿಂದ ಪ್ರಸಾರ ಆಗಲಿದೆ.

ಇದನ್ನೂ ಓದಿ: ಟ್ಯಾಕ್ಸ್ ಕಟ್ಟದ ವಿದೇಶಿ ಕಂಪನಿ-ಗ್ರಾ.ಪಂ ನಿಂದ ಹೋರಾಟಕ್ಕೆ ಗಡುವು!

Kayadu Lohar in a vintage look…Tovin Thaman’s heroine in ‘Pallachattambi’- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page