ತುಳುಟೈಮ್ಸ್ | ಚೆನ್ನೈನಲ್ಲಿ ನಡೆದ ಎಸ್ ಎಸ್ ಎಫ್ ಐ 25ನೇ ರಾಷ್ಟ್ರೀಯ ಮಟ್ಟದ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ,ಅದ್ವಿತ ಗುರುಪ್ರಸಾದ್ ಶೆಟ್ಟಿಗಾರ್ ಚಿನ್ನದ ಪದಕ ಗಳಿಸಿದ್ದಾರೆ.
4 ವರ್ಷ ಒಳಗಿನ ಮಕ್ಕಳ ಸ್ಪರ್ಧೆಯಲ್ಲಿ 400 ಮೀಟರ್, ಒಂದು ಸಾವಿರ ಮೀಟರ್ ಸ್ಪರ್ದೆಯಲ್ಲಿ ಬ್ರಹ್ಮಾವರದ ಅದ್ವಿತ ಗುರುಪ್ರಸಾದ್ ಶೆಟ್ಟಿಗಾರ್, ಚಿನ್ನದ ಪದಕ ಗಳಿಸಿದ್ದಾರೆ.
ಈ ಮೂಲಕ ಮಲೇಷಿಯಾದಲ್ಲಿ ನಡೆಯಲಿರುವ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.
ಅದ್ವಿತಾ ತಂದೆ ಗುರುಪ್ರಸಾದ್ ಜಿ ಶೆಟ್ಟಿಗಾರ್ ತಾಯಿ ಸಂಧ್ಯಾ ಜಿ ಶೆಟ್ಟಿಗಾರ್, ಅಣ್ಣ ಹಾರ್ದಿಕ ಶೆಟ್ಟಿಗಾರ್ ಅದ್ವಿತಾ ಆಸಕ್ತಿಗೆ ಮೊದಲಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದ್ದರು.ಆದ್ವಿತಾ ಮೂರುವರ್ಷದಿಂದಲೇ ಸ್ಕೇಟಿಂಗ್ ತರಬೇತಿಯನ್ನು ಪಡೀತಿದ್ದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ ಮಂಗಳೂರಿನ ತರಬೇತುದಾರ ಮಹೇಶ್ ಕುಮಾರ್ ಅವರ ಗರಡಿಯಲ್ಲಿ ಅದ್ವಿತ ಗುರುಪ್ರಸಾದ್ ತರಬೇತಿಯನ್ನು ಪಡೆಯುತ್ತಿದ್ದಾರೆ.
4 ವರ್ಷದೊಳಗಿನ ಮಕ್ಕಳ ಸ್ಪರ್ಧೆಯಲ್ಲಿ 400 ಮೀಟರ್ ಮತ್ತು 1000 ಮೀಟರ್ ಓಟದಲ್ಲಿ ತಮಿಳುನಾಡಿನ ಸ್ಪರ್ದಿಯನ್ನು ಹಿಂದಿಕ್ಕುವ ಮೂಲಕ ಚಿನ್ನದ ಪದಕಗಳನ್ನು ಅದ್ವಿತ ಮುಡಿಗೇರಿಸಿಕೊಂಡಿದ್ದಾರೆ.
ಅದ್ವಿತ 2025 ರಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಚಾಂಪಿಯನ್ ಶಿಪ್ ನಲ್ಲೂ ಪದಕ ಗಳಿಸಿರುತ್ತಾರೆ.
National Speed Skating - Brahmavar girl's hunt for gold tulutimesRead more :ಟ್ಯಾಕ್ಸ್ ಕಟ್ಟದ ವಿದೇಶಿ ಕಂಪನಿ-ಗ್ರಾ.ಪಂ ನಿಂದ ಹೋರಾಟಕ್ಕೆ ಗಡುವು!
ವೀಡಿಯೋ ಸುದ್ದಿಗಳಿಗಾಗಿ ನಮ್ಯೂ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ : https://www.youtube.com/@tulutimess











