ತುಳುಟೈಮ್ಸ್ | ವಿದೇಶಿ ಕಂಪನಿಯೊಂದು ತೆರಿಗೆ ಪಾವತಿಸದೆ ವಂಚಿಸಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಬೆಂಗಳೂರು ಹೊರವಲಯದಲ್ಲಿ ಪ್ರತಿಷ್ಠಿತ ಕಂಪನಿ ಪಾಕ್ಸ್ ಕಾನ್ ಕಾರ್ಯನಿರ್ವಹಿಸುತ್ತಿದೆ.
ಸುಮಾರು 300 ಎಕರೆ ಜಾಗದಲ್ಲಿ ಈ ಕಂಪನಿ ಕಾರ್ಯನಿರ್ವಹಿಸುತ್ತಿದೆ.ಆದರೆ ಇದೀಗ ತೆರಿಗೆ ವಂಚಿಸಿದ ಆರೋಪ ಕೇಳಿಬರುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ವಿಶ್ವನಾಥಪುರ ಮತ್ತು ಕೊಯಿರ ಗ್ರಾಮಕ್ಕೆ ಸಂಬಂಧಪಟ್ಟ ಜಾಗದಲ್ಲಿ ಪಾಕ್ಸ್ ಕಾನ್ ಕಂಪನಿ ಕಾರ್ಯನಿರ್ವಹಿಸುತ್ತಿದೆ.
ಆದ್ರೆ ಈ ಎರಡು ಪಂಚಾಯತ್ ಗಳಿಗೆ ಸೇರಿ 35 ಲಕ್ಷಕ್ಕೂ ಹೆಚ್ಚು ತೆರಿಗೆ ಕಟ್ಟಿಲ್ಲ.ಹೀಗಾಗಿ ಗ್ರಾ.ಪಂ ಸದಸ್ಯರು ರೊಚ್ಚಿಗೆದ್ದಿದ್ದಾರೆ.
ತೆರಿಗೆ ಹಣ ಕಟ್ಟುವಂತೆ ಸಾಕಷ್ಟು ಬಾರಿ ನೋಟೀಸ್ ನೀಡಿದ್ದರು ವಿದೇಶಿ ಕಂಪನಿ ಕ್ಯಾರೇ ಅಂತಿಲ್ಲ.
ಪೆ.7 ರ ಒಳಗೆ ಟ್ಯಾಕ್ಸ್ ಕಟ್ಟದಿದ್ರೆ ಉಗ್ರ ಹೋರಾಟ ನಡೆಸುವುದಾಗಿ ಗ್ರಾ.ಪಂ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ಕೆಐಎಡಿಬಿಯ ಮೂನ್ನೂರು ಎಕರೆ ಪ್ರದೇಶದಲ್ಲಿ 40,000 ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ.
ಎರಡು ವರ್ಷದಿಂದ ಎನ್.ಓ.ಸಿ ಪಡೆದೇ ಇಲ್ಲ,ಪೆಬ್ರವರಿ 7 ರೊಳಗೆ ಗಡುವು ನೀಡಿರುವ ಪಂಚಾಯತ್ ಸದಸ್ಯರು ಟ್ಯಾಕ್ಸ್ ಕಟ್ಟದೇ ಇದ್ದಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಅನ್ನೋ ಕುತೂಹಲಾನೂ ಇದೆ.
Deadline for the fight against foreign companies that do not pay taxes - Gram Panchayat!tulu timesಇದನ್ನೂ ಓದಿ : ಮಂಗಳೂರಿನಲ್ಲಿ ಪ್ರವಾಸಿ ಬಸ್ ಆರಂಭಕ್ಕೆ ಜನರ ಆಗ್ರಹ
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ : https://www.youtube.com/@tulutimess











