ಮಂಗಳೂರು: Tulu Times | ಮಂಗಳೂರಿನಲ್ಲಿ “ಪ್ರವಾಸಿ ಬಸ್’ ಮತ್ತೆ ಆರಂಭಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. 2016ರಲ್ಲಿ ಪ್ರವಾಸಿ ಬಸ್ ಸೇವೆ ಆರಂಭಿಸಲಾಗಿತ್ತು. ಕೆಲವೇ ಸಮಯದಲ್ಲಿ ಸ್ಥಗಿತಗೊಂಡು ಮತ್ತೆ ಆರಂಭವಾಗಿಲ್ಲ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಮಂಗಳೂರು ನಗರ ಕೇಂದ್ರಿತವಾಗಿ 2016ರಲ್ಲಿ ಪ್ರವಾಸಿ ಬಸ್ ಸೇವೆ ಆರಂಭಿಸಲಾಗಿತ್ತು.ಪ್ರವಾಸೋದ್ಯಮ ಕ್ಷೇತ್ರ ಉತ್ತೇಜಿಸುವ ಉದ್ದೇಶದಿಂದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಇತ್ತೀಚೆಗೆ ಕಾರ್ಯಕ್ರಮವೂ ನಡೆದಿತ್ತು. ಇಷ್ಟೆಲ್ಲಾ ಚಟುವಟಿಕೆಗಳು ನಡೆಯುತ್ತಿರುವಾಗ ಮತ್ತೆ ಪ್ರವಾಸಿ ಬಸ್ ಕೂಡ ಆರಂಭವಾಗಲಿ ಎನ್ನುವುದು ಇಲ್ಲಿನ ಜನರ ಆಶಯ.
2016ರಲ್ಲಿ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಅವರು ಕೆಎಸ್‌ಟಿಡಿಸಿ ಬಸ್‌ಗೆ ಚಾಲನೆ ನೀಡಿದ್ದರು. ಕೆಲವು ತಿಂಗಳು ಆಗುವಷ್ಟರಲ್ಲಿ ಬಸ್‌ನ ಕೆಲವೊಂದು ಬಿಡಿ ಭಾಗಗಳು ಹದಗೆಟ್ಟಿತ್ತು. ಇದೇ ಕಾರಣಕ್ಕೆ ಕೆಲ ದಿನಗಳ ಬಳಿಕ ಈ ಬಸ್ ಅನ್ನು ಬೆಂಗಳೂರಿಗೆ ಸಾಗಿಸಲಾಗಿತ್ತು. ಅದಾದ ಬಳಿಕ ಈ ಬಸ್ ಮಂಗಳೂರಿಗೆ ಬರಲೇ ಇಲ್ಲ. ಪ್ರವಾಸಿಗರಿಗೆ ಸ್ವಂತ ವಾಹನ ಇಲ್ಲದಿದ್ದರೆ ಸುತ್ತಮುತ್ತಲಿನ ಪ್ರೇಕ್ಷಣೀಯ ಜಾಗಗಳನ್ನು ವೀಕ್ಷಿಸಬೇಕಾದರೆ ಹೆಚ್ಚಿನ ಹಣ ನೀಡಿ ಬಾಡಿಗೆ ವಾಹನಗಳಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಮೈಸೂರಿನಲ್ಲಿಯೂ ಒಂದು ದಿನದ ಪ್ರವಾಸಿ ಬಸ್ ಸೇವೆ ಕಾರ್ಯಾಚರಿಸುತ್ತಿದೆ. ಒಂದು ಬಸ್‌ನಲ್ಲಿ ಒಂದು ದಿನದಲ್ಲಿ ಕುಟುಂಬದ ಸದಸ್ಯರು ಒಟ್ಟಾಗಿ ಸುತ್ತಲಿನ ಪ್ರೇಕ್ಷಣೀಯ ಸ್ಥಳ ವೀಕ್ಷಿಸಲು ಇದರಿಂದ ನೆರವಾಗುತ್ತದೆ.
ಮಂಗಳೂರಿನಲ್ಲಿ ಈ ಹಿಂದೆ ಇದ್ದ ಕೆಎಸ್‌ಟಿಡಿಸಿ ಪ್ರವಾಸಿ ಬಸ್ ಲಾಲ್‌ಬಾಗ್‌ನಿಂದ ಹೊರಟು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ಕದ್ರಿ ಕ್ಷೇತ್ರ, ಶ್ರೀ ಮಂಗಳಾದೇವಿ ದೇವಸ್ಥಾನ, ಸಂತ ಅಲೋಶಿಯಸ್ ಚಾಪೆಲ್, ಪಿಲಿಕುಳ ನಿಸರ್ಗಧಾಮ, ಜೈವಿಕ ಉದ್ಯಾನವನ, ತಣ್ಣೀರುಬಾವಿ ಟ್ರೀಪಾರ್ಕ್, ಇಲ್ಲಿನ ಕಡಲತೀರಕ್ಕೆ ಆಗಮಿಸಿ ಮತ್ತೆ ಲಾಲ್‌ಬಾಗ್‌ಗೆ ತೆರಳುತ್ತಿತ್ತು. ವಯಸ್ಕರಿಗೆ 190 ರೂ. ಮತ್ತು ವಿದ್ಯಾರ್ಥಿಗಳಿಗೆ ಶೇ.10 ರಿಯಾಯಿತಿ ನೀಡಲಾಗಿತ್ತು.
ಜನಹಿತದ ಕೇಂದ್ರ ಬಜೆಟ್: ಆರ್.ಅಶೋಕ್
ಬೆಂಗಳೂರು: ಇಂದು ಮಂಡಿಸಿದ ಕೇಂದ್ರ ಬಜೆಟ್ ಜನಹಿತದಿಂದ ಕೂಡಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಅವರು ವಿಶ್ಲೇಷಿಸಿದರು. 2026-27ನೇ ಸಾಲಿನ ಕೇಂದ್ರದ ಮುಂಗಡ ಪತ್ರವನ್ನು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ವೀಕ್ಷಿಸಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಕೈಗಾರಿಕೆಗೆ ವಿಶೇಷ ಒತ್ತು ಕೊಟ್ಟಿದ್ದಾರೆ. ವಿದ್ಯಾಭ್ಯಾಸಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ ಎಂದು ವಿವರಿಸಿದರು.
ಮಹಿಳೆಯರು, ಹೆಣ್ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರತಿ ಜಿಲ್ಲೆಯಲ್ಲಿ ಹಾಸ್ಟೆಲ್ ನಿರ್ಮಿಸಲು ಕೇಂದ್ರ ಸರಕಾರವೇ ಮುಂದೆ ಬಂದಿದೆ ಇದು ಮೊದಲ ಬಾರಿ ಎಂಬ ಅನಿಸಿಕೆ ತಮ್ಮದು ಎಂದರು. ಕರ್ನಾಟಕವು ಗಂಧದ ನಾಡು. ಇದೇ ಮೊದಲ ಬಾರಿಗೆ ಗಂಧ ಬೆಳೆಯಲು, ಸಂರಕ್ಷಿಸಲು ಮತ್ತು ಹೊಸದಾಗಿ ಕೆಲವು ಪ್ರದೇಶಗಳಲ್ಲಿ ಗಂಧ ಬೆಳೆಯಲು ಉತ್ತೇಜನವನ್ನು ನಿರ್ಮಲಾ ಸೀತಾರಾಮನ್ ಅವರು ಮಾಡಿದ್ದಾರೆ. ಹಲವು ಜಿಲ್ಲೆಗಳಲ್ಲಿರುವ ತೆಂಗಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಆಗಲು ಉತ್ತೇಜನ ಕೊಡುವ ಕೆಲಸ ಮಾಡಿದ್ದಾರೆ. ನಮ್ಮಲ್ಲಿ ಬಹಳ ಪ್ರವಾಸೋದ್ಯಮ ಅವಕಾಶವಿದೆ. ಮೊದಲ ಬಾರಿಗೆ ಟೂರಿಸ್ಟ್ ಗೈಡ್‍ಗಳಿಗೆ ತರಬೇತಿ ಕೊಡುವ ಶಾಲೆ ಆರಂಭಿಸುತ್ತಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರಕ್ಕೂ ಹೆಚ್ಚು ಒತ್ತು ಕೊಟ್ಟಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
People demand the start of tourist buses in Mangalore- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











