ಬ್ರೇಕಿಂಗ್ ನ್ಯೂಸ್
ಕರಾವಳಿಸುಳ್ಯ

Sullia: ಅತ್ಯಾಪರೂಪದ ಖಾಯಿಲೆಯೊಂದಿಗೆ ಹೋರಾಡಿದ ಚಾಂದಿನಿ ಇನ್ನಿಲ್ಲ

Sullia: ಅತ್ಯಾಪರೂಪದ ಕಾಯಿಲೆ (ಹೈಪರ್-IgE ಸಿಂಡ್ರೋಮ್‌)ಯಿಂದ ಬಳಲುತ್ತಿದ್ದ ಗಾಂಧಿನಗರ ನಿವಾಸಿ ಚಾಂದಿನಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಕಳೆದ 35 ವರ್ಷಗಳಿಂದ ಚಾಂದಿನಿ ಈ ಕಾಯಿಲೆಯಿಂದ ಬಳಲುತ್ತಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸಿ ಆತ್ಮಸ್ಥೈರ್ಯದ ಬದುಕು ನಡೆಸಿ ವಿಧಿವಶರಾಗಿದ್ದಾರೆ.

ಚಾಂದಿನಿಯವರನ್ನು ಕಾಡಿದ್ದ ಕಾಯಿಲೆ ಏನು ಎಂಬುದನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆಗೆ ಬಹಳಷ್ಟು ಸಮಯ ಹಿಡಿದಿತ್ತು. ಕೊನೆಗೆ ಹೈಪರ್-IgE ಸಿಂಡ್ರೋಮ್‌ ಎಂಬುದು ಪತ್ತೆಯಾಗಿ ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು.

ಸುಳ್ಯದ ನಾವೂರು ನಿವಾಸಿ ದಿ. ಧನಂಜಯ ಮತ್ತು ಸರೋಜಿನಿ ದಂಪತಿಯ ಪುತ್ರಿಯಾದ ಚಾಂದಿನಿ ಅನಾರೋಗ್ಯ ಕಾಡಿತ್ತು. ಸುಳ್ಯದ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಚಾಂದಿನಿ ಆರೋಗ್ಯ ತೀರಾ ಹದಗೆಟ್ಟಿತ್ತು.

ಒಂದಲ್ಲ ಒಂದು ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಈ ಕಾಯಿಲೆ ಬಗ್ಗೆ ಮೊದಲಿಗೆ ಯಾವುದೇ ಮಾಹಿತಿ ಇರಲಿಲ್ಲ. ಸುಳ್ಯ, ಮಂಗಳೂರು ಸೇರಿದಂತೆ ಹಲವೆಡೆ ಚಿಕಿತ್ಸೆ ಪಡೆದಿದರೂ ಪ್ರಯೋಜನವಾಗಿಲ್ಲ.

ಚಾಂದಿನಿ ಅವರನ್ನು ಕಾಡುತ್ತಿದ್ದ ಅನಾರೋಗ್ಯಕ್ಕೆ ಜಿಲ್ಲಾ ಮಟ್ಟದಲ್ಲಿ ಚಿಕಿತ್ಸಾ ಸೌಲಭ್ಯ ಇಲ್ಲ ಎಂದು ಆರೋಗ್ಯ ಇಲಾಖೆ ಹೇಳಿತ್ತು. ಬಳಿಕ ಅವರನ್ನು ಹೈದರಾಬಾದ್​ ನ ಎಐಜಿ ಆಸ್ಪತ್ರೆಗೆ ದಾಖಲಿಸಿದಾಗ ಆ ಕಾಯಿಲೆಯನ್ನೂ ಆಸ್ಪತ್ರೆ ಪತ್ತೆ ಮಾಡಿದ್ದು, ಆ ವರದಿಯನ್ನು ಚಾಂದಿನಿ ಕರ್ನಾಟಕ ಸರ್ಕಾರಕ್ಕೆ ನೀಡಿದ್ದರು.

ಚಿಕಿತ್ಸೆಗೆ ಸರ್ಕಾರ ಸಕಾಲದಲ್ಲಿ ಹಣ ಬಿಡುಗಡೆ ಮಾಡದ ಹಿನ್ನಲೆ ನಿಗದಿತ ಆಸ್ಪತ್ರೆಗಳಲ್ಲಿ ಚಾಂದಿನಿ ಅವರಿಗೆ ಸರಿಯಾಗಿ ಚಿಕಿತ್ಸೆ ಸಿಗಲಿಲ್ಲ ಎನ್ನಲಾಗಿದೆ.

ಇಪ್ಪತ್ತಕ್ಕೂ ಅಧಿಕಬಾರಿ ವಿವಿಧ ಶಸ್ತ್ರ ಚಿಕಿತ್ಸೆ, ಹತ್ತು ಬಾರಿ ಕೃತಕ ಉಸಿರಾಟ, ಶಾಕ್‌ ಟ್ರೀಟ್‌ಮೆಂಟ್‌, ಕಿಮೋಥೆರಪಿ, ನಿರಂತರ ಹೈಡೋಸ್‌ ಡ್ರಗ್‌ ಸೇವನೆ ಹೀಗೆ ಹಲವು ಸವಾಲಿನ ನಡುವೆಯೂ ದೃತಿಗೆಡದೆ ಬದುಕುತ್ತಿದ್ದರು.

ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಅ. 17 ಶುಕ್ರವಾರ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: Puttur: ಜನಮನ ಕಾರ್ಯಕ್ರಮದಲ್ಲಿ ಜನರು ಅಸ್ವಸ್ಥ; ಕ್ಷಮೆ ಕೇಳಿದ ಶಾಸಕರು
————–

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 35

You cannot copy content of this page