ಮೂಡಿಗೆರೆ: Tulu Times | ಅಸ್ಸಾಂ ಮೂಲದ ಮಹಿಳೆಗೆ ಹೆರಿಗೆ ನೋವು ಆರಂಭವಾದ ಹಿನ್ನೆಲೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಗಂಡು ಮಗುವಿಗೆ ಅಂಬ್ಯುಲೆನ್ಸ್ ನಲ್ಲೇ ಜನ್ಮ ನೀಡಿದ್ದಾರೆ.
ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ತೀವ್ರ ಹೆರಿಗೆ ನೋವು ಕಂಡು ಬಂದ ಹಿನ್ನೆಲೆ, ಫೆ.1ರಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಂಬುಲೆನ್ಸ್ ಚಾಲಕ ಆರೀಫ್ ಹೆರಿಗೆ ನೋವಿನಿಂದ ಬಳಲುತ್ತಿದ್ದಾಗ ಸಮಯಪ್ರಜ್ಞೆ ತೋರಿ, ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಇದೀಗ ತಾಯಿ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಈ ಬಗ್ಗೆ ಆಂಬ್ಯುಲೆನ್ಸ್ ಚಾಲಕ ಆರೀಫ್ ಮಾತನಾಡಿ, ದಿನದ 24 ಗಂಟೆಯೂ ಸಾರ್ವಜನಿಕರಿಗಾಗಿ ನನ್ನ ಆಂಬ್ಯುಲೆನ್ಸ್ ಮೀಸಲಿಟ್ಟಿದ್ದೇನೆ. ಕಳೆದ ಹತ್ತು ವರ್ಷದಿಂದ ಆಂಬ್ಯುಲೆನ್ಸ್ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸುತ್ತಿದ್ದೀನಿ. ನನ್ನ ಆಂಬ್ಯುಲೆನ್ಸ್ ಒಳಗಡೆಯೇ 18 ಮಕ್ಕಳ ಹೆರಿಗೆಯಾಗಿದ್ದು, ಅದರಲ್ಲಿ 10 ಮಕ್ಕಳ ಹೆರಿಗೆ ನಾನೇ ಮಾಡಿಸಿದ್ದೇನೆ. ಯಾರ ಸಹಾಯವೂ ಇಲ್ಲದೇ ನಾನೇ ಹತ್ತು ಮಕ್ಕಳ ಹೆರಿಗೆಯನ್ನು ಮಾಡಿಸಿದ್ದು, ಇಂದು ಅದೇ ರೀತಿಯೂ ಈ ಹೆರಿಗೆಯನ್ನು ಮಾಡಿಸಿದೆ. ನಂತರ ತಾಯಿ ಹಾಗೂ ಮಗುವನ್ನು ಸುರಕ್ಷಿತವಾಗಿ ಮೂಡಿಗೆರೆ, ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದರು.
ದಕ್ಷಿಣ ಕನ್ನಡದಲ್ಲಿ ಜಲಮಟ್ಟ ಇಳಿಕೆ: ಮಂಗಳೂರು, ಮೂಡಬಿದ್ರಿ ಉಳ್ಳಾಲದಲ್ಲಿ ಆತಂಕ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಮೂಡಬಿದ್ರಿ ಮತ್ತು ಉಳ್ಳಾಲ ತಾಲೂಕುಗಳಲ್ಲಿ ಭೂಗರ್ಭ ಜಲಮಟ್ಟ ಇಳಿಕೆಯಾಗಿರುವುದು ದಾಖಲಾಗಿದ್ದು, ಇದು ಅಧಿಕಾರಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಈ ವರ್ಷ ಸಮರ್ಪಕ ಮಳೆಯಾಗಿದ್ದರೂ, 2025ರ ಭೂಗರ್ಭ ಜಲಮಟ್ಟದ ಏರಿಳಿತದ ಅಂಕಿ-ಅಂಶಗಳ ಪ್ರಕಾರ ಈ ಮೂರು ತಾಲೂಕುಗಳಲ್ಲಿ ಜಲಮಟ್ಟ ಕುಸಿತ ಕಂಡುಬಂದಿದೆ. ಆದರೆ ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಭೂಗರ್ಭ ಜಲಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ. 2022ರಲ್ಲಿ ಉಳ್ಳಾಲ ತಾಲೂಕಿನಲ್ಲಿ ಭೂಗರ್ಭ ಜಲಮಟ್ಟದ ಗರಿಷ್ಠ ಆಳ 27.68 ಮೀಟರ್ ಆಗಿದ್ದರೆ, 2025ರ ವೇಳೆಗೆ ಇದು 14.67 ಮೀಟರ್‌ಗೆ ಏರಿಕೆಯಾಗಿದೆ. ಅದೇ ವೇಳೆ ಕಡಬ, ಬಂಟ್ವಾಳ ಮತ್ತು ಸುಳ್ಯ ತಾಲೂಕುಗಳಲ್ಲಿ ಭೂಗರ್ಭ ಜಲಮಟ್ಟವು ಸುಮಾರು 4 ಮೀಟರ್ ಹೆಚ್ಚಳವಾಗಿದೆ.
ಭೂಗರ್ಭ ಜಲಮಟ್ಟ ಕುಸಿತಕ್ಕೆ ಪ್ರಮುಖ ಕಾರಣ!
ಭೂಗರ್ಭ ಜಲಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಪ್ರಕಾರ, ಈ ಮೂರು ತಾಲೂಕುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ತಾಲೂಕುಗಳಲ್ಲಿ ಜಲಮಟ್ಟ ಹೆಚ್ಚಳವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯನ್ನು ಸುರಕ್ಷಿತ’ ವರ್ಗಕ್ಕೆ ಸೇರಿಸಲಾಗಿದೆ. ಜಿಲ್ಲೆಯ ಭೂಗರ್ಭ ಜಲ ಇಲಾಖೆ ಹಿರಿಯ ಭೂವಿಜ್ಞಾನಿಗಳ ಪ್ರಕಾರ, ಜನಸಂಖ್ಯೆ ಹೆಚ್ಚಳದಿಂದ ನೀರಿನ ಬೇಡಿಕೆ ಹೆಚ್ಚಿರುವುದೇ ಭೂಗರ್ಭ ಜಲಮಟ್ಟ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಜೊತೆಗೆ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೆ ಭೂಗರ್ಭ ಜಲ ಬಳಕೆ ಗಣನೀಯವಾಗಿ ಹೆಚ್ಚಾಗಿದೆ.
Baby boy born in ambulance in Mudigere- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











