ಬೆಳ್ತಂಗಡಿ : ತುಳುಟೈಮ್ಸ್ | ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಕಾರಿಂಜ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವನಶಾಸ್ತಾರ,ವೀರಭದ್ರ ಸ್ವಾಮಿ ದೇವಸ್ಥಾನ ಬ್ರಹ್ಮಕಲಶೋತ್ಸವದ ಚಪ್ಪರ ಮೂಹೂರ್ತ ನೆರವೇರಿತು.ಪದ್ಮನಾಭ ಶಿಲ್ಪಿ ಚಾಮುಂಡೇಶ್ವರಿ ಕೃಪಾ ಪಿಲಿಗೂಡು ಚಪ್ಪರ ಮೂಹೂರ್ತ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.ಪೆಬ್ರವರಿ 20 ರಿಂದ 22 ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ.
ಕೊರಿಂಜ ದೇವಸ್ಥಾನದ ಕಾರ್ತಿಕ್ ಹೆಗ್ಡೆ ಪೌರೋಹಿತ್ಯದಲ್ಲಿ ಚಪ್ಪರ ಮೂಹೂರ್ತ ಕಾರ್ಯಕ್ರಮ ನೆರವೇರಿತು.ಶಾಸಕ ಹರೀಶ್ ಪೂಂಜ ಚಪ್ಪರ ಮೂಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿ ಬ್ರಹ್ಮಕಲಶದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಯೋಗೀಶ್ ಪೂಜಾರಿ ಕಡ್ತಿಲ,ಸಮಿತಿಯ ಸುನೀಲ್ ಆಣವು,ಸುಂದರ ಶೆಟ್ಟಿ ಎಂಜಿರಪಲ್ಕೆ,ಶ್ರೀ ಗೋಪಾಲಕೃಷ್ಣ ಗೌಡ,ಅಲೈಮಾರು.ಕೊರಗಪ್ಪ ಪೂಜಾರಿ ಕಾರಿಂಜ,ದರ್ಣಪ್ಪ ನಾಯ್ಕ ಆನಡ್ಕ,ವಿಜಯ್ ಕುಮಾರ್ ಕಲ್ಲಳಿಕೆ,ದಾಸಪ್ಪ ಗೌಡ ಕೋಡ್ಯಡ್ಕ,ಸತೀಶ್ ಸಾಲ್ಯಾನ್ ಪಿಲಿಕಲ್ಲು,ದುಗ್ಗಪ್ಪ ಗೌಡ ಮನೆಗಾರಮಜಲು,ಪ್ರಭಾಕರ ಪೊಸಂದೋಡಿ,ಉಮೇಶ್ ಖಂಡಿಗ ಸೇರಿದಂತೆ ಸ್ಥಳೀಯರು,ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
karinja-brahmakalash-chappara-muhurta-invitation-card-released-tulu times
ಇದನ್ನೂ ಓದಿ : ಬೆಳ್ತಂಗಡಿ: ಮಹೇಶ್ ಶೆಟ್ಟಿ ಗಡಿಪಾರು ಆದೇಶಕ್ಕೆ ಹೈ ಕೋರ್ಟ್ ತಡೆಯಾಜ್ಞೆ!
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ : https://www.youtube.com/@tulutimess











