ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕ

ಕೋಡಿಬೇಂಗ್ರೆ ದೋಣಿ ದುರಂತ: ಮೂವರು ಅರೆಸ್ಟ್‌ !

ಉಡುಪಿ: Tulu Times | ಕೋಡಿಬೇಂಗ್ರೆಯಲ್ಲಿ ದೋಣಿ ದುರಂತದಲ್ಲಿ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬೋಟ್‌ ಪಲ್ಟಿ ಆಗಿದ್ದು ಹೇಗೆ..?

ಸುಹಾಸ್ ಶ್ರೀಯಾನ್ (23), ಸುಫಿಯಾನ್ (20) ಮತ್ತು ವಾಸು ಮೆಂಡನ್ (52) ಬಂಧಿತರಾಗಿದ್ದು, ಬೆಳಿಗ್ಗೆ ಸುಮಾರು 10:45ಗಂಟೆಗೆ ಮೈಸೂರು ನಿವಾಸಿ ಗುರುಪ್ರಸಾದ್ (34) ಸೇರಿದಂತೆ ಒಟ್ಟು 29ಪ್ರವಾಸಿಗರನ್ನು ಆರೋಪಿ ಸುಹಾಸ್ ಎಂಬವರು ಎರಡು ಪ್ರತ್ಯೇಕ ಬೋಟ್‌ಗಳಲ್ಲಿ ದೋಣಿ ವಿಹಾರಕ್ಕೆ ಕಳುಹಿಸಿದ್ದರು. ಬೆಳಗ್ಗೆ 11:15ಗಂಟೆ ಸುಮಾರಿಗೆ “THE WAVE RIDER ಎಂಬ ಬೋಟ್ ಸ್ವರ್ಣ ನದಿಯಲ್ಲಿ ವಿಹಾರ ಮಾಡುತ್ತಿದ್ದಾಗ, ಅದರ ಚಾಲಕರಾದ ಸೂಫಿಯಾನ್ ಮತ್ತು ವಾಸು  ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಏಕಾಏಕಿ ಎಡಬದಿಗೆ ತಿರುಗಿಸಿ ಚಲಾಯಿಸಿದ ಪರಿಣಾಮ ಬೋಟ್ ಮಗುಚಿ ಬಿದ್ದಿದೆ ಎನ್ನಲಾಗಿದೆ.  ಒಂದು ಬೋಟ್‌ನಲ್ಲಿ 14ಮತ್ತು ಇನ್ನೊಂದರಲ್ಲಿ 15ಜನ ಇದ್ದರು ಎನ್ನಲಾಗಿದೆ.

ಇದನ್ನೂ ಓದಿ: ಜಿಲ್ಲೆಗಳಲ್ಲಿ ಎಲ್‍ಇಡಿ ಸ್ಕ್ರೀನ್ ಮೂಲಕ ಕೇಂದ್ರ ಬಜೆಟ್ ವೀಕ್ಷಿಸಲು ವ್ಯವಸ್ಥೆ: ಅಶ್ವತ್ಥನಾರಾಯಣ್

ದಕ್ಷಿಣ ಕನ್ನಡದಲ್ಲಿ ಜಲಮಟ್ಟ ಇಳಿಕೆ: ಮಂಗಳೂರು, ಮೂಡಬಿದ್ರಿ, ಉಳ್ಳಾಲದಲ್ಲಿ ಆತಂಕ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಮೂಡಬಿದ್ರಿ ಮತ್ತು ಉಳ್ಳಾಲ ತಾಲೂಕುಗಳಲ್ಲಿ ಭೂಗರ್ಭ ಜಲಮಟ್ಟಿ ಇಳಿಕೆಯಾಗಿರುವುದು ದಾಖಲಾಗಿದ್ದು, ಇದು ಅಧಿಕಾರಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಈ ವರ್ಷ ಸಮರ್ಪಕ ಮಳೆಯಾಗಿದ್ದರೂ, 2025ರ ಭೂಗರ್ಭ ಜಲಮಟ್ಟದ ಏರಿಳಿತದ ಅಂಕಿ-ಅಂಶಗಳ ಪ್ರಕಾರ ಈ ಮೂರು ತಾಲೂಕುಗಳಲ್ಲಿ ಜಲಮಟ್ಟ ಕುಸಿತ ಕಂಡುಬಂದಿದೆ. ಆದರೆ ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಭೂಗರ್ಭ ಜಲಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ. 2022ರಲ್ಲಿ ಉಳ್ಳಾಲ ತಾಲೂಕಿನಲ್ಲಿ ಭೂಗರ್ಭ ಜಲಮಟ್ಟದ ಗರಿಷ್ಠ ಆಳ 27.68 ಮೀಟರ್ ಆಗಿದ್ದರೆ, 2025ರ ವೇಳೆಗೆ ಇದು 14.67 ಮೀಟರ್‌ಗೆ ಏರಿಕೆಯಾಗಿದೆ. ಅದೇ ವೇಳೆ ಕಡಬ, ಬಂಟ್ವಾಳ ಮತ್ತು ಸುಳ್ಯ ತಾಲೂಕುಗಳಲ್ಲಿ ಭೂಗರ್ಭ ಜಲಮಟ್ಟವು ಸುಮಾರು 4 ಮೀಟರ್ ಹೆಚ್ಚಳವಾಗಿದೆ.

ಭೂಗರ್ಭ ಜಲಮಟ್ಟ ಕುಸಿತಕ್ಕೆ ಪ್ರಮುಖ ಕಾರಣ

ಭೂಗರ್ಭ ಜಲಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಪ್ರಕಾರ, ಈ ಮೂರು ತಾಲೂಕುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ತಾಲೂಕುಗಳಲ್ಲಿ ಜಲಮಟ್ಟ ಹೆಚ್ಚಳವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯನ್ನು ಸುರಕ್ಷಿತ’ ವರ್ಗಕ್ಕೆ ಸೇರಿಸಲಾಗಿದೆ. ಜಿಲ್ಲೆಯ ಭೂಗರ್ಭ ಜಲ ಇಲಾಖೆ ಹಿರಿಯ ಭೂವಿಜ್ಞಾನಿಗಳ ಪ್ರಕಾರ, ಜನಸಂಖ್ಯೆ ಹೆಚ್ಚಳದಿಂದ ನೀರಿನ ಬೇಡಿಕೆ ಹೆಚ್ಚಿರುವುದೇ ಭೂಗರ್ಭ ಜಲಮಟ್ಟ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಜೊತೆಗೆ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೆ ಭೂಗರ್ಭ ಜಲ ಬಳಕೆ ಗಣನೀಯವಾಗಿ ಹೆಚ್ಚಾಗಿದೆ.

ಭೂಗರ್ಭ ಜಲಮಟ್ಟ ಮತ್ತಷ್ಟು ಕುಸಿಯದಂತೆ ತಡೆಯಲು ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಳೆನೀರು ಸಂಗ್ರಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ತೆರೆದ ಬಾವಿ ಹಾಗೂ ಕೊಳವೆಬಾವಿಗಳ ಪುನರ್‌ಭರ್ತಿ, ಡ್ರಿಪ್ ಮತ್ತು ಸ್ಟ್ರಿಂಕ್ಲರ್ ನೀರಾವರಿ ಪದ್ಧತಿಗಳ ಅಳವಡಿಕೆ, ಚೆಕ್‌ಡ್ಯಾಂಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ.

Kodibengre boat tragedy: Three arrested!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 169

You cannot copy content of this page