ಬ್ರೇಕಿಂಗ್ ನ್ಯೂಸ್
ಕರ್ನಾಟಕ

ವೈಜಯಂತಿ ಮೂವೀಸ್ ಜೊತೆ ಕೈ ಜೋಡಿಸಿದ ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್

ಸಿನಿಮಾ: Tulu Times | ಸಿಂಗೀತಂ ಶ್ರೀನಿವಾಸ್ ರಾವ್, ಭಾರತೀಯ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕ. ಸೂಪರ್ ಹಿಟ್ ಚಿತ್ರ ಪುಷ್ಪಕ ವಿಮಾನದ ಸಾರಥಿ ಇವ್ರೇ. ಅಷ್ಟೇ ಅಲ್ಲ ತೆಲುಗು, ಕನ್ನಡ, ತಮಿಳು, ಹಿಂದಿ ಭಾಷೆಯಲ್ಲಿ ಸಿನಿಮಾ ಮಾಡಿ ಸೈ ಎನಿಸಿಕೊಂಡಿರುವ ಸಿಂಗೀತ ಶ್ರೀನಿವಾಸ್ ರಾವ್, ಒಂದಷ್ಟು ಗ್ಯಾಸ್‌ ಬಳಿಕ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.

ಶ್ರೀನಿವಾಸ್ ಅವರು 94ನೇ ವಯಸ್ಸಿನಲ್ಲಿ ನಿರ್ದೇಶನದತ್ತ ಮುಖ ಮಾಡಿದ್ದು, ಅವರಿಗೆ ದಕ್ಷಿಣ ಭಾರತದ ಪ್ರಮುಖ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಸಾಥ್ ಕೊಟ್ಟಿದೆ. ಈ ಬ್ಯಾನರ್ ನಡಿ ಕಲ್ಕಿ ಡೈರೆಕ್ಟರ್ ನಾಗ್ ಅಶ್ವಿನ್ ಸಿನಿಮಾಗೆ ಹಣ ಹಾಕುತ್ತಿದ್ದಾರೆ.

ಸಿಂಗೀತಂ ಶ್ರೀನಿವಾಸ್ ರಾವ್ ಅವರ 61ನೇ ಸಿನಿಮಾ ಇದಾಗಿದೆ. ಈಗಾಗಲೇ ಚಿತ್ರೀಕರಣ ಶುರುವಾಗಿದ್ದು, ಈ ಕುರಿತು ವೈಜಯಂತಿ ಮೂವೀಸ್ ವಿಡಿಯೋ ಹಂಚಿಕೊಂಡಿದೆ. ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಅವರು ಸಂಗೀತ ನೀಡುತ್ತಿದ್ದಾರೆ.

ಇತ್ತೀಚೆಗಷ್ಟೆ ಸಿನಿಮಾದ ಮುಹೂರ್ತ ನಡೆದಿದೆ.‌ ಚಿತ್ರದ ಟೈಟಲ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ವೈಜಯಂತಿ ಮೂವೀಸ್ ಹೇಳಿಕೊಂಡಿದೆ. ಸಿಂಗೀತಂ ಶ್ರೀನಿವಾಸ್ ರಾವ್ ಮತ್ತೆ ನಿರ್ದೇಶನದ ಕುರ್ಚಿ ಅಲಂಕರಿಸುತ್ತಿದ್ದು, ಇಡೀ ಚಿತ್ರರಂಗ ಈ ಪ್ರಾಜೆಕ್ಟ್ ಗೆ ಕಾತರದಿಂದ ಕಾಯುತ್ತಿದೆ.

ಹಾಸನದಲ್ಲಿ ಜಾಗ ಗಲಾಟೆ ತಾವೇ ನಿಂತು ಕಂಪೌಂಡ್ ಹಾಕಿಸ್ತಿರುವ ಯಶ್ ತಾಯಿ.

ಹಾಸನ: ತುಳುಟೈಮ್ಸ್ | ರಾಕಿಂಗ್ ಸ್ಟಾರ್ ಯಶ್ ಕುಟುಂಬ ಹಾಸನದಲ್ಲಿ ಜಾಗ ಖರೀದಿ ಮಾಡಿದ ಮೇಲೆ ಆ ಜಾಗಕ್ಕೆ ಸಂಬಂಧಪಟ್ಟಂತೆ ದಾಖಲೆಯ ಗಲಾಟೆಗಳು ನಡೀತಾನೆ ಬಂತು. ಅದ್ರಲ್ಲೂ ಹಾಕಿದ್ದ ಕಂಪೌಂಡನ್ನು ಹೊಡೆದು ಹಾಕಿದ ಮೇಲೆ ದೊಡ್ಡ ಸುದ್ದಿಯೇ ಆಗಿಬಿಟ್ಟಿತ್ತು.ಇದೀಗ ಯಶ್ ತಾಯಿ ಪುಷ್ಪ ಹಾಸನಕ್ಕೆ ತೆರಳಿ ಮತ್ತೆ ಕಂಪೌಂಡ್ ಹಾಕುವುದಕ್ಕೆ ಮುಂದಾಗಿದ್ದಾರೆ.

ಆರುವರ್ಷಗಳ ಹಿಂದೆಯೇ ಜಾಗ ಖರೀದಿ ಆಗಿತ್ತು.ಜಾಗ ಖರೀದಿಯ ನಂತರದಲ್ಲಿ ಜಾಗಕ್ಕೆ ಟ್ಯಾಕ್ಸ್ ಕಟ್ಟಾ ಇದ್ದೀವಿ.ಆರು ವರ್ಷ ಇಲ್ಲದೆ ಇರುವ ಸಮಸ್ಯೆ ಈವಾಗ ಯಾಕೆ ಸೃಷ್ಟಿಯಾಯಿತು.ಸೈಟ್ ನನ್ನದು ಎನ್ನುವವರು ಕೋರ್ಟ್ ಆರ್ಡರ್ ತೋರಿಸಬೇಕು.ಯಾರ್ದಾದ್ರೂ ಜಾಗವನ್ನು ಬಿಟ್ಟ ಕೊಡ್ತಾರಾ. ಇದನ್ನೆಲ್ಲಾ ಪಿಡಿಓ ನಾಗರಾಜ್ ಕ್ರಿಯೇಟ್ ಮಾಡಿ ಕೊಡೋದು ಈ ಎಲ್ಲಾ ಮಾಹಿತಿಯನ್ನು ಸರ್ಕಾರಕ್ಕೆ ಕೊಡುತ್ತೇವೆ.

ನಿನ್ನೆ ಮೊನ್ನೆಯಿಂದ ಗಲಾಟೆ ಕೆಲ್ಸ ಮಾಡಕೇ ಬಿಡ್ತಿಲ್ಲಮತ್ತೆ ಕಂಪೌಂಡ್ ಹಾಕುತ್ತೇವೆ. ಕಂಪೌಂಡ್ ಹೊಡೆದಿದ್ದಕ್ಕೆ ಡೆಫರ್ಮೇಶನ್ ಕೇಸ್ ಹಾಕಿದ್ದೇವೆ ಇಲ್ಲಿರೋದು ಪೋರ್ಟಿ ಸಿಕ್ಷಿ ಸೈಟ್ 5 ಕುಂಟೆ ಎಲ್ಲಿದೆ ಹುಡ್ಕೊಳಕೆ ಹೇಳಿ ಎಂದು ಯಶ್ ತಾಯಿ ಮಾಧ್ಯಮದವೊಂದಿಗೆ ಮಾತಾಡುತ್ತಾ ಆಗುತ್ತಿರುವ ಸಮಸ್ಯೆಯ ಬಗ್ಗೆ ವಿವರಿಸಿದ್ದಾರೆ. ಯಶ್ ತಾಯಿ ಪುಷ್ಪ ತಾವೇ ನಿಂತು ಕಂಪೌಂಡ್ ಹಾಕಿಸ್ತಿದ್ದಾರೆ.ಈ ಗಲಾಟೆ ಮುಂದೆ ಇನ್ನೇನೂ ತಿರುವು ಪಡೆಯುತ್ತೆ ಅನ್ನೋ ಕುತೂಹಲಾನೂ ಇದೆ.

Famous director Singeetham Srinivas Rao joins hands with Vaijayanthi Movies- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page