ಸಿನಿಮಾ: Tulu Times |ವಿಶ್ವ ಪಿಕಲ್ ಬಾಲ್ ಲೀಗ್ ನ ಎರಡನೇ ಸೀಸನ್ ನಿನ್ನೆ ಪ್ರಾರಂಭವಾಗಿದೆ.ನಿನ್ನೆ ನಡೆದ ಮ್ಯಾಚ್ ನಲ್ಲಿ ‘ಬೆಂಗಳೂರು ಜವಾನ್ಸ್ ‘ತಂಡವು ‘ಪುಣೆ ಯುನೈಟೆಡ್’ ತಂಡದ ವಿರುದ್ಧ 5-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ.
ಪ್ರಿಯಾ ಅಟ್ಲೀ ಮತ್ತು ಹೆಸರಾಂತ ನಿರ್ದೇಶಕ ಅಟ್ಲೀ ಮಾಲೀಕತ್ವದ ಬೆಂಗಳೂರು ಜವಾನ್ಸ್ ತಂಡವು ವಿಶ್ವ ಪಿಕಲ್ ಬಾಲ್ ಲೀಗ್ ನ ಮೊದಲ ಸೀಸನ್ ನ ಚಾಂಪಿಯನ್ ತಂಡವಾಗಿದ್ದು, ಮತ್ತೆ ತನ್ನ ಚಾಂಪಿಯನ್ ಆಟವನ್ನು ಈ ಮ್ಯಾಚ್ ಗೆಲ್ಲುವುದರ ಮೂಲಕ ಮುಂದುವರೆಸಿದೆ.
ಆತ್ಮ ವಿಶ್ವಾಸ ಮತ್ತು ಛಲದೊಂದಿದೆ ಅದ್ಭುತ ಪ್ರದರ್ಶನ ನೀಡಿರುವ ‘ಬೆಂಗಳೂರು ಜವಾನ್ಸ್’ ತಂಡವು ಲೀಗ್ ನ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದೆಂದು ಪುನಃ ಸಾಬೀತುಪಡಿಸಿದೆ. ಇನ್ನು ಸ್ಟೇಡಿಯಂನಲ್ಲಿ ನೆರೆದಿದ್ದ ಅಟ್ಲಿ ಅವರ ಅಭಿಮಾನಿಗಳ ಹರ್ಷೋದ್ಗಾರ ಮತ್ತು ಬೆಂಬಲ ಪಂದ್ಯಕ್ಕೆ ಇನ್ನಷ್ಟು ಮೆರುಗನ್ನು ನೀಡಿತು. ಇಡೀ ಕ್ರೀಡಾಂಗಣದಲ್ಲಿ ‘ಜವಾನ್ಸ್’ ಮಯವಾಗಿತ್ತು.ಮೊದಲ ಸೀಸನ್ ಗೆದ್ದ ಹಾಗೇ ಎರಡನೇಯ ಸೀಸನ್ ಗೆದ್ದು, ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸನ್ನದವಾಗಿದೆ ಎನ್ನುವ ಬಲವಾದ ಸಂದೇಶವನ್ನು ನೀಡಿದೆ.
ಲ್ಯಾಂಡ್ ಲಾರ್ಡ್’ ಜಾಥಾ: ವಿಜಯ್ ಬೆನ್ನಿಗೆ ನಿಂದ ವಿದ್ಯಾರ್ಥಿಗಳು
ಇತ್ತೀಚೆಗಷ್ಟೇ ನಿರ್ದೇಶಕ ಜಡೇಶ್ ಅವರ ಸಾರಥ್ಯದಲ್ಲಿ ಮೂಡಿಬಂದಂತಹ ‘ಲ್ಯಾಂಡ್ ಲಾರ್ಡ್’ ಚಿತ್ರವು ಈಗಾಗಲೇ ಜನರ ಮನಸ್ಸನ್ನು ಯಶಸ್ವಿಯಾಗಿ ಗೆಲ್ಲುತ್ತಿದೆ. ಕಥೆ, ನಟನೆ ಎಲ್ಲವನ್ನು ಸಿನಿ ಪ್ರಿಯರು ಕೊಂಡಾಡಿದ್ದಾರೆ. ಈ ಸಂದರ್ಭದಲ್ಲಿ ಚಿತ್ರತಂಡವು ಇಂದು ಮಧ್ಯಾಹ್ನ 1:45ಕ್ಕೆ ಜಾತವನ್ನು ಏರ್ಪಡಿಸಿತು.
ಈ ಜಾಥಾದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳ ಜೊತೆಗೆ ನಟ ದುನಿಯಾ ವಿಜಯ್ ಅವರು ಪಾಲ್ಗೊಂಡಿದ್ದರು. ಸುಮಾರು 2 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಸಾಗಿದರು.ಈ ಸಂಧರ್ಭದಲ್ಲಿ ಸಲಗ ವಿಜಯ್ ಅವರು ಒಂದು ಹೆಣ್ಣು ಮಗುವಿಗೆ ಭೀಮ ಪುತ್ರಿ ಎಂದು ಹೆಸರಿಟ್ಟು ನಾಮಕರಣ ಮಾಡಿದರು. ಜೊತೆಗೆ ಆ ಮಗುವಿನ ಮುಂದಿನ ಭವಿಷ್ಯಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು 25,000 ಹಾಗೂ ಸಲಗ ವಿಜಯ ಅವರು 75,000 ಒಳಗೊಂಡಂತೆ ಒಟ್ಟು ಒಂದು ಲಕ್ಷ ದೇಣಿಗೆಯನ್ನು ನೀಡುತ್ತಿರುವ ವಿಚಾರವನ್ನು ಘೋಷಿಸಿದರು.
ಇದಾದ ಬಳಿಕ ಮಾತನಾಡಿರುವ ದುನಿಯಾ ವಿಜಯ್ ಅವರು ಅಂಬೇಡ್ಕರ್ ರವರು ಸಂವಿಧಾನ ಬರೆದಿರೋದು ಎಲ್ಲರಿಗೂ ಯಾವುದೇ ಪ್ರತ್ಯೇಕ ಜಾತಿಗಲ್ಲ, ಪ್ರತಿಯೊಬ್ಬರಿಗೂ ಈ ಸಂವಿಧಾನ ಬೇಕು. ಈ ಹೋರಾಟ ಯಾರದೋ ಮೇಲಿನ ದ್ವೇಷ ಕಲ್ಲ ಅಥವಾ ಕಿಚ್ಚಿಗಲ್ಲ ಇದು ನನ್ನ ಸಂವಿಧಾನಕ್ಕಾಗಿ ಎಂದು ಹೇಳಿದರು. ಜೊತೆಗೆ ನೆರೆದಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಬೆಂಗಳೂರ ವಿಶ್ವವಿದ್ಯಾಲಯ, ಮಾಧ್ಯಮ ಮಿತ್ರರಿಗೂ ಧನ್ಯವಾದವನ್ನು ಕೋರಿದರು.
World Pickle Ball League: Bangalore Jawans continue their championship run..- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











