ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಪ್ರೈವೇಟ್ ಬಸ್ ಗಳಿಗೆ ಕಡ್ಡಾಯ ಬಾಗಿಲು ಅಳವಡಿಕೆ : ಜೂ.01 ರವರೆಗೆ ಗಡುವು

ಉಡುಪಿ : Tulu Times | ಇತ್ತೀಚೆಗೆ ಪ್ರಯಾಣಿಕರ ಸುರಕ್ಷತೆ ಬಗ್ಗೆ ಕಾಳಜಿ ವಹಿಸಲಾಗಿದೆ. ಈ ಕಾರಣ ಖಾಸಗಿ ಬಸ್ ಗಳಲ್ಲಿ ಬಾಗಿಲು ಅಳವಡಿಸುವ ಬಗ್ಗೆ ಚರ್ಚೆ ನಡೆಯುತ್ತಿವೆ. ಪ್ರಸ್ತುತ ಶಾಲಾ ಶೈಕ್ಷಣಿಕ ವೇಳಾಪಟ್ಟಿ ಹಾಗೂ ಮಾರ್ಚ್ ವರೆಗೆ ನಡೆಯುವ ಪರೀಕ್ಷಾ ಅವಧಿ, ಜೊತೆಗೆ ಬಸ್‌ಗಳಲ್ಲಿ ಮಡಚುವ (ಫೋಲ್ಡಿಂಗ್) ಮಾದರಿಯ ಬಾಗಿಲುಗಳನ್ನು ಅಳವಡಿಸಲು ಅಗತ್ಯವಿರುವ ಗ್ಯಾರೇಜ್‌ಗಳ ಸಂಖ್ಯೆ ಸೀಮಿತವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ಇದಕ್ಕಾಗಿ ಹೆಚ್ಚುವರಿ ಕಾಲಾವಕಾಶ ನೀಡಿದೆ.

ಹೌದು… ಇದೀಗ, ಜಿಲ್ಲೆಯ ಎಲ್ಲಾ ಖಾಸಗಿ ಬಸ್‌ಗಳಲ್ಲಿ ಕಡ್ಡಾಯವಾಗಿ ಬಾಗಿಲುಗಳನ್ನು ಅಳವಡಿಸುವ ಸಂಬಂಧ ನೀಡಲಾಗಿದ್ದ ಗಡುವನ್ನು ಜೂನ್ 1 ರವರೆಗೆ ವಿಸ್ತರಿಸಲಾಗಿದೆ. ಈ ಕುರಿತು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರ ಉಪಸ್ಥಿತಿಯಲ್ಲಿ ನಡೆದ ಖಾಸಗಿ ಬಸ್ ಮಾಲೀಕರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಜಿಲ್ಲಾಡಳಿತ ವಿಧಿಸಿದ ಷರತ್ತುಗಳಿಗೆ ಖಾಸಗಿ ಬಸ್ ಮಾಲೀಕರು ಏಕಮತದಿಂದ ಒಪ್ಪಿಗೆ ಸೂಚಿಸಿ, ನಿಗದಿತ ಅವಧಿಯೊಳಗೆ ಶೇ.100ರಷ್ಟು ಪಾಲನೆ ಮಾಡುವುದಾಗಿ ಭರವಸೆ ನೀಡಿದರು. ಗಡುವಿನ ನಂತರ ಬಾಗಿಲಿಲ್ಲದೆ ಸಂಚರಿಸುವ ಯಾವುದೇ ಬಸ್‌ಗಳನ್ನು ವಶಕ್ಕೆ ಪಡೆಯಲಾಗಿದರೂ ಅದಕ್ಕೆ ವಿರೋಧ ವ್ಯಕ್ತಪಡಿಸದೇ ಇರುವುದಾಗಿ ತಿಳಿಸಿದರು. ಈ ಕ್ರಮ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುವ ಉದ್ದೇಶದಿಂದ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಪುನರುಚ್ಚರಿಸಿ, ಗಡುವು ಮುಗಿದ ಬಳಿಕ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಸಭೆಯಲ್ಲಿ ಸುರಕ್ಷತಾ ನಿಯಮಗಳ ಪಾಲನೆ ಹಾಗೂ ಕಾರ್ಯಾಚರಣೆಯ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು. ಎಲ್ಲಾ ಬಸ್‌ಗಳಲ್ಲಿ ಒಂದೇ ಸಮಯದಲ್ಲಿ ಬಾಗಿಲು ಅಳವಡಿಸುವುದು ಪ್ರಾಯೋಗಿಕವಾಗಿ ಕಷ್ಟಕರವಾಗಿದೆ ಎಂದು ಬಸ್ ಮಾಲೀಕರು ಹೆಚ್ಚಿನ ಸಮಯ ಕೋರಿದರು. ಆದರೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ, ತಕ್ಷಣದಿಂದಲೇ ಫಿಟ್ನೆಸ್ ಪ್ರಮಾಣಪತ್ರ (ಎಫ್‌ಸಿ) ನವೀಕರಣವನ್ನು ಷರತ್ತಿನೊಂದಿಗೆ ಮಾತ್ರ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಜೂನ್ 1ರೊಳಗೆ ಕಡ್ಡಾಯ ಬಾಗಿಲು ಅಳವಡಿಸದ ಬಸ್‌ನ ಎಫ್‌ಸಿಯನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು.

Mandatory installation of doors for private buses: Deadline until June 1 – ತುಳು ಟೈಮ್ಸ್

ಇದನ್ನೂ ಓದಿ : ಐಟಿ ದಾಳಿ ವೇಳೆ ಬೆಂಗಳೂರಿನ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ. ರಾಯ್

=======

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/yyHI_WJ6OnU?si=T-3ZJ4R-wWFxpMEN

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page