ಮಡಿಕೇರಿ: Tulu Times | ಬೆಂಗಳೂರಿನ ಸಂಪಿಗೆಹಳ್ಳಿಯ ಯನಪೋಯ ಕಾಲೇಜಿನಲ್ಲಿ ಬಿಬಿಎಂ ವಿದ್ಯಾರ್ಥಿ ಮಡಿಕೇರಿಯ ಯುವಕನೊಬ್ಬನ ರಾಸಲೀಲೆ ಪ್ರಕರಣ ಜಿಲ್ಲೆಯಲ್ಲಿ ವೈರಲ್ ಆಗುತ್ತಿದ್ದು, ಇದೀಗ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
ಈತ ರಾಜಕಾರಣಿಗಳ ಪುತ್ರಿಯರು ಸೇರಿ ಹಲವರ ಜೊತೆ ಸರಸವಾಡಿರುವ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕೊಡಗಿನ ರಾಸಲೀಲೆ ಪ್ರಕರಣ ರಾಜ್ಯಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. ಈತನ ಹೆಸರು ಮೊಹಮ್ಮದ್ ಸವದ್ ಎಂದು ಗುರುತಿಸಲಾಗಿದ್ದು, ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ ಯುವಕ ಎಂದು ತಿಳಿದುಬಂದಿದೆ.
ಈತ ಹಲವು ಯುವತಿಯರನ್ನು ಕರೆದೊಯ್ದು ರಾಸಲೀಲೆ ನಡೆಸುತ್ತಿದ್ದ ಎನ್ನಲಾಗಿದೆ. ನಂತರ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದ ಎನ್ನಲಾಗಿದೆ. ವೈರಲ್ ಆದ ವೀಡಿಯೋಗಳಲ್ಲಿ ಕೆಲ ಯುವತಿಯರು ಅನ್ಯ ಧರ್ಮಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ಕೆಲವರು ಜಿಲ್ಲಾ ಮಟ್ಟಡ ರಾಜಕೀಯ ಪಕ್ಷದ ಮುಖಂಡರ ಪುತ್ರಿಯರು ಇದ್ದಾರೆ ಎಂಬ ಆರೋಪವಿದೆ. ಕೊಡಗು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸನ್ನ ಭಟ್ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಹಿನ್ನೆಲೆ, ಆರೋಪಿ ಮೊಹಮ್ಮದ್ ಸವದ್ ನನ್ನು ಬಂಧಿಸಿದ್ದಾರೆ.
ಉಡುಪಿ: ಪ್ರವಾಸಿ ದೋಣಿಗಳ ಕಡ್ಡಾಯ ನೋಂದಣಿಗೆ 45 ದಿನಗಳ ಗಡುವು
ಉಡುಪಿ: ಪ್ರತ್ಯೇಕ ಪ್ರಕರಣದಲ್ಲಿ, ಹಂಗಾರಕಟ್ಟೆ ಸಮೀಪದ ಬೆಂಗ್ರೆಯಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಮೂವರು ಸಾವನ್ನಪ್ಪಿದ ಘಟನೆ ಬಳಿಕ ಉಡುಪಿ ಜಿಲ್ಲಾ ಆಡಳಿತವು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಬಂದರು ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಕ್ರಮವಾಗಿ ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆ ನಡೆಸುತ್ತಿರುವ ಎಲ್ಲರಿಗೂ ತೀವ್ರ ಎಚ್ಚರಿಕೆ ನೀಡಿವೆ.
ಜಿಲ್ಲೆಯಾದ್ಯಂತ ಕಾನೂನುಬದ್ದ ಅನುಮತಿ ಇಲ್ಲದೆ ಹಲವು ಪ್ರವಾಸೋದ್ಯಮ ಸಹಾಯಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂತಹ ಸಂಚಾಲಕರಿಗೆ ಪ್ರವಾಸೋದ್ಯಮ ಇಲಾಖೆಯ ಮೂಲಕ ನೋಂದಣಿ ಪೂರ್ಣಗೊಳಿಸಲು 45 ದಿನಗಳ ಗಡುವು ನೀಡಲಾಗಿದ್ದು, ಗಡುವಿನೊಳಗೆ ನೋಂದಣಿ ಮಾಡಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ: ಇಂದಿನಿಂದ ಅಮೆಜಾನ್ ಪ್ರೈಮ್ ನಲ್ಲಿ ಸಿಂಪಲ್ ಸುನಿ ‘ಗತವೈಭವ’
ಅಕ್ರಮ ಹೋಮ್‌ಸ್ಟೇಗಳ ಸಂಖ್ಯೆಯೂ ಹೆಚ್ಚುತ್ತಿದೆ!
ಇದಕ್ಕೆ ಸಂಬಂಧಿಸಿದಂತೆ, ಅಕ್ರಮ ಪ್ರವಾಸೋದ್ಯಮ ಚಟುವಟಿಕೆಗಳ ಬಗ್ಗೆ ಅಧಿಕಾರಿಗಳಿಗೆ ಬಹುಕಾಲದಿಂದಲೇ ಮಾಹಿತಿ ಇದ್ದರೂ ಸಮರ್ಪಕ ಕ್ರಮ ಕೈಗೊಳ್ಳಲಾಗಿರಲಿಲ್ಲ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿ ಬಂದಿವೆ. ಇದೇ ನಿರ್ಲಕ್ಷ್ಯ ಇತ್ತೀಚಿನ ದೋಣಿ ದುರಂತಕ್ಕೂ ಕಾರಣವಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಅಕ್ರಮ ಸಂಚಾಲಕರ ವಿರುದ್ಧ ತಕ್ಷಣ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ನೋಂದಣಿಯಾಗದ ಪ್ರವಾಸಿ ದೋಣಿಗಳಷ್ಟೇ ಅಲ್ಲದೆ, ಕರಾವಳಿ ಪ್ರದೇಶಗಳು ಹಾಗೂ ಪಶ್ಚಿಮ ಘಟ್ಟಿಗಳ ತಪ್ಪಲಿನಲ್ಲಿ ಅಕ್ರಮ ಹೋಮ್ ಸ್ಟೇಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂಬ ಆರೋಪಗಳಿವೆ. ಇವು ಪರಿಸರಕ್ಕೆ ಹಾನಿ ಉಂಟುಮಾಡುವುದಲ್ಲದೆ, ಅಗತ್ಯ ಅನುಮತಿ ಇಲ್ಲದೆ ಸಾಹಸ ಕ್ರೀಡೆಗಳನ್ನೂ ನಡೆಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧವೂ ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯ ಹೆಚ್ಚಾಗಿದೆ.
Madikeri youth’s sexual activity…youth arrested!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











