ಸಿನಿಮಾ: Tulu Times | ಇತ್ತೀಚೆಗಷ್ಟೇ ನಿರ್ದೇಶಕ ಜಡೇಶ್ ಅವರ ಸಾರಥ್ಯದಲ್ಲಿ ಮೂಡಿಬಂದಂತಹ ‘ಲ್ಯಾಂಡ್ ಲಾರ್ಡ್’ ಚಿತ್ರವು ಈಗಾಗಲೇ ಜನರ ಮನಸ್ಸನ್ನು ಯಶಸ್ವಿಯಾಗಿ ಗೆಲ್ಲುತ್ತಿದೆ. ಕಥೆ, ನಟನೆ ಎಲ್ಲವನ್ನು ಸಿನಿ ಪ್ರಿಯರು ಕೊಂಡಾಡಿದ್ದಾರೆ. ಈ ಸಂದರ್ಭದಲ್ಲಿ ಚಿತ್ರತಂಡವು ಇಂದು ಮಧ್ಯಾಹ್ನ 1:45ಕ್ಕೆ ಜಾತವನ್ನು ಏರ್ಪಡಿಸಿತು.
ಈ ಜಾಥಾದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳ ಜೊತೆಗೆ ನಟ ದುನಿಯಾ ವಿಜಯ್ ಅವರು ಪಾಲ್ಗೊಂಡಿದ್ದರು. ಸುಮಾರು 2 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಸಾಗಿದರು.ಈ ಸಂಧರ್ಭದಲ್ಲಿ ಸಲಗ ವಿಜಯ್ ಅವರು ಒಂದು ಹೆಣ್ಣು ಮಗುವಿಗೆ ಭೀಮ ಪುತ್ರಿ ಎಂದು ಹೆಸರಿಟ್ಟು ನಾಮಕರಣ ಮಾಡಿದರು. ಜೊತೆಗೆ ಆ ಮಗುವಿನ ಮುಂದಿನ ಭವಿಷ್ಯಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು 25,000 ಹಾಗೂ ಸಲಗ ವಿಜಯ ಅವರು 75,000 ಒಳಗೊಂಡಂತೆ ಒಟ್ಟು ಒಂದು ಲಕ್ಷ ದೇಣಿಗೆಯನ್ನು ನೀಡುತ್ತಿರುವ ವಿಚಾರವನ್ನು ಘೋಷಿಸಿದರು.
ಇದಾದ ಬಳಿಕ ಮಾತನಾಡಿರುವ ದುನಿಯಾ ವಿಜಯ್ ಅವರು ಅಂಬೇಡ್ಕರ್ ರವರು ಸಂವಿಧಾನ ಬರೆದಿರೋದು ಎಲ್ಲರಿಗೂ ಯಾವುದೇ ಪ್ರತ್ಯೇಕ ಜಾತಿಗಲ್ಲ. ಪ್ರತಿಯೊಬ್ಬರಿಗೂ ಈ ಸಂವಿಧಾನ ಬೇಕು. ಈ ಹೋರಾಟ ಯಾರದೋ ಮೇಲಿನ ದ್ವೇಷ ಕಲ್ಲ ಅಥವಾ ಕಿಚ್ಚಿಗಲ್ಲ ಇದು ನನ್ನ ಸಂವಿಧಾನಕ್ಕಾಗಿ ಎಂದು ಹೇಳಿದರು. ಜೊತೆಗೆ ನೆರೆದಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಬೆಂಗಳೂರ ವಿಶ್ವವಿದ್ಯಾಲಯ, ಮಾಧ್ಯಮ ಮಿತ್ರರಿಗೂ ಧನ್ಯವಾದವನ್ನು ಕೋರಿದರು.
ಇದನ್ನೂ ಓದಿ: ಸೋಂಕಿತ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಲ್ ರೋಗ
ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಹೊಸ ಸಿನಿಮಾದ ಟೈಟಲ್ ರಿವೀಲ್..!
ಟಾಲಿವುಡ್ ಸ್ಟಾರ್ ಕಪಲ್ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಒಂದಾಗಿದ್ದಾರೆ. ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರಡ್ ಬಳಿಕ ಈ ಜೋಡಿಯ ಹೊಸ ಸಿನಿಮಾ ಘೋಷಣೆಯಾಗಿದೆ. ನಿನ್ನೆ ಗಣರಾಜ್ಯೋತ್ಸವದ ಅಂಗವಾಗಿ ಟೈಟಲ್ ಗ್ಲಿಂಪ್ಸ್ ಜೊತೆಗೆ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಾಗಿದೆ.
ರಣಬಾಲಿಯಾಗಿ ವಿಜಯ್ ದೇವರಕೊಂಡ ಅಬ್ಬರಿಸಿದ್ದಾರೆ. ವಿಜಯ್ 14ನೇ ಸಿನಿಮಾಗೆ ರಣಬಾಲಿ ಎಂಬ ಶೀರ್ಷಿಕೆ ಇಡಲಾಗಿದೆ. 19ನೇ ಶತಮಾನದಲ್ಲಿ ಬ್ರಿಟಿಷರು ಉಂಟುಮಾಡಿದ ನೋವುಗಳ ಮೇಲೆ ಬೆಳಕು ಚೆಲ್ಲುವುದಲ್ಲದೇ, ಭಾರತದ ಬೃಹತ್ ಆರ್ಥಿಕ ಶೋಷಣೆಯ ಬಗ್ಗೆಯೂ ರಣಬಾಲಿ ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತಿದೆ.
ಸೂಪರ್ ಹಿಟ್ ಟಾಕ್ಸಿವಾಲಾ ಸಿನಿಮಾ ಬಳಿಕ ವಿಜಯ್ ದೇವರಕೊಂಡ ಹಾಗೂ ನಿರ್ದೇಶಕ ರಾಹುಲ್ ಸಂಕೃತ್ಯಾನ್ ರಣಬಾಲಿಗಾಗಿ ಕೈ ಜೋಡಿಸಿದ್ದಾರೆ. ಜಯಮ್ಮ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ದಿ ಮಮ್ಮಿಖ್ಯಾತಿಯ ಅರ್ನಾಲ್ಡ್ ಮೋಸ್ ಸರ್ ಥಿಯೋಡರ್ ಹೆಕ್ಟರ್ ತಾರಾ ಬಳಗದಲ್ಲಿದ್ದಾರೆ.
ಡಿಯರ್ ಕಾಮೇಡ್ ಮತ್ತು ಖುಷಿ ಸಿನಿಮಾ ಬಳಿಕ ಮೈತ್ರಿ ಮೂವೀ ಮೇಕರ್ಸ್ ವಿಜಯ್ ದೇವರಕೊಂಡ ರಣಬಾಲಿಗೆ ಹಣ ಹಾಕುತ್ತಿದೆ. ಈ ಚಿತ್ರವನ್ನು ನವೀನ್ ಯೆರ್ನೇನಿ ಮತ್ತು ವೈರವಿಶಂಕರ್ ನಿರ್ಮಿಸಿದ್ದು, ಟಿ-ಸೀರೀಸ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ಇದೇ ವರ್ಷ ಸೆಪ್ಟೆಂಬರ್ 11ರಂದು ರಣಬಾಲಿ ಸಿನಿಮಾ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಹಾಗೂ ಕುಟುಂಬಕ್ಕೆ ಬಿಗ್ ರಿಲೀಫ್
‘Landlord’ Jatha: Students from Vijay Bennige- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











