Ullala: ಮಲತಂದೆಯೊಬ್ಬ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕುಂಪಲದಲ್ಲಿ ನಡೆದಿದೆ. ಈ ಪ್ರಕರಣದ ಆರೋಪಿ ಅಮೀರ್ ಎಂಬಾತನ್ನು ಉಳ್ಳಾಲ ಪೊಲೀಸರು ಅ. 19 ರವಿವಾರ ಬಂಧಿಸಿದ್ದಾರೆ.
ತಂದೆಯನ್ನು ಕಳೆದುಕೊಂಡಿದ್ದ ಅಪ್ರಾಪ್ತೆಯ ತಾಯಿಯು ಅಮೀರ್ ಎಂಬಾತನ ಜೊತೆಗೆ ವಿವಾಹವಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅಪ್ರಾಪ್ತೆಯ ತಾಯಿ ಹಾಗೂ ಆಪ್ರಾಪ್ತೆಯು ಮಲಗಿದ್ದ ಸಂದರ್ಭ ಆರೋಪಿ ಏಕಾಏಕಿ ಅಪ್ರಾಪ್ತೆಯ ಮೆಲೆ ಅತ್ಯಾಚಾರವೆಸಗಿದ್ದಾನೆ. ಈ ಸಂಧರ್ಭ ಜೋರಾಗಿ ಕಿರುಚಿಕೊಂಡಿದ್ದ ಆಕೆಯ ಬಾಯಿಗೆ ತಲೆದಿಂಬು ತುರುಕಿ ಬಾಯಿ ಮುಚ್ಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಘಟನೆಯ ನಂತರ ಬಾಡಿಗೆ ಮನೆ ಬಿಟ್ಟು ತನ್ನ ಅಜ್ಜಿ ಮನೆಯಿಂದ ಶಾಲೆ ಹೋಗುತ್ತಿದ್ದ ಸಂತ್ರಸ್ತೆ ಬಿಡುವಿನ ಸಮಯದಲ್ಲಿ ತನ್ನ ತಾಯಿಯನ್ನು ನೋಡಲು ಬರುತ್ತಿದ್ದಳು. ಈ ಸಂದರ್ಭ ಸಂತ್ರಸ್ತೆಯು ನಡೆದ ಘಟನೆಯನ್ನು ತನ್ನ ತಾಯಿಗೆ ತಿಳಿಸಿದ್ದಾಳೆ. ತದನಂತರ ಈ ವಿಷಯ ಸಂತ್ರಸ್ತೆಯ ಅಜ್ಜಿ ಮನೆಯವರಿಗೂ ಗೊತ್ತಾಗಿದ್ದು, ಆ ಬಳಿಕ ಸಂತ್ರಸ್ತೆಯ ಮನೆಯವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಪ್ರಾಪ್ತೆಯನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆ ಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅತ್ಯಾಚಾರ ನಡೆದಿರುವುದು ದೃಢವಾಗಿದೆ. ಉಳ್ಳಾಲ ಪೊಲೀಸರು ಪೋಕ್ಸೋ ಪ್ರಕರಣದಡಿ ಆರೋಪಿ ಅಮೀರ್ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Mangaluru: ಮಾತಲ್ಲೇ ಮೋಡಿಗೈದು ಲಕ್ಷಾಂತರ ಮೋಸ – ವಂಚಕಿಯ ಬಂಧನ
——————
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess











