ಬ್ರೇಕಿಂಗ್ ನ್ಯೂಸ್
ಕರ್ನಾಟಕ

ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಹೊಸ ಸಿನಿಮಾದ ಟೈಟಲ್ ರಿವೀಲ್..!

ಸಿನಿಮಾ: Tulu Times | ಟಾಲಿವುಡ್ ಸ್ಟಾರ್ ಕಪಲ್ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮತ್ತೊಮ್ಮೆ‌ ಒಂದಾಗಿದ್ದಾರೆ. ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಬಳಿಕ ಈ ಜೋಡಿ‌ಯ ಹೊಸ ಸಿನಿಮಾ ಘೋಷಣೆಯಾಗಿದೆ. ನಿನ್ನೆ ಗಣರಾಜ್ಯೋತ್ಸವದ ಅಂಗವಾಗಿ ಟೈಟಲ್ ಗ್ಲಿಂಪ್ಸ್ ಜೊತೆಗೆ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಾಗಿದೆ.

ರಣಬಾಲಿಯಾಗಿ ವಿಜಯ್ ದೇವರಕೊಂಡ ಅಬ್ಬರಿಸಿದ್ದಾರೆ. ವಿಜಯ್ 14ನೇ ಸಿನಿಮಾಗೆ ರಣಬಾಲಿ ಎಂಬ ಶೀರ್ಷಿಕೆ ಇಡಲಾಗಿದೆ. ‌19ನೇ ಶತಮಾನದಲ್ಲಿ ಬ್ರಿಟಿಷರು ಉಂಟುಮಾಡಿದ ನೋವುಗಳ ಮೇಲೆ ಬೆಳಕು ಚೆಲ್ಲುವುದಲ್ಲದೇ, ಭಾರತದ ಬೃಹತ್ ಆರ್ಥಿಕ ಶೋಷಣೆಯ ಬಗ್ಗೆಯೂ ರಣಬಾಲಿ ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತಿದೆ.

ಸೂಪರ್ ಹಿಟ್ ಟಾಕ್ಸಿ ವಾಲಾ ಸಿನಿಮಾ ಬಳಿಕ ವಿಜಯ್ ದೇವರಕೊಂಡ ಹಾಗೂ ನಿರ್ದೇಶಕ ರಾಹುಲ್ ಸಂಕೃತ್ಯಾನ್ ರಣಬಾಲಿಗಾಗಿ ಕೈ ಜೋಡಿಸಿದ್ದಾರೆ. ಜಯಮ್ಮ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ, ದಿ ಮಮ್ಮಿ ಖ್ಯಾತಿಯ ಅರ್ನಾಲ್ಡ್ ಮೋಸ್ಲೂ, ಸರ್ ಥಿಯೋಡರ್ ಹೆಕ್ಟರ್ ತಾರಾ ಬಳಗದಲ್ಲಿದ್ದಾರೆ.

ಡಿಯರ್ ಕಾಮ್ರೇಡ್ ಮತ್ತು ಖುಷಿ ಸಿನಿಮಾ ಬಳಿಕ ಮೈತ್ರಿ ಮೂವೀ ಮೇಕರ್ಸ್ ವಿಜಯ್ ದೇವರಕೊಂಡ ರಣಬಾಲಿಗೆ ಹಣ ಹಾಕುತ್ತಿದೆ. ಈ ಚಿತ್ರವನ್ನು ನವೀನ್ ಯೆರ್ನೇನಿ ಮತ್ತು ವೈ ರವಿಶಂಕರ್ ನಿರ್ಮಿಸಿದ್ದು, ಟಿ-ಸೀರೀಸ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ಇದೇ ವರ್ಷ ಸೆಪ್ಟೆಂಬರ್ 11ರಂದು ರಣಬಾಲಿ ಸಿನಿಮಾ ಬಿಡುಗಡೆಯಾಗಲಿದೆ.

ಸಾಯಿಕುಮಾ‌ರ್ ಅಭಿಮಾನಿಯಿಂದ “ಘಾರ್ಗಾ” ಟ್ರೈಲರ್ ಬಿಡುಗಡೆ…!

ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ ಮೊದಲಾದ ಚಿತ್ರಗಳ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾರ್ ನಿರ್ಮಾಣದ ಬಹು ನಿರೀಕ್ಷಿತ ಫಾರ್ಗಾ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಒರಾಯನ್ ಮಾಲ್ ಆವರಣದಲ್ಲಿ ನೆರವೇರಿತು. ಅವರ ಪುತ್ರ ಅರುಣ್ ರಾಮ್‌ ಪ್ರಸಾದ್ ಈ ಚಿತ್ರದ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಫಾರ್ಗಾ ಒಂದು ಊರಿನ ಹೆಸರಾಗಿದ್ದು ದ ಲ್ಯಾಂಡ್ ಆಫ್ ಶಾಡೋ ಎಂಬ ಅಡಿಬರಹ ಚಿತ್ರಕ್ಕಿದೆ.

ಪ್ರಮುಖ ಪಾತ್ರದಲ್ಲಿ ಸಾಯಿಕುಮಾರ್ ಹಾಗೂ ನಾಯಕಿ ಪಾತ್ರದಲ್ಲಿ ರೆಹಾನ ಅಭಿನಯಿಸಿದ್ದಾರೆ. ಎಂ. ಶಶಿಧರ್ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಆ ವೇದಿಕೆಯಲ್ಲಿ ಪೊಲೀಸ್ ಸ್ಟೋರಿ ಚಿತ್ರದ ಡೈಲಾಗ್ ಹೇಳಿದ ಸಾಯಿ ಕುಮಾರ್ ಅವರ ಅಪ್ಪಟ ಅಭಿಮಾನಿಯ ಕೈಲಿ ಚಿತ್ರದ ಟ್ರೈಲರ್ ರಿಲೀಸ್ ಮಾಡಿಸಲಾಯಿತು. ನಂತರ ಮಾತನಾಡಿದ ಸಾಯಿಕುಮಾರ್, ಶಶಿ ನನಗೆ ಈ ಕಥೆ ಹೇಳಿದ ತಕ್ಷಣ ನನಗೆ ಇದರಲ್ಲಿ ಆ್ಯಕ್ಟ್ ಮಾಡಬೇಕು ಅನಿಸಿತು. ನಾನು ಫಸ್ಟ್ ಟೈಮ್ ಇಂಥ ರೋಲ್ ಮಾಡಿರೋದು. ಇನ್ ವೆಸ್ಟಿಗೇಷನ್ ಥರದ ಪಾತ್ರ ಇಂಥ ಡೈರೆಕ್ಟರ್ ಮುಂದೆ ಬರಬೇಕು. ನಿರ್ಮಾಪಕರು ಅಶ್ವಿನಿ ರಾಮ್ ಪ್ರಸಾದ್ ಅಂದಾಗ ಖುಷಿಯಾಯ್ತು ಅವರು ಕನ್ನಡಕ್ಕೆ ಒಳೊಳ್ಳೆ ಚಿತ್ರಗಳನ್ನು ಕೊಟ್ಟವರು. ಸಿನಿಮಾ ತುಂಬಾ ರಿಚ್ ಆಗಿದೆ ಎಂದರು.

Vijay Deverakonda-Rashmika Mandanna’s new movie title revealed..!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page