ಬ್ರೇಕಿಂಗ್ ನ್ಯೂಸ್
ಕರ್ನಾಟಕಬೆಳ್ತಂಗಡಿ

ಮದ್ದಡ್ಕದ ಯುವಕ ಮನನೊಂದು ನೇಣಿಗೆ ಶರಣು

ಬೆಳ್ತಂಗಡಿ:Tulu Times | ಮದ್ದಡ್ಕದ ಹೇಮಂತ್ ಶೆಣೈ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಇಂಜಿನಿಯರ್ ವಿದ್ಯಾರ್ಥಿಯಾಗಿರುವ ಹೇಮಂತ್ ಶೆಣೈ (28) ಎಂಬವರು ಮನೆಯ ಕೊಠಡಿಯ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು  ಮದ್ರಡ್ಕದ ಸಹನಾ ಕ್ಲಿನಿಕ್ ವೈದ್ಯರಾದ ಹರೀಶ್ ಶೆಣೈ ಅವರ ಏಕೈಕ ಪುತ್ರ.  ಈ  ಘಟನೆಯು ಜ.25 ರಂದು ಸಂಜೆ ಸಂಭವಿಸಿದೆ.

ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ  ಸಾಗಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಿಸಲಾಗಿದ್ದು, ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಳ್ತಂಗಡಿ: ಕರೆಂಟ್ ಶಾಕ್ ಹೊಡೆದು ವ್ಯಕ್ತಿ ಸ್ಥಳದಲ್ಲಿಯೇ ಸಾವು!

ಬೆಳ್ತಂಗಡಿ: ಪ್ರತ್ಯೇಕ ಪ್ರಕರಣದಲ್ಲಿ,  ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಗ್ರಾಮದ ಗುರಿಪಳ್ಳ ಸಮೀಪದ ಕಡ್ಡಾರು ನಿವಾಸಿ ಶಿವಪ್ರಸಾದ್ ಅಡಪ(48) ಅವರಿಗೆ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಜ.25 ರಂದು ಬೆಳಿಗ್ಗೆ ಮನೆ ಸಮೀಪ ಪಂಪ್ ಸ್ವಿಚ್ ಹಾಕುವ ಸಂದರ್ಭ ವಿದ್ಯುತ್ ತಗುಲಿದೆ. ನಂತರ ಇವರು ಶಾಕ್ ಗೆ ದೂರ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಮನೆಯವರು ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋಗಿದ್ದಾರೆ. ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ವಿದ್ಯುತ್ ಆಘಾತ ಅಪಾಯಕಾರಿಯಾಗಿದ್ದು, ತಕ್ಷಣದ ಜಾಗೃತಿ ಅಗತ್ಯ ಶಾಕ್ ತಗುಲಿದ ತಕ್ಷಣ ಮುಖ್ಯ ಸ್ವಿಚ್ ಆಫ್ ಮಾಡಿ, ವ್ಯಕ್ತಿಯನ್ನು ಒಣ ಮರ ಅಥವಾ ಪ್ಲಾಸ್ಟಿಕ್‌ನಿಂದ ಬೇರ್ಪಡಿಸಿ. ಉಸಿರಾಟವಿಲ್ಲದಿದ್ದರೆ ತಕ್ಷಣ CPR ನೀಡಿ ಆಸ್ಪತ್ರೆಗೆ ದಾಖಲಿಸಿ, ನೀರು, ಒದ್ದೆಯಾದ ಕೈಗಳ ಬಳಕೆ ಬೇಡ: ಸುರಕ್ಷಿತ ತಂತಿಗಳು ಹಾಗೂ ಅರ್ಥಿಂಗ್ ಬಳಸುವುದು ಒಳ್ಳೆಯದು.

ವಿದ್ಯುತ್ ಶಾಕ್ ಬಗ್ಗೆ ಮುನ್ನೆಚ್ಚರಿಕೆ ಏನು..?

ಒದ್ದೆಯಾದ ಕೈಗಳಿಂದ ಸ್ವಿಚ್‌ಗಳನ್ನು ಮುಟ್ಟಬೇಡಿ ಮತ್ತು ವಿದ್ಯುತ್ ಉಪಕರಣಗಳನ್ನು ಬಳಸಬೇಡಿ. ಒದ್ದೆಯಾದ ಕೈಗಳಿಂದ ಸ್ವಿಚ್‌ಗಳನ್ನು ಮುಟ್ಟಬೇಡಿ ಮತ್ತು ವಿದ್ಯುತ್ ಉಪಕರಣಗಳನ್ನು ಬಳಸಬೇಡಿ.ಮನೆಯಲ್ಲಿ ELCB ಅಥವಾ RCCB ಅಳವಡಿಸುವುದು ಶಾಕ್‌ನಿಂದ ಪ್ರಾಣಾಪಾಯವನ್ನು ತಡೆಯುತ್ತದೆ. ಪ್ಲಗ್ ಪಾಯಿಂಟ್ಗಳಿಗೆ ಸುರಕ್ಷತಾ ಕವರ್‌ಗಳನ್ನು ಬಳಸಿ. ಸರಿಯಾದ ಅರ್ಥಿಂಗ್ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಳ್ಳಿ, ಶಾಕ್ ತಗುಲಿದಾಗ ತಕ್ಷಣ ಮಾಡಬೇಕಾದ್ದು ಏನೆಂದರೆ, ಮುಖ್ಯ ಸ್ವಿಚ್ ಅಥವಾ ಪ್ಲಗ್‌ನಿಂದ ವಿದ್ಯುತ್ ಆಫ್ ಮಾಡಿ.ಸಾಧ್ಯವಾಗದಿದ್ದರೆ, ಒಣ ಮರ, ಪ್ಲಾಸ್ಟಿಕ್ ಅಥವಾ ರಬ್ಬರ್‌ನಂತಹ ವಿದ್ಯುತ್ ಅವಾಹಕ ವಸ್ತುಗಳನ್ನು ಬಳಸಿ ವ್ಯಕ್ತಿಯನ್ನು ವಿದ್ಯುತ್ ಮೂಲದಿಂದ ಬೇರ್ಪಡಿಸಿ. ಕೈಯಿಂದ ನೇರವಾಗಿ ಮುಟ್ಟಬೇಡಿ.ಶಾಕ್ ತಗುಲಿದ ವ್ಯಕ್ತಿಯನ್ನು ಸ್ಪರ್ಶಿಸುವ ಮುನ್ನ ನೀವು ರಬ್ಬರ್ ಚಪ್ಪಲಿ ಧರಿಸಿರುವುದನ್ನು ಖಚಿತಪಡಿಸಿಕೊಳ್ಳಿ.

A young man from Maddadka hanged himself with a broken heart.- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 159

You cannot copy content of this page