ಬೆಳ್ತಂಗಡಿ:Tulu Times | ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಗ್ರಾಮದ ಗುರಿಪಳ್ಳ ಸಮೀಪದ ಕಡ್ಡಾರು ನಿವಾಸಿ ಶಿವಪ್ರಸಾದ್ ಅಡಪ(48) ಅವರಿಗೆ
ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಜ.25 ರಂದು ಬೆಳಿಗ್ಗೆ ಮನೆ ಸಮೀಪ ಪಂಪ್ ಸ್ವಿಚ್ ಹಾಕುವ ಸಂದರ್ಭ ವಿದ್ಯುತ್ ತಗುಲಿದೆ. ನಂತರ ಇವರು ಶಾಕ್ ಗೆ ದೂರ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಮನೆಯವರು ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋಗಿದ್ದಾರೆ. ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ವಿದ್ಯುತ್ ಶಾಕ್ ಆದ್ರೆ ಏನು ಮಾಡಬೇಕು..?
ವಿದ್ಯುತ್ ಆಘಾತ ಅಪಾಯಕಾರಿಯಾಗಿದ್ದು, ತಕ್ಷಣದ ಜಾಗೃತಿ ಅಗತ್ಯ. ಶಾಕ್ ತಗುಲಿದ ತಕ್ಷಣ ಮುಖ್ಯ ಸ್ವಿಚ್ ಆಫ್ ಮಾಡಿ, ವ್ಯಕ್ತಿಯನ್ನು ಒಣ ಮರ ಅಥವಾ ಪ್ಲಾಸ್ಟಿಕ್‌ನಿಂದ ಬೇರ್ಪಡಿಸಿ. ಉಸಿರಾಟವಿಲ್ಲದಿದ್ದರೆ ತಕ್ಷಣ CPR ನೀಡಿ ಆಸ್ಪತ್ರೆಗೆ ದಾಖಲಿಸಿ. ನೀರು, ಒದ್ದೆಯಾದ ಕೈಗಳ ಬಳಕೆ ಬೇಡ; ಸುರಕ್ಷಿತ ತಂತಿಗಳು ಹಾಗೂ ಅರ್ಥಿಂಗ್ ಬಳಸುವುದು ಒಳ್ಳೆಯದು.
ವಿದ್ಯುತ್ ಶಾಕ್ ಬಗ್ಗೆ ಮುನ್ನೆಚ್ಚರಿಕೆ ಏನು..?
ಒದ್ದೆಯಾದ ಕೈಗಳಿಂದ ಸ್ವಿಚ್‌ಗಳನ್ನು ಮುಟ್ಟಬೇಡಿ ಮತ್ತು ವಿದ್ಯುತ್ ಉಪಕರಣಗಳನ್ನು ಬಳಸಬೇಡಿ. ಒದ್ದೆಯಾದ ಕೈಗಳಿಂದ ಸ್ವಿಚ್‌ಗಳನ್ನು ಮುಟ್ಟಬೇಡಿ ಮತ್ತು ವಿದ್ಯುತ್ ಉಪಕರಣಗಳನ್ನು ಬಳಸಬೇಡಿ.ಮನೆಯಲ್ಲಿ ELCB ಅಥವಾ RCCB ಅಳವಡಿಸುವುದು ಶಾಕ್‌ನಿಂದ ಪ್ರಾಣಾಪಾಯವನ್ನು ತಡೆಯುತ್ತದೆ. ಪ್ಲಗ್ ಪಾಯಿಂಟ್‌ಗಳಿಗೆ ಸುರಕ್ಷತಾ ಕವರ್‌ಗಳನ್ನು ಬಳಸಿ. ಸರಿಯಾದ ಅರ್ಥಿಂಗ್ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಳ್ಳಿ. ಶಾಕ್ ತಗುಲಿದಾಗ ತಕ್ಷಣ ಮಾಡಬೇಕಾದ್ದು ಏನೆಂದರೆ, ಮುಖ್ಯ ಸ್ವಿಚ್ ಅಥವಾ ಪ್ಲಗ್‌ನಿಂದ ವಿದ್ಯುತ್ ಆಫ್ ಮಾಡಿ.ಸಾಧ್ಯವಾಗದಿದ್ದರೆ, ಒಣ ಮರ, ಪ್ಲಾಸ್ಟಿಕ್ ಅಥವಾ ರಬ್ಬರ್‌ನಂತಹ ವಿದ್ಯುತ್ ಅವಾಹಕ ವಸ್ತುಗಳನ್ನು ಬಳಸಿ ವ್ಯಕ್ತಿಯನ್ನು ವಿದ್ಯುತ್ ಮೂಲದಿಂದ ಬೇರ್ಪಡಿಸಿ. ಕೈಯಿಂದ ನೇರವಾಗಿ ಮುಟ್ಟಬೇಡಿ.ಶಾಕ್ ತಗುಲಿದ ವ್ಯಕ್ತಿಯನ್ನು ಸ್ಪರ್ಶಿಸುವ ಮುನ್ನ ನೀವು ರಬ್ಬರ್ ಚಪ್ಪಲಿ ಧರಿಸಿರುವುದನ್ನು ಖಚಿತಪಡಿಸಿಕೊಳ್ಳಿ.
ವಿದ್ಯುತ್ ಸ್ಪರ್ಶಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿರುತ್ತದೆ. ಆದರೂ ಕೂಡ ಆಕಸ್ಮಿಕವಾಗಿ ಯಾವುದಾದರೂ ಒಂದು ರೀತಿಯಲ್ಲಿ ವಿದ್ಯುತ್ ಅವಘಡಗಳಾಗುತ್ತವೆ. ಅಂತಹ ಸಂದರ್ಭದಲ್ಲಿ ಏನು ಮಾಡಬೇಕು? ಮತ್ತು ಏನು ಮಾಡಬಾರದು ಎನ್ನುವುದನ್ನು ತಿಳಿದುಕೊಂಡಿದ್ದರೆ ಅಂತಹ ಸನ್ನಿವೇಶ ಎದುರಾದಾಗ ಸರಿಯಾದ ಪ್ರಥಮ ಚಿಕಿತ್ಸೆ ನೀಡಿ ನಡೆಯುವ ಅವಘಡವನ್ನು ತಪ್ಪಿಸಬಹುದು.
Belthangady: Man dies of electric shock- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











