ಬೆಂಗಳೂರು : Tulu Times | ಬಾಲ್ಯವಿವಾಹ ಕಾನೂನುಬಾಹಿರ ಎಂಬ ಬಗ್ಗೆ ವ್ಯಾಪಕ ಜಾಗೃತಿ ಹಾಗೂ ಸರ್ಕಾರದ ಹಲವು ಕ್ರಮಗಳಿದ್ದರೂ ಕರ್ನಾಟಕದಲ್ಲಿ ಈ ಸಾಮಾಜಿಕ ಕೆಡುಕು ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಂಯುಕ್ತ ಪ್ರಯತ್ನದ ಫಲವಾಗಿ 2023ರಿಂದ 2025ರ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 8,355 ಬಾಲ್ಯವಿವಾಹ ಸಂಬಂಧಿತ ದೂರುಗಳು ದಾಖಲಾಗಿವೆ. ಇವುಗಳಲ್ಲಿ ಅಧಿಕಾರಿಗಳು 6,157 ಬಾಲ್ಯವಿವಾಹಗಳನ್ನು ಸಮಯಕ್ಕೆ ಮುನ್ನವೇ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಜಾಗೃತಿ ಅಭಿಯಾನಗಳ ನಡುವೆಯೂ ಮೂರು ವರ್ಷಗಳಲ್ಲಿ 2,198 ಬಾಲ್ಯವಿವಾಹಗಳು ನಡೆದಿದ್ದು, ಈ ಸಂಬಂಧ 2,170 ಎಫ್ಐಆರ್ಗಳು ದಾಖಲಾಗಿವೆ.
2025ರ ಜಿಲ್ಲಾವಾರು ಅಂಕಿಅಂಶಗಳು ;
2025ರಲ್ಲಿ ದಾಖಲಾಗಿದ ಪ್ರಕರಣಗಳ ಪ್ರಕಾರ – ಬೆಳಗಾವಿಯಲ್ಲಿ 44, ಬಳ್ಳಾರಿಯಲ್ಲಿ 23, ಚಿತ್ರದುರ್ಗದಲ್ಲಿ 64, ಕೋಲಾರದಲ್ಲಿ 62, ಶಿವಮೊಗ್ಗದಲ್ಲಿ 57, ಚಿಕ್ಕಮಗಳೂರಿನಲ್ಲಿ 19, ಚಿಕ್ಕಬಳ್ಳಾಪುರದಲ್ಲಿ 16, ಬೆಂಗಳೂರು ಗ್ರಾಮಾಂತರದಲ್ಲಿ 8, ಬಾಗಲಕೋಟೆಯಲ್ಲಿ 7 ಪ್ರಕರಣಗಳು ದಾಖಲಾಗಿವೆ. ದಾವಣಗೆರೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ತಲಾ 14 ಪ್ರಕರಣಗಳು ವರದಿಯಾಗಿವೆ.
ಇದನ್ನೂ ಓದಿ : ಮಲ್ಪೆ ಬಂದರಿನಲ್ಲಿ ಅಪರೂಪದ ಘಟನೆ: ಕತ್ತರಿಸಿದರೂ ಜೀವಂತವಾಗಿದ್ದ ಮ್ಯಾಕ್ರೆಲ್ (ಬಂಗುಡೆ) ಮೀನು
ಮನೋಭಾವ ಬದಲಾವಣೆಯ ಕೊರತೆ ಮುಖ್ಯ ಕಾರಣ ;
2006ರ ಬಾಲ್ಯವಿವಾಹ ನಿಷೇಧ ಕಾಯ್ದೆ, ಅದರ 2016ರ ತಿದ್ದುಪಡಿ ಹಾಗೂ ಕರ್ನಾಟಕ ನಿಯಮಾವಳಿ ಜಾರಿಯಲ್ಲಿದ್ದರೂ, ಪೋಷಕರ ಮನೋಭಾವದಲ್ಲಿ ಸಮರ್ಪಕ ಬದಲಾವಣೆ ಆಗದಿರುವುದು ಹಾಗೂ ಸಮಾಜದಲ್ಲಿ ಸಾಕಷ್ಟು ಜಾಗೃತಿ ಮೂಡದಿರುವುದು ಈ ಸಮಸ್ಯೆ ಮುಂದುವರಿಯಲು ಪ್ರಮುಖ ಕಾರಣಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪರಿಸ್ಥಿತಿ ಬಾಲ್ಯವಿವಾಹವು ಇನ್ನೂ ಗಂಭೀರ ಸಾಮಾಜಿಕ ಸಮಸ್ಯೆಯಾಗಿಯೇ ಉಳಿದಿದ್ದು, ಇದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸರ್ಕಾರದ ಕ್ರಮಗಳ ಜೊತೆಗೆ ಸಮಾಜದ ಸಹಕಾರ ಹಾಗೂ ಮನಸ್ಥಿತಿಯ ಬದಲಾವಣೆ ಅಗತ್ಯವಾಗಿದೆ ಎಂಬುದನ್ನು ತೋರಿಸುತ್ತಿದೆ.
Child marriage continues despite awareness: 8,355 complaints filed in Karnataka – ತುಳು ಟೈಮ್ಸ್
ಇದನ್ನೂ ಓದಿ : ಬಿಜೆಪಿ ಮತ್ತು ಜೆಡಿಎಸ್ ಒಗ್ಗೂಡಿ, ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/yx1fqcpWfnc?si=7BT1OapmG9a1fASt











