ಉಡುಪಿ : Tulu Times | ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ಅಪರೂಪದ ಹಾಗೂ ಅಚ್ಚರಿ ಮೂಡಿಸುವ ಘಟನೆ ವರದಿಯಾಗಿದ್ದು, ಕತ್ತರಿಸಿದ ಬಳಿಕವೂ ಬಂಗುಡೆ ಮೀನು ಜೀವಂತವಾಗಿ ಮಿಸುಕಾಡುತ್ತಿರುವುದು ಕಂಡುಬಂದಿದೆ.
ಬಂದರಿನಲ್ಲಿದ್ದ ಮಹಿಳಾ ಮೀನು ವ್ಯಾಪಾರಿಯಿಂದ ಗ್ರಾಹಕನೊಬ್ಬ ಮ್ಯಾಕ್ರೆಲ್ (ಬಂಗುಡೆ) ಮೀನು ಖರೀದಿಸಿ ಕತ್ತರಿಸಿಕೊಡುವಂತೆ ಕೇಳಿಕೊಂಡಿದ್ದಾನೆ. ವ್ಯಾಪಾರಿ ಮೀನುಗಳನ್ನು ಸ್ವಚ್ಛಗೊಳಿಸಿ ತುಂಡುಗಳಾಗಿ ಕತ್ತರಿಸಿ ಟಬ್ನಲ್ಲಿ ಇಡುತ್ತಿದ್ದ ವೇಳೆ, ಒಂದೊಂದು ಮೀನು ಅಚಾನಕ್ವಾಗಿ ಚಲಿಸುತ್ತಿರುವುದು ಗಮನಕ್ಕೆ ಬಂದಿದೆ. ಮೀನನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿತ್ತು. ಜೊತೆಗೆ ನಡುನಡುವೆ ಗೆರೆಗಳನ್ನೆಳೆದು ಕೊಯ್ಯಲಾಗಿತ್ತಾದರೂ ಇದೊಂದು ಅಚ್ಚರಿಯಂತೆ ಕಂಡುಬಂದಿದೆ.
ಈ ದೃಶ್ಯವನ್ನು ಕಂಡ ಅಲ್ಲಿದ್ದ ಜನರು ಬೆಚ್ಚಿಬಿದ್ದಿದ್ದು, ಅಚ್ಚರಿಯಿಂದ ಬೆರಗಾದರು. ಹಲವು ಮಂದಿ ತಮ್ಮ ಮೊಬೈಲ್ ಫೋನ್ಗಳಲ್ಲಿ ಈ ಘಟನೆಯನ್ನು ವೀಡಿಯೋವಾಗಿ ದಾಖಲಿಸಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ನಡುವೆ ಭಾರೀ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.
Rare incident at Malpe Port: Mackerel fish found alive despite being cut – ತುಳು ಟೈಮ್ಸ್
ಇದನ್ನೂ ಓದಿ : ಬಿಜೆಪಿ ಮತ್ತು ಜೆಡಿಎಸ್ ಒಗ್ಗೂಡಿ, ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/yx1fqcpWfnc?si=7BT1OapmG9a1fASt











