ಮಂಗಳೂರು: Tulu Times | ದ.ಕ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ಕೋವಿಯಿಂದ ಗುಂಡು ಹಾರಿಸಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ.
ಘಟನೆ ನಡೆದದ್ದೇನು..?
ಕೌಟುಂಬಿಕ ಕಲಹದಲ್ಲಿ ಮನೆಯಲ್ಲಿ ಸಂಘರ್ಷ ನಡೆದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಬಾಲಕನ ತಂದೆಯೂ ಚೂರಿಯಿಂದ ಇರಿದ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಂದೆ ಮತ್ತು ಮಗನ ಮಧ್ಯೆ ಮನೆಯಲ್ಲಿ ಪರಸ್ಪರ ಜಗಳ ನಡೆದಿದೆ ಎಂಬ ಮಾಹಿತಿ ಇತ್ತು. ಈ ವೇಳೆ ಕೋವಿಯಿಂದ ಗುಂಡು ಹಾರಿದ್ದು, ಗುಂಡು ತಗುಲಿ ಬಾಲಕ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ರಾಮಕುಂಜದ ವಸಂತ್ ಅಮೀನ್ ಪುತ್ರ ಮೋಕ್ಷ ಎಂಬ ಬಾಲಕ ಸಾವನ್ನಪ್ಪಿದ್ದಾನೆ. ಬಾಲಕನ ಸಾವು ಹಲವು ಅನುಮಾನಕ್ಕೆ ಕಾರಣವಾಗಿದೆ.
ಬಾಲಕನೇ ಶೂಟ್ ಮಾಡಿಕೊಂಡಿದ್ದಾ ಅಥವಾ ತಂದೆಯೇ ಶೂಟ್ ಮಾಡಿದ್ದಾ ಎಂಬ ಬಗ್ಗೆ ಅನುಮಾನ ಮೂಡಿದೆ, ಗಲಾಟೆಯಲ್ಲಿ ತಂದೆ ವಸಂತ್ ಅಮೀನ್ ಗೂ ಚೂರಿ ಇರಿತದ ಗಾಯವಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಾಲಕ ಮೋಕ್ಷ ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿದ್ದ ಎನ್ನಲಾಗಿದೆ. ಬಾಲಕನ ಸಾವಿಗೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಕಡಬ ಠಾಣೆ ಪೊಲೀಸರಿಂದ ಘಟನೆ ನಡೆದ ಸ್ಥಳದಲ್ಲಿ ತೀವ್ರ ತನಿಖೆ ನಡೆಯುತ್ತಿದೆ.
ಬಸ್ ಹಾಗೂ ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲಿಯೇ ಸಾವು
ಕುಂದಾಪುರ: ಪ್ರತ್ಯೇಕ ಪ್ರಕರಣದಲ್ಲಿ, ಕುಂದಾಪುರ ತಾಲೂಕಿನ ಶೆಟ್ರಿಕಟ್ಟಿ ತಿರುವಿನಲ್ಲಿ ಬಸ್ ಹಾಗೂ ಬೈಕ್ ಮುಖಾಮುಖಿ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿದ್ದಾರೆ.
ಸೌಕೂರು ನಿವಾಸಿ ವಿಜಯ್ (36) ಮೃತ ಪಟ್ಟಿ ಯುವಕ. ಶನಿವಾರ ಬೆಳಿಗ್ಗೆ ಆಹಾರ ವಸ್ತುಗಳನ್ನು ಖರೀದಿಸಿ ಬೈಕಿನಲ್ಲಿ ತಲ್ಲೂರು ಮೂಲಕ ಸೌಕೂರು ಕಡೆಗೆ ಮರಳುತ್ತಿದ್ದವೇಳೆ ಈ ಘಟನೆ ನಡೆದಿದೆ. ಖಾಸಗಿ ಬಸ್‌ವೊಂದನ್ನು ಶೆಟ್ಟಿಕಟ್ಟಿ ತಿರುವಿನಲ್ಲಿ ಓವರ್ ಟೇಕ್ ಮಾಡುವಾಗ ಎದುರಿನಿಂದ ಬಂದ ಇನ್ನೊಂದು ಖಾಸಗಿ ಬಸ್ ಗೆ ಢಿಕ್ಕಿ ಹೊಡೆದಿದೆ. ಡಿಕ್ಕಿಯಾದ ವೇಗಕ್ಕೆ ವಿಜಯ್‌ಗೆ ಗಂಭೀರ ಗಾಯಗಳಾಗಿವೆ. ವಿಜಯ್ ತ್ರಾಸಿಯಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದು, ಖಾಸಗಿ ಬಸ್‌ವೊಂದನ್ನು ಶೆಟ್ಟಿಕಟ್ಟಿ ತಿರುವಿನಲ್ಲಿ ಓವರ್ ಟೇಕ್ ಮಾಡುವಾಗ ಅಪಘಾತ ಸಂಭವಿಸಿದೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
mangaluru-boys-body-found-shoot-to-death- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











