ಕುಂದಾಪುರ: Tulu Times |ಕುಂದಾಪುರ ತಾಲೂಕಿನ ಶೆಟ್ರಿಕಟ್ಟೆ ತಿರುವಿನಲ್ಲಿ ಬಸ್ ಹಾಗೂ ಬೈಕ್ ಮುಖಾಮುಖಿ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿದ್ದಾರೆ.
ಸೌಕೂರು ನಿವಾಸಿ ವಿಜಯ್ (36) ಮೃತ ಪಟ್ಟ ಯುವಕ. ಶನಿವಾರ ಬೆಳಿಗ್ಗೆ ಆಹಾರ ವಸ್ತುಗಳನ್ನು ಖರೀದಿಸಿ ಬೈಕಿನಲ್ಲಿ ತಲ್ಲೂರು ಮೂಲಕ ಸೌಕೂರು ಕಡೆಗೆ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಖಾಸಗಿ ಬಸ್ವೊಂದನ್ನು ಶೆಟ್ಟಿಕಟ್ಟೆ ತಿರುವಿನಲ್ಲಿ ಓವರ್ ಟೇಕ್ ಮಾಡುವಾಗ ಎದುರಿನಿಂದ ಬಂದ ಇನ್ನೊಂದು ಖಾಸಗಿ ಬಸ್ ಗೆ ಢಿಕ್ಕಿ ಹೊಡೆದಿದೆ. ಡಿಕ್ಕಿಯಾದ ವೇಗಕ್ಕೆ ವಿಜಯ್ಗೆ ಗಂಭೀರ ಗಾಯಗಳಾಗಿವೆ. ವಿಜಯ್ ತ್ರಾಸಿಯಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದು, ಖಾಸಗಿ ಬಸ್ವೊಂದನ್ನು ಶೆಟ್ಟಿಕಟ್ಟೆ ತಿರುವಿನಲ್ಲಿ ಓವರ್ ಟೇಕ್ ಮಾಡುವಾಗ ಅಪಘಾತ ಸಂಭವಿಸಿದೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು: ಬಾರ್ ಮಾಲೀಕನಿಗೆ ಕೆಲಸಗಾರನಿಂದ ಹಲ್ಲೆ
ಪುತ್ತೂರು: ಕಮ್ಮಿಂಜೆ ಕಲ್ಲಗುಡ್ಡೆಯಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡಿದ್ದ ಹಳೆ ಕೆಲಸಗಾರನೊಬ್ಬ ಹಲ್ಲೆ ನಡೆಸಿರುವ ಘಟನೆ ನಡೆದಿದೆ
ವಿಜಯ ಬಿಎಸ್ ಮತ್ತು ಅಲ್ಲಿದ್ದ ಪ್ರಸಾದ್ ಎನ್ನುವವರಿಗೆ ಬಾರ್ಲ್ಲಿ ಹಿಂದೆ ಅಡುಗೆ ಕೆಲಸ ಮಾಡಿಕೊಂಡಿದ್ದಗಿರೀಶ್ ಎನ್ನುವ ವ್ಯಕ್ತಿ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಕಮ್ಮಿಂಜೆ ಕಲ್ಲಗುಡ್ಡೆಯಲ್ಲಿ ಸ್ವಾತಿ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಘಟನೆ ನಡೆದಿದೆ.
ಇಬ್ಬರ ಜಗಳ ಶುರುವಾಗಿದ್ದು ಹೇಗೆ..?
ಇನ್ನು ಪಾತ್ರೆಯ ವಿಚಾರವಾಗಿ ಜಗಳ ಶುರುವಾಗಿದೆ. ಗಿರೀಶ್ ಕೆಲವು ಸಮಯಗಳ ಹಿಂದೆ ಕೆಲಸ ಬಿಟ್ಟಿದ್ದಾರೆ. ಜ19 ರಂದು ವಾಪಸು ಬಾರ್ ಬಂದು, ‘ನಾನು ಅಡುಗೆ ಸಮಯ ತಂದಿರುವ ಪಾತ್ರೆಗಳು ಇಲ್ಲಿದೆ. ಅದನ್ನು ಕೊಂಡು ಹೋಗಲು ಬಂದಿರುವುದಾಗಿ ಹೇಳಿದ್ದಾರೆ. ಆಗ ವಿಜಯ ಬಿ.ಎಸ್ ಅವರು ಇಲ್ಲಿ ನಿಮ್ಮ ಒಂದೇ ಪಾತ್ರೆ ಇರುವುದು ಎಂದಿದ್ದಾರೆ. ಗಿರೀಶ್ ಕೋಪದಿಂದ ವಿಜಯ್ ಅವರಿಗೆ ಹಲ್ಲೆ ಮಾಡಿದ್ದಾರೆ. ಇನ್ನು ಹಲ್ಲೆ ಬಿಡಿಸಲು ಬಂದ ಪ್ರಸಾದ್ ಎಂಬವರಿಗೂ ಹಲ್ಲೆ ನಡೆಸಲಾಗಿದೆ ಎಂದು ಆರೋಪ ಮಾಡಲಾಗಿದೆ. ಈ ಕುರಿತು ವಿಜಯ ಬಿ.ಎಸ್ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Bus and bike collide; biker dies on the spot- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











