ಬ್ರೇಕಿಂಗ್ ನ್ಯೂಸ್
ಕರ್ನಾಟಕಪುತ್ತೂರು

ಪುತ್ತೂರು: ಬಾರ್ ಮಾಲೀಕನಿಗೆ ಕೆಲಸಗಾರನಿಂದ ಹಲ್ಲೆ

ಪುತ್ತೂರು: Tulu Times | ಕಮ್ಮಿಂಜೆ ಕಲ್ಲಗುಡ್ಡೆಯಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡಿದ್ದ ಹಳೆ ಕೆಲಸಗಾರನೊಬ್ಬ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ವಿಜಯ ಬಿಎಸ್ ಮತ್ತು ಅಲ್ಲಿದ್ದ ಪ್ರಸಾದ್ ಎನ್ನುವವರಿಗೆ ಬಾರ್‌ಲ್ಲಿ ಹಿಂದೆ ಅಡುಗೆ ಕೆಲಸ ಮಾಡಿಕೊಂಡಿದ್ದ ಗಿರೀಶ್ ಎನ್ನುವ ವ್ಯಕ್ತಿ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಕಮ್ಮಿಂಜೆ ಕಲ್ಲಗುಡ್ಡೆಯಲ್ಲಿ ಸ್ವಾತಿ ಬಾರ್ ಆಂಡ್ ರೆಸ್ಟೋರೆಂಟ್  ನಲ್ಲಿ ಘಟನೆ ನಡೆದಿದೆ.

ಇಬ್ಬರ ಜಗಳ ಶುರುವಾಗಿದ್ದು ಹೇಗೆ..?

ಇನ್ನು ಪಾತ್ರೆಯ ವಿಚಾರವಾಗಿ ಜಗಳ ಶುರುವಾಗಿದೆ. ಗಿರೀಶ್  ಕೆಲವು ಸಮಯಗಳ ಹಿಂದೆ ಕೆಲಸ ಬಿಟ್ಟಿದ್ದಾರೆ. ಜ19 ರಂದು ವಾಪಸು ಬಾರ್‌ಗೆ ಬಂದು, ‘ನಾನು ಅಡುಗೆ ಸಮಯ ತಂದಿರುವ ಪಾತ್ರೆಗಳು ಇಲ್ಲಿದೆ. ಅದನ್ನು ಕೊಂಡು ಹೋಗಲು ಬಂದಿರುವುದಾಗಿ ಹೇಳಿದ್ದಾರೆ. ಆಗ ವಿಜಯ ಬಿ.ಎಸ್ ಅವರು ಇಲ್ಲಿ ನಿಮ್ಮ ಒಂದೇ ಪಾತ್ರೆ ಇರುವುದು ಎಂದಿದ್ದಾರೆ. ಗಿರೀಶ್ ಕೋಪದಿಂದ ವಿಜಯ್ ಅವರಿಗೆ ಹಲ್ಲೆ ಮಾಡಿದ್ದಾರೆ. ಇನ್ನು ಹಲ್ಲೆ ಬಿಡಿಸಲು ಬಂದ ಪ್ರಸಾದ್ ಎಂಬವರಿಗೂ ಹಲ್ಲೆ ನಡೆಸಲಾಗಿದೆ ಎಂದು ಆರೋಪ ಮಾಡಲಾಗಿದೆ. ಈ ಕುರಿತು ವಿಜಯ ಬಿ.ಎಸ್   ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಡಬದಲ್ಲಿ ಬೈಕ್ ಗೆ ಗುದ್ದಿದ ಕಾಡಾನೆ..ಆನೆ ದಾಳಿಯಿಂದ ಯುವಕ ಪಾರು

ಕಡಬ: ಬೈಕ್ ಸವಾರನಿಗೆ ಕಾಡಾನೆ ಎದುರಾಗಿ, ಯುವಕ ಬೈಕ್ ಬಿಟ್ಟು ಪರಾರಿಯಾದ ಘಟನೆ ನಡೆದಿದೆ.

ಕೊಂಬಾರು ಕೊಲೆ ಮಿತ್ತಬೈಲು ರಸ್ತೆಯಲ್ಲಿ ಕಾಡಾನೆ ಎದುರಾಗಿದೆ. ಕೂದಲೆಳೆಯ ಅಂತರದಲ್ಲಿ ವಿನಯ್ ಅಗರಿ ಎಂಬವರು ಆನೆಯಿಂದ ಪಾರಾಗಿದ್ದಾರೆ. ಗ್ರಾಮದ ಜನ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ವಿರುದ್ಧ ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸಬೇಕಾದ ಸ್ಥಿತಿ ಎದುರಾದೀತು,” ಎಂದು ಸ್ಥಳೀಯ ನಿವಾಸಿಗಳು ಒಕ್ಕೊರಲಿನಿಂದ ಆಗ್ರಹಿಸಿ, ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೇವಲ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರೆ ಸಾಲದು, ಕಾಡಾನೆಗಳ. ನಿಯಂತ್ರಣಕ್ಕೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದರು. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

Puttur: Bar owner assaulted by worker- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 130

You cannot copy content of this page