ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕ

ಕುಂದಾಪುರದಲ್ಲಿ 15 ವರ್ಷದ ವಿದ್ಯಾರ್ಥಿನಿ ಶಾಲೆಗೆ ಹೋದವಳು ನಾಪತ್ತೆ!

ಕುಂದಾಪುರ: Tulu Times | ಕುಂದಾಪುರ ತಾಲೂಕು ಹೆಸ್ಕುತ್ತೂರು ಗ್ರಾಮದ 15 ವರ್ಷದ ಚೈತ್ರಾ ಎಂಬ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಪ್ರಕರಣ ಕಂಡುಬಂದಿದೆ.

9 ನೇ ತರಗತಿ ವಿದ್ಯಾರ್ಥಿನಿ ಚೈತ್ರಾ ನಾಪತ್ತೆಯಾ ಹುಡುಗಿ.  ಮಧ್ಯಾಹ್ನ ಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಶಾಲೆಗೂ ಹೋಗದೆ ವಾಪಸು ಮನೆಗೂ ಬಾರದೇ ನಾಪತ್ತೆಯಾಗಿದ್ದಾಳೆ ಎಂದು ತಿಳಿದುಬಂದಿದೆ. ಈಕೆ ಯಾರಿಗಾದರೂ ಕಾಣ ಸಿಕ್ಕರೆ ಕುಂದಾಪುರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 9480805468, 08254237100 ಗೆ ಮಾಹಿತಿ ನೀಡಲು ತಿಳಿಸಲಾಗಿದೆ.

ಇದನ್ನೂ ಓದಿ: ಬೈಕ್ ಟ್ಯಾಕ್ಸಿ ನಿಷೇಧ ತೆರವು: ಖಾಸಗಿ ಸಾರಿಗೆ ಸಂಘಗಳ ವಿರೋಧ

ನೆಲ್ಯಾಡಿ: ಬೈಕ್ ಸ್ಕಿಡ್ ಆಗಿ ಬೈಕ್‌ ಸವಾರ ಭೀಕರ ಸಾವು

ನೆಲ್ಯಾಡಿ: ಪ್ರತ್ಯೇಕ ಪ್ರಕರಣದಲ್ಲಿ, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಲಾವತ್ತಡ್ಕ ನೆಲ್ಯಾಡಿ ಲಾವತ್ತಡ್ಕ ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.

ಜ. 23 ಮಧ್ಯಾಹ್ನ ವೇಗವಾಗಿ ಬಂದ ಬೈಕ್ ಲಾವತ್ತಡ್ಕ ಸಮೀಪ ಸ್ಕಿಡ್ ಆಗಿದೆ. ಅಪಘಾತದ ತೀವ್ರತೆಗೆ ಶಿರಾಡಿ ಗ್ರಾಮದ ಮಿತ್ತಮಜಲು ನಿವಾಸಿ ಜಾಯ್ (51) ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಚಂದ್ರನಲ್ಲಿಗೆ ಐತಿಹಾಸಿಕ ವಸ್ತುಗಳನ್ನು ಕೊಂಡೊಯ್ಯಲಿದೆ ನಾಸಾ !

ಪೆರಿಯಶಾಂತಿ ಬಳಿಯ ಲಾವತ್ತಡ್ಕ ಎಂಬಲ್ಲಿ ಶಿರಾಡಿಯ ಜಾಯ್ ತಮ್ಮ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿದೆ. ಹೀಗಾಗಿ, ಬೈಕ್ ಸ್ಕಿಡ್ ಆಗಿದೆ. ಅಪಘಾತದ ತೀವ್ರತೆಗೆ ಬೈಕ್ ಪಲ್ಟಿಯಾಗಿ, ಜಾಯ್ ಅವರ ತಲೆಗೆ ಬಹಳ ಏಟಾಗಿ ರಕ್ತ ಬಂದಿದೆ. ಇದರಿಂದ, ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅವಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಸಂಚಾರ ವ್ಯತ್ಯಯ ಉಂಟಾಗಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸುವ ಪ್ರಕ್ರಿಯೆ ನಡೆದಿದೆ.

ಇದನ್ನೂ ಓದಿ: ಮಂಗಳೂರು : ಕರಾವಳಿ ಪ್ರದೇಶದಲ್ಲಿ ವೈರಲ್ ಜ್ವರ, ತಲೆನೋವು ಪ್ರಕರಣಗಳು ಹೆಚ್ಚಳ

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ರಸ್ತೆ ಕಾಮಗಾರಿಗಳು ಆಗಿದ್ದು ವಾಹನ ಸವಾರರು ಬಹಳ ವೇಗವಾಗಿ ವಾಹನಗಳನ್ನು ಓಡಿಸಿಕೊಂಡು ಬರುತ್ತಾರೆ. ಬೆಂಗಳೂರು ಮಂಗಳೂರು ಕಡೆಯಿಂದ ವಾಹನಗಳು ಓಡಾಟ ನಡೆಸುವ ಸಂದರ್ಭದಲ್ಲಿ ಹಲವಾರು ಅವಘಾತಗಳು ಸಂಭವಿಸುತ್ತಿವೆ. ಹೀಗಾಗಿ ಬಹಳ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾಗಿದೆ.

15-year-old student goes missing in Kundapura- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 170

You cannot copy content of this page