ಬ್ರೇಕಿಂಗ್ ನ್ಯೂಸ್
ಕರಾವಳಿರಾಜಕೀಯ

ಅಶಕ್ತ ಕುಟುಂಬಕ್ಕೆ ಸ್ವಂತ ಖರ್ಚಿನಲ್ಲಿ ಮನೆ‌ ನಿರ್ಮಿಸಿ ಕೊಟ್ಟ ಶಾಸಕ ಸುನಿಲ್‌ ಕುಮಾರ್

Hebri: ಮಳೆಗಾಲದಲ್ಲಿ ಸೋರುತ್ತಾ, ಸದಾ ಕುಸಿಯುವ ಭೀತಿಯಲ್ಲಿ ದಿನದೂಡುತ್ತಿದ್ದ ಕುಟುಂಬವೊಂದಕ್ಕೆ ಕಾರ್ಕಳ ಶಾಸಕ ವಿ.ಸುನಿಲ್‌ ಕುಮಾರ್‌ ಆಸರೆಯಾಗಿದ್ದಾರೆ. ತಮ್ಮ ಸ್ವತಃ ಖರ್ಚಿನಿಂದ ಮನೆ ನಿರ್ಮಿಸಿ, ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.

ಉಡುಪಿ ಜಿಲ್ಲೆಯ ಹೆಬ್ರಿಯ ಬಡಾಗುಡ್ಡೆಯ ಚುಕ್ರಿ ಕೊರಗ ಅವರ ಮನೆಯಲ್ಲಿ ಹಬ್ಬದ ಸಂಭ್ರಮವಿದೆ. ದೀಪಾವಳಿಗೆ ಒಂದು ದಿನ ಮೊದಲು ಚುಕ್ರಿ ಕೊರಗ ಕುಟುಂಬಸ್ಥರು ಹೊಸ ಮನೆಯ ಗ್ರಹಪ್ರವೇಶ ಮಾಡಿದ್ದಾರೆ.

ಎರಡು ತಿಂಗಳ ಹಿಂದಷ್ಟೇ ಚುಕ್ರಿ ಕೊರಗ ಕುಟುಂಬಸ್ಥರು ಶಾಸಕ ಸುನಿಲ್‌ ಕುಮಾರ್‌ ಅವರನ್ನು ಭೇಟಿಯಾಗಿದ್ದಾರೆ. ತಮ್ಮ ಸಮಸ್ಯೆಯನ್ನು ಅವರ ಮುಂದಿಟ್ಟಿದ್ದಾರೆ. ಇದಕ್ಕೆ ಸ್ಪಂದಿಸಿದ ಶಾಸಕರು ಸ್ಥಳಕ್ಕೆ ಆಗಮಿಸಿ ಅವರ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದರು. ತಮ್ಮದೇ ಖರ್ಚಿನಲ್ಲಿ ಚುಕ್ರಿ ಕೊರಗ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದರು.

ಕೊಟ್ಟ ಮಾತಿನಂತೆ ಮನೆ ನಿರ್ಮಿಸಿ ಹಬ್ಬದ ಸಂಭ್ರಮದಲ್ಲಿಯೇ ಗೃಹಪ್ರವೇಶ ನಡೆದಿದೆ. ಮನೆಯ ಪಕ್ಕದಲ್ಲಿರುವ ದೈವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬೆಳಗಿಸಿ ದೀಪ ಹಾಗೂ ದೇವರ ಪೋಟೋವನ್ನು ತಂದು ಮನೆಯಲ್ಲಿ ಇರಿಸಿದ್ದಾರೆ. ಮನೆಯವರಿಂದಲೇ ದೀಪ ಬೆಳಗಿಸುವ ಮೂಲಕ ಮನೆಯನ್ನು ಉದ್ಘಾಟಿಸಿದ್ದಾರೆ.

ಮನೆಯ ಕೀಲಿಕೈಯನ್ನು ಹಸ್ತಾಂತರಿಸುವ ಮೂಲಕ ಮನೆಯವರ ಖುಷಿಯನ್ನು ಕಂಡು ತಾವೂ ಸಂಭ್ರಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಂದಲೂ ಅಹವಾಲು ಸ್ವೀಕರಿಸಿದ್ದು, ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.

ಜನಸೇವೆಯಲ್ಲಿಯೇ ಸಾರ್ಥಕತೆ ಕಾಣುವವರು ಮಾತ್ರವೇ ನಿಜವಾದ ಜನನಾಯಕ ಎನಿಸಿಕೊಳ್ತಾರೆ. ಇದೇ ಹಾದಿಯಲ್ಲಿಯೇ ಶಾಸಕ ಸುನಿಲ್‌ ಕುಮಾರ್‌ ಸಾಗುತ್ತಿದ್ದಾರೆ.

ತನ್ನ ಸ್ವತಃ ಖರ್ಚಿನಿಂದ ಅಶಕ್ತ ಕುಟುಂಬಕ್ಕೆ ಸೂರು ಕಲ್ಪಿಸಿದ್ದಾರೆ. ಶೌಚಾಲಯದ ವ್ಯವಸ್ಥೆಯನ್ನೂ ಕಲ್ಪಿಸಿಕೊಟ್ಟಿದ್ದಾರೆ. ಈ ಮೂಲಕ ಕಾರ್ಕಳದ ಶಾಸಕರು ಇತರರಿಗೆ ಮಾದರಿಯಾಗಿದ್ದಾರೆ. ಮನೆ ಹಸ್ತಾಂತರ ವೇಳೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರು, ಗ್ರಾಮಸ್ಥರು, ಗ್ರಾಮ ಪಂಚಾಯತ್‌ ಅಧ್ಯಕ್ಷರು ಉಪಸ್ಥಿತರಿದ್ದರು.

ಇದನ್ನೂ ಓದಿ: Karuru Stampede: ಮೃತರ ಕುಟುಂಬಸ್ಥರಿಗೆ ಜಮೆ ಆದ ಹಣವೆಷ್ಟು?

===================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 44

You cannot copy content of this page