ಬ್ರೇಕಿಂಗ್ ನ್ಯೂಸ್
ರಾಜಕೀಯ

ಯಡಿಯೂರಪ್ಪರಿಗೆ ಸುನಿಲ್ ಕುಮಾರ್ ರನ್ನು ಹೋಲಿಸುತ್ತಿರುವುದೇಕೆ?

ತುಳುಟೈಮ್ಸ್ |ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ ಆಡಳಿತ ಪಕ್ಷವನ್ನು ಕಟ್ಟಿ ಹಾಕುವುದಕ್ಕೆ ಸಮರ್ಥ ವಿರೋಧ ಪಕ್ಷದ ನಾಯಕ ಬೇಕಾಗಿರುತ್ತಾರೆ.ಸವಾಲಿಗೆ ಪ್ರತಿಸವಾಲು ನೀಡುತ್ತಾ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಗಟ್ಟಿಧ್ವನಿ ಎತ್ತುವ ನಾಯಕ  ಜನರ ಮನಸ್ಸಿಗೆ ಬೇಗನೆ ಹತ್ತಿರವಾಗಿಬಿಡುತ್ತಾರೆ.ಇತ್ತೀಚಿನ ಕರ್ನಾಟಕದ ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ ರಾಜ್ಯದ ಜನರ ಗಮನವನ್ನು ವಿಶೇಷವಾಗಿ ಸೆಳೆಯುತ್ತಿರುವ ನಾಯಕರ ಲಿಸ್ಟ್ ನಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ.

ಸರ್ಕಾರದ ಕ್ರಮಗಳನ್ನು ಆಡಳಿತ ನೀತಿಗಳನ್ನು ಸದನದ ಕಲಾಪದ ರೀತಿನೀತಿಗಳನ್ನು ನೇರವಾಗಿ ಮತ್ತು ಸ್ಪಷ್ಟವಾಗಿ ಪ್ರಶ್ನಿಸುತ್ತಾ ಆಡಳಿತ ಪಕ್ಷದವರನ್ನು ಸುನಿಲ್ ಕುಮಾರ್ ಕಕ್ಕಾಬಿಕ್ಕಿಯಾಗುವಂತೆ ಮಾಡುತ್ತಿದ್ದಾರೆ.ಈ ಕಾರಣಕ್ಕೆ ಸುನಿಲ್ ಕುಮಾರ್ ರನ್ನು ಬಿಜೆಪಿಯ ನಾಯಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರಿಗೆ  ಹೋಲಿಕೆ ಮಾಡುವುದಕ್ಕೆ ಶುರುಮಾಡಿದ್ದಾರೆ.

ಹಿಂದೆ ಯಡಿಯೂರಪ್ಪ ಗುಡುಗಿದರೆ ವಿಧಾನಸಭೆ ನಡುಗುವುದು ಎಂಬ ಸ್ಲೋಗನ್ ಚಾಲ್ತಿಗೆ ಬಂದಿತ್ತು.ಇದಕ್ಕೆ ಕಾರಣವಾಗಿದ್ದು ಯಡಿಯೂರಪ್ಪರವರು ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಆಡಳಿತ ಪಕ್ಷದವರನ್ನು ತಮ್ಮದೇ ಧಾಟಿಯಲ್ಲಿ ಪ್ರಶ್ನಿಸುತ್ತಿದ್ದರು ಬೆಂಕಿಯುಂಡೆಯಂತಹ ಮಾತುಗಳು ಜನರ ರೋಷಾಗ್ನಿಯನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಸಫಲವಾಗಿರುತ್ತಿತ್ತು.ಯಡಿಯೂರಪ್ಪರು ಮಾತಿಗೆ ನಿಂತರೆಂದರೆ ಆಡಳಿತ ಪಕ್ಷದವರು ಉತ್ತರಕ್ಕೆ ತಡಬಡಾಯಿಸುತ್ತಿದ್ದರು.

ಹೀಗೆ ವಿಧಾನಭೆಯಲ್ಲಿ ಗಟ್ಟಿಧ್ವನಿಯಲ್ಲಿ ಮಾತಾಡುವ ಯಡಿಯೂರಪ್ಪ ನಂತರದಲ್ಲಿ ಯಾರು ಎಂಬ ಪ್ರಶ್ನೆಗೆ ಇದೀಗ ಜನರೇ ಇದೀಗ ಉತ್ತರ ಕಂಡುಕೊಳ್ಳುತ್ತಿದ್ದಾರೆ.ಕಾರ್ಕಳ ಶಾಸಕ  ಸುನಿಲ್ ಕುಮಾರ್ ಅಧಿವೇಶನದಲ್ಲಿ ಮಾಡಿದ ಮಾತಿನ ಮೋಡಿಗೆ ವಿಶೇಷ ಅಭಿಮಾನಿ ಬಳಗವೇ ಸೃಷ್ಟಿಯಾಗುತ್ತಿದೆ.

ಸದನದಲ್ಲಿ ಸರ್ಕಾರ ರಾಜ್ಯಪಾಲರನ್ನು ನಡೆಸಿಕೊಂಡ ರೀತಿಯನ್ನು ಸುನಿಲ್ ಕುಮಾರ್ ಖಂಡಿಸುತ್ತಾ,ಅಧಿವೇಶನದ ವ್ಯವಸ್ಥೆಯನ್ನು ಸ್ಪೀಕರ್  ಯು.ಟಿ ಖಾದರ್ ಗೆ ನೆನಪಿಸಿಕೊಟ್ಟರು,ಯು.ಟಿ ಖಾದರ್ ಮೊದಲ ಅಧಿವೇಶನವನ್ನು ನಡೆಸಿಕೊಟ್ಟಾಗ ಸಸ್ಪೆಂಡ್ ಮಾಡಿದ ಕ್ರಮವನ್ನು ನೆನಪಿಸಿ ಸರ್ಕಾರದ ಸಚಿವರನ್ನು ಸಸ್ಪೆಂಡ್ ಮಾಡುವಂತೆ ಒತ್ತಾಯಿಸಿದರು.

ಅಸ್ಸಾಂ,ಬಿಹಾರ ಚುನಾವಣೆಗಾಗಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ ಎಂದಾಗ ಸದನದಲ್ಲಿ ಕೋಲಾಹಲವೇ ನಡೆದುಹೋಯಿತು.
ಸುನಿಲ್ ಕುಮಾರ್ ರವರು ವಿಷಯವನ್ನು ಮಂಡಿಸುವಾಗ ಹಿನ್ನೆಲೆ ಮತ್ತು ಸ್ಪಷ್ಟತೆಯೊಂದಿಗೆ  ಇರುವುದು ಹೊಸ ಅಭಿಮಾನಿಗಳ ಉದಯಕ್ಕೆ ಕಾರಣವಾಗುತ್ತಿದೆ.

ಅದರಲ್ಲೂ ಈ ಭಾರಿಯ ಚಳಿಗಾಲದ ಅದಿವೇಶನದಲ್ಲಿ ಸುನಿಲ್ ಕುಮಾರ್ ಎತ್ತಿದ ವಿಷಯಗಳಿಂದ ರಾಜ್ಯದ ಜನರು ವಿಧಾನಸಭೆಯಲ್ಲಿ ಹೊಸ ಪ್ರಖರ ನಾಯಕನನ್ನು ಕಾಣುತ್ತಿದ್ದಾರೆ.
ರಾಜ್ಯ ಸರ್ಕಾರದ ಆಡಳಿತ ದುರುಪಯೋಗ ಮಾಡುತ್ತಿರುವ ರೀತಿ,ಭ್ರಷ್ಟಾಚಾರ ಸ್ಪೀಕರ್ ರವರು ಅನೂಕೂಲಕ್ಕೆ ತಕ್ಕಂತೆ ಸದನ ನಡೆಸುವ ಕ್ರಮವನ್ನು ಪ್ರಶ್ನಿಸಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.ಡಿ.ಕೆ ಶಿವಕುಮಾರ್ ರನ್ನು ಉದ್ದೇಶಿಸಿ ಜಿ.ಎಸ್ ಶಿವರುದ್ರಪ್ಪನವರ ಸಾಹಿತ್ಯವನ್ನು ಸಾಂದರ್ಭಿಕವಾಗಿ ಹಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.

ಸುನಿಲ್ ಕುಮಾರ್ ರಾಜ್ಯ ನಾಯಕರಾಗಿ ತಮ್ಮ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡುತ್ತಾ ರಾಜ್ಯದ ಸಮಸ್ಯೆಗಳನ್ನು ಕೂಡ ಅಧಿವೇಶನದಲ್ಲಿ ಮಂಡಿಸುತ್ತಿದ್ದಾರೆ.ಇದೇ ಕಾರಣಕ್ಕೆ ರಾಜ್ಯದ ಜನರು ಸುನಿಲ್ ಕುಮಾರ್ ಮೇಲೆ ವಿಶೇಷ ಭರವಸೆ ಇಡುವುದಕ್ಕೆ ಶುರುಮಾಡಿದ್ದಾರೆ.ಅಧಿವೇಶನದಲ್ಲಿ ಸುನಿಲ್ ಕುಮಾರ್ ಪ್ರಖರ ಮಾತುಗಳು ಕಾರ್ಕಳ ನಾಯಕನ ಭವಿಷ್ಯಕ್ಕೆ ಮತ್ತಷ್ಟು ಪ್ರಕಾಶ ತಂದುಕೊಡುತ್ತಿರುವುದಂತೂ ಸತ್ಯ.

Why is Karkala MLA Sunil Kumar being compared to Yediyurappa? tulutimes

ಇದನ್ನೂ ಓದಿ : ಚಂದ್ರನಲ್ಲಿಗೆ ಐತಿಹಾಸಿಕ ವಸ್ತುಗಳನ್ನು ಕೊಂಡೊಯ್ಯಲಿದೆ ನಾಸಾ !

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ : https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

ಪಕ್ಷದ ಕಚೇರಿ ನಿರ್ಮಾಣದಲ್ಲಿ ಆಸಕ್ತಿ ತೋರಿರುವ, ತೋರದವರ ಬಗ್ಗೆ ಎಐಸಿಸಿಗೆ ಲಿಖಿತ ಮಾಹಿತಿ: ಡಿ.ಕೆ. ಶಿವಕುಮಾರ್

ಬೆಂಗಳೂರು: Tulu Times | ಪಕ್ಷದ ಕಚೇರಿ ನಿರ್ಮಾಣ ವಿಚಾರದಲ್ಲಿ ಆಸಕ್ತಿ ತೋರಿರುವ ಹಾಗೂ ತೋರದವರ…

1 of 15

You cannot copy content of this page