ಬ್ರೇಕಿಂಗ್ ನ್ಯೂಸ್
ಕಡಬಕರ್ನಾಟಕ

ಕಡಬದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆ ಆಗಲಿದೆ

ಕಡಬ:Tulu Times | ಕಡಬದಲ್ಲಿ ಜನರ ಹಲವು ವರ್ಷಗಳ ಬೇಡಿಕೆ ಕಾರ್ಯಗತವಾಗುವ ಸಮಯ ಹತ್ತರವಾಗಿದೆ. ಮರ್ದಾಳ ಸಮೀಪದ ಮುಂಚಿಕಾಪು ಎಂಬಲ್ಲಿ 2 ಎಕ್ರೆ ಜಮೀನಿನಲ್ಲಿ ಠಾಣೆ ತಲೆ ಎತ್ತಲಿದೆ.

ಠಾಣೆ ನಿರ್ಮಾಣ ಮತ್ತು ಇತರ ವ್ಯವಸ್ಥೆಗಳಿಗಾಗಿ ಸರಕಾರ 3 ಕೋಟಿ ರೂ.!

ಪುತ್ತೂರಿನಿಂದ ಕಡಬಕ್ಕೆ 45 ಕಿ.ಮೀ. ದೂರವಿದೆ. ಕಡಬ ತಾಲೂಕಿನ ಕೆಲವು ಭಾಗಗಳು ಪುತ್ತೂರಿನಿಂದ ಸುಮಾರು 65 ಕಿ.ಮೀ. ಗಳಿಗಿಂತಲೂ ದೂರದಲ್ಲಿವೆ. ಈ ದೂರವನ್ನು ಕ್ರಮಿಸಿ ಅಗ್ನಿಶಾಮಕ ವಾಹನಗಳು ದುರಂತದ ಸ್ಥಳ ತಲುಪುವಾಗ ಅವಾಂತರಗಳೇ ಸೃಷ್ಟಿಯಾಗಿರುತ್ತವೆ. ಠಾಣೆ ನಿರ್ಮಾಣ ಮತ್ತು ಇತರ ವ್ಯವಸ್ಥೆಗಳಿಗಾಗಿ ಸರಕಾರ 3 ಕೋಟಿ ರೂ. ಅನುದಾನ ನೀಡಿದೆ. ಪುತ್ತೂರಿನ ಅಗ್ನಿಶಾಮಕ ಠಾಣೆಯ ವಾಹನ ಹಾಗೂ ಸಿಬಂದಿ ಬೇರೆ ಕಡೆ ಕಾರ್ಯಾಚರಣೆಗೆ ತೆರಳಿದ್ದರೆ ಸುಳ್ಯ ಅಥವಾ ಬೆಳ್ತಂಗಡಿಯಿಂದ ಅಗ್ನಿಶಾಮಕ ದಳದವರು ಬಂದು ಅಗ್ನಿ ಶಮನ ಮಾಡಿದ್ದಾರೆ.

ಇದನ್ನೂ ಓದಿ: ಸದನದಿಂದ ಹೊರನಡೆದ ರಾಜ್ಯಪಾಲ ಗೆಹ್ಲೋಟ್ : ‘ಸಂವಿಧಾನ ಉಲ್ಲಂಘನೆ’ ಸಿಎಂ ಸಿದ್ದರಾಮಯ್ಯ ಆರೋಪ

ಕಡಬ ತಾಲೂಕಿನ ಹಳೆನೇರೆಂಕಿಯ ಶಿವಾರುಮಲೆ ಪ್ರದೇಶದಲ್ಲಿ ಕಾಡ್ಗಿಚ್ಚು ಹರಡಿದಾಗ ನಿರಂತರ 4 ದಿನಗಳ ಕಾಲ ಬೆಂಕಿ ಧಗಧಗಿಸಿ ಎಕರೆಗಟ್ಟಲೆ ಅರಣ್ಯ ವನ್ನು ಆಹುತಿಯಾಗಿತ್ತು. ಆ ಸಂದರ್ಭದಲ್ಲಿ ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ಅಗ್ನಿಶಾಮಕ ಠಾಣೆಗಳ ಅಗ್ನಿಶಮನ ವಾಹನಗಳು ಮತ್ತು ಸಿಬಂದಿಗಳು ಹಗಲಿರುಳೆನ್ನದೆ ಬೆಂಕಿಯನ್ನು ನಿಯಂತ್ರಣಕ್ಕೆ  ಶ್ರಮಿಸಿದ್ದರು.

ಕಡಬದ ಮರ್ದಾಳದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಪೊಲೀಸ್‌ ಹೌಸಿಂಗ್‌ ಕಾರ್ಪೋರೇಷನ್‌ ಮೂಲಕ ಕಾಮಗಾರಿ ನಡೆಯಲಿದ್ದು, ಪ್ರಾಥಮಿಕ ಪ್ರಕ್ರಿಯೆಗಳು ಈಗಾಗಲೇ ಪೂರ್ಣಗೊಂಡಿವೆ.  ಮುಂದಿನ 1 ವರ್ಷದೊಳಗೆ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಅಗ್ನಿಶಾಮಕ ಠಾಣೆ ಕಾರ್ಯಾರಂಭಿಸಬೇಕು ಎನ್ನುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಶಾಸಕರಾದ ಭಾಗೀರಥಿ ಮುರುಳ್ಯ  ತಿಳಿಸಿದ್ದಾರೆ.

ಮರ್ದಾಳದಲ್ಲಿ ಧರ್ಮಸ್ಥಳ-ಸುಬ್ರಹ್ಮಣ್ಯ ಹೆದ್ದಾರಿಯ ಪಕ್ಕದ ಮುಂಚಿಕಾಪು ಎಂಬ ಜಾಗದಲ್ಲಿ ಠಾಣೆ ನಿರ್ಮಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಠಾಣೆ ನಿರ್ಮಾಣಗೊಳ್ಳಲಿರುವ ಜಾಗವು ಕಡಬ ತಾಲೂಕಿನ ವ್ಯಾಪ್ತಿಯ ಭೂ ಪ್ರದೇಶದ ಮಧ್ಯ ಭಾಗದಲ್ಲಿರುವುದರಿಂದ ತುರ್ತು ಸಂದರ್ಭಗಳಲ್ಲಿ ಶೀಘ್ರವಾಗಿ ಅವಘಡದ ಜಾಗಗಳಿಗೆ ತಲುಪಲು ಅನುಕೂಲವಾಗಲಿದೆ ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ, ದ.ಕ.-ಉಡುಪಿಯ  ಸಿ.ಆರ್‌. ರಂಗನಾಥ್‌ ತಿಳಿಸಿದ್ದಾರೆ.

A fire station will be established in Kadaba.- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 124

You cannot copy content of this page