ಬ್ರೇಕಿಂಗ್ ನ್ಯೂಸ್
ಕ್ರೀಡೆ

ಇನ್ನು ಆಟಕ್ಕೆ ಸಾಮರ್ಥ್ಯವಿಲ್ಲ : ಬ್ಯಾಡ್ಮಿಂಟನ್ ಗೆ ವಿದಾಯ ಹೇಳಲಿರುವ ದಿಗ್ಗಜೆ

ನವದೆಹಲಿ : Tulu Times| ಎಲ್ಲೆಡೆ ಸೈನಾ ನೆಹ್ವಾಲ್ ವಿದಾಯದ ಕುರಿತು ಹಲವಾರು ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಹೀಗಿರುವಾಗ, ಸ್ವತಃ ಸೈನಾ ಮಾಧ್ಯಮವೊಂದರಲ್ಲಿ ಸ್ಪಷ್ಟತೆ ನೀಡಿರುತ್ತಾರೆ.

35 ವರ್ಷದ ಸೈನಾ, ಗಾಯಗಳಿಂದಾಗಿ ಮುಂದುವರಿಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದು, ತಮ್ಮ ಕುಟುಂಬ ಹಾಗೂ ಕೋಚ್‌ಗಳಿಗೆ ಈ ವಿಷಯವನ್ನು ಈಗಾಗಲೇ ತಿಳಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕವಾಗಿ ನಿವೃತ್ತಿ ಘೋಷಣೆ ಮಾಡುವ ಅಗತ್ಯವಿಲ್ಲವೆಂದು ಭಾವಿಸಿದ್ದಾಗಿ ಅವರು ಹೇಳಿದ್ದಾರೆ. ತಮ್ಮ ಭವಿಷ್ಯ ಕುರಿತ ನಿವೃತ್ತಿ ವದಂತಿಗಳಿಗೆ ಕೊನೆಗೂ ತೆರೆ ಎಳೆದಿದ್ದಾರೆ. ಜೂನ್ 2023ರಲ್ಲಿ ನಡೆದ ಸಿಂಗಾಪುರ್ ಓಪನ್ ಬಳಿಕ ಯಾವುದೇ ಪಂದ್ಯದಲ್ಲೂ ಕಾಣಿಸಿಕೊಳ್ಳದಿದ್ದ ಸೈನಾ, ಇದೀಗ ತಾವು ಎರಡು ವರ್ಷಗಳ ಹಿಂದೆಯೇ ಬ್ಯಾಡ್ಮಿಂಟನ್‌ಗೆ ವಿದಾಯ ಹೇಳಿರುವುದಾಗಿ ಖಚಿತಪಡಿಸಿದ್ದಾರೆ.

8–9 ಗಂಟೆಗಳ ತರಬೇತಿ ಮಾಡಿದರೆ ಮಾತ್ರ ವಿಶ್ವದ ಶ್ರೇಷ್ಠ ಆಟಗಾರರಾಗಲು ಸಾಧ್ಯ. ಆದರೆ ನನ್ನ ಮೊಣಕಾಲು 1–2 ಗಂಟೆಗಳಲ್ಲೇ ಉಬ್ಬಿ ಹೋಗುತ್ತಿತ್ತು. ಅದರ ನಂತರ ಆಡಲು ಬಹಳ ಕಷ್ಟವಾಗುತ್ತಿತ್ತು. ಹಾಗಾಗಿ ಈಗ ಸಾಕು, ಇನ್ನಷ್ಟು ಒತ್ತಡ ಹಾಕಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿದೆ ಎಂದಿದ್ದಾರೆ.

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಒಲಿಂಪಿಕ್ಸ್ ಪದಕ ಗೆದ್ದ ಮೊದಲ ಭಾರತೀಯ ಶಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2010ರ ದೆಹಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದು, ಅದೂ ಸಹ ಭಾರತೀಯರಿಗೆ ಮೊದಲ ಚಿನ್ನವಾಗಿತ್ತು. 2015ರಲ್ಲಿ ಮಹಿಳಾ ವಿಭಾಗದಲ್ಲಿ ವಿಶ್ವ ನಂ.1 ಸ್ಥಾನ ಪಡೆದ ಮೊದಲ ಭಾರತೀಯ ಆಟಗಾರ್ತಿ ಹಾಗೂ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆಗಳೂ ಅವರ ಹೆಸರಿನಲ್ಲಿವೆ.

ನಾನು ಆಟ ನಿಲ್ಲಿಸಿದ್ದೇನೆ. ವಾಸ್ತವವಾಗಿ ಎರಡು ವರ್ಷಗಳ ಹಿಂದೆಯೇ ನಿಲ್ಲಿಸಿದ್ದೇನೆ. ನಾನು ನನ್ನ ಇಚ್ಛೆಯಿಂದ ಈ ಕ್ಷೇತ್ರಕ್ಕೆ ಬಂದೆ, ನನ್ನ ಇಚ್ಛೆಯಿಂದಲೇ ಹೊರಹೋಗುತ್ತಿದ್ದೇನೆ ಎಂದುಕೊಂಡಿದ್ದೆ. ಆದ್ದರಿಂದ ದೊಡ್ಡ ಘೋಷಣೆ ಮಾಡುವ ಅಗತ್ಯವಿಲ್ಲವೆಂದು ಭಾವಿಸಿದೆ. ಇನ್ನು ಆಟಕ್ಕೆ ಸಾಮರ್ಥ್ಯವಿಲ್ಲ ಅಷ್ಟೇ. ನನ್ನ ಕಾರ್ಟಿಲೇಜ್ ಸಂಪೂರ್ಣವಾಗಿ ಕುಗ್ಗಿದೆ, ಆರ್ಥ್ರೈಟಿಸ್ ಕೂಡ ಬಂದಿದೆ. ಈ ವಿಷಯ ನನ್ನ ಪೋಷಕರು ಮತ್ತು ಕೋಚ್‌ಗಳಿಗೆ ಗೊತ್ತಿರಬೇಕು ಅಷ್ಟೇ ಸಾಕು ಎಂದುಕೊಂಡೆ, ಎಂದು ಸೈನಾ ಪತ್ರಕರ್ತ ಸುಭೋಜಿತ್ ಘೋಷ್ ಅವರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ಹೇಳಿದ್ದಾರೆ.

No longer fit to play: Badminton legend to bid farewell – ತುಳು ಟೈಮ್ಸ್

ಇದನ್ನೂ ಓದಿ : ಮಂಗಳೂರು: ನೆಲಕ್ಕುರುಳಿದ ಬೃಹತ್ ಗಾತ್ರದ ಮರ; ಭಾರೀ ಹಾನಿ!

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/live/XyP1Yl5GcG0?si=YrCKOC5S6ZXrG-9_

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 5

You cannot copy content of this page