ಮಂಗಳೂರು:Tulu Times | ಮಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ನಾಯಿ ಹಾವಳಿ ಹೆಚ್ಚಾಗಿದ್ದು, ಜನರು ಓಡಾಡಲು ಭಯ ಪಡುವ ವಾತಾವರಣ ಸೃಷ್ಟಿಯಾಗಿದೆ.
ಇದನ್ನೂ ಓದಿ: ಒಬಿಸಿ ಸಮುದಾಯಕ್ಕೆ ಅವಕಾಶ- ರಘು ಕೌಟಿಲ್ಯ ಮನವಿ
ಗುಂಪಾಗಿ ದಾಳಿಗೆ ಮುಂದಾಗುತ್ತಿರುವ ಬೀದಿ ನಾಯಿಗಳು!
ಈ ಹಿಂದೆ ಸುಪ್ರೀಂ ಕೋರ್ಟ್ ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ನಾಯಿ ಗಳು ಗುಂಪುಗೂಡಿ ಇರದಂತೆ ನೋಡಿಕೊಳ್ಳಬೇಕು, ನಾಯಿಗಳನ್ನು ಸೂಕ್ತ ಶೆಲ್ಟರ್‌ಗೆ ಸ್ಥಳಾಂತರ ಮಾಡ ಬೇಕು ಎಂದು ತೀರ್ಪು ನೀಡಿತ್ತು. ಮಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ ನಾಯಿಗಳ ಹಾವಳಿ ಬಗ್ಗೆ ಪ್ರಯಾಣಿಕರು ದೂರಿದ್ದಾರೆ. ಇತ್ತೀಚೆಗೆ ನಿಲ್ದಾಣದ ಪ್ರವೇಶ ದ್ವಾರದ ಎದುರು ನಾಯಿಯೊಂದು ಯುವಕನ ಮೇಲೆ ದಾಳಿ ಮಾಡಿ, ಕಚ್ಚಿತ್ತು. ಅದೃಷ್ಟವಶಾತ್ ಯಾವುದೇ ಗಾಯವಾಗಿಲ್ಲ. ಬೆಳಗ್ಗೆ ಸಂಜೆ ಸಮಯ ಬೀದಿ ನಾಯಿಗಳ ಹಾವಳಿ ಹೆಚ್ಚು ಕಂಡುಬರುತ್ತಿದ್ದು, ಬಿಸಿಲೇರಿದ ಅನಂತರ ಅಲ್ಲಿಂದ ಕದಲುತ್ತವೆ. ಬಳಿಕ ಸಂಜೆ ಮತ್ತೆ ಅದೇ ರೀತಿ ಗುಂಪು ಸೇರುತ್ತವೆ.
ಇದನ್ನೂ ಓದಿ: ಸಂಭಾಷಣೆಗೆ ಜೀವ ತುಂಬಿದ ಕಲಾವಿದರು : ಐದು ಮಂದಿಯ ಅದ್ಭುತ ನಾಟಕ
ನೀರಿನ ನಳ್ಳಿಗೂ ನಾಯಿಗಳು ಬಾಯಿ ಹಾಕುತ್ತವೆ ಜನ ಆಕ್ರೋಶ!
ನಿಲ್ದಾಣದ ಮುಂಭಾಗ ಪಾರ್ಕಿಂಗ್ ಸ್ಥಳ, ಪಾದಚಾರಿಗಳ ಹಾದಿಗಳಲ್ಲಿ ಇವುಗಳು ಗುಂಪಾಗಿ ದಾಳಿಗೆ ಮುಂದಾಗುತ್ತವೆ.ನಿಲ್ದಾಣದೊಳಗೆ ಪ್ರಯಾಣಿಕರಿಗಾಗಿ ಇರುವ ಕುಡಿಯುವ ನೀರಿನ ನಳ್ಳಿಗೂ ನಾಯಿಗಳು ಬಾಯಿ ಹಾಕುತ್ತವೆ. ಈ ಫೋಟೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಕೆಲವರು ಬೇಯಿಸದ ಕೋಳಿಯ ಕಾಲು, ಎಲುಬಿನ ತುಂಡುಗಳನ್ನು ತಂದು ಹಾಕುತ್ತಾರೆ. ಇದರಿಂದಾಗಿಯೂ ಬೀದಿ ನಾಯಿಗಳು ಬಂದು ಇಲ್ಲಿ ಸೇರುತ್ತವೆ. ಜನ ನಿಲ್ದಾಣದ ಬಳಿ ಹೋಗಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಸಾರ್ವಜನಿಕರು ಯಾವ ನಾಯಿ ಯಾವಾಗ ದಾಳಿ ಮಾಡುತ್ತದೆ ಎಂದು ಅಂದಾಜಿಸಲು ಸಾಧ್ಯವಾಗುವುದಿಲ್ಲ ಎಂದು ಸಾರ್ವಜನಿಕರು ಹೇಳುತ್ತಾರೆ.
Mangalore Central Railway Station is a haven for stray dogs!- ತುಳುಟೈಮ್ಸ್
ಇದನ್ನೂ ಓದಿ: ಭಾರತದಲ್ಲೇ ಭಾರೀ ಅವಕಾಶ, ಜಾಗತಿಕ ವಿಸ್ತರಣೆಗೆ ಈಗ ಯೋಜನೆ ಇಲ್ಲ : ಸ್ವಿಗ್ಗಿ
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











