ಸಿನಿಮಾ: Tulu Times | ‘ಫೋರ್ ವಾಲ್ಸ್’ ಎಂಬ ಸಿನಿಮಾ ನಿರ್ದೇಶಿಸಿರುವ ಎಸ್ ಎಸ್ ಸಜ್ಜನ್ ಈಗ ‘ಶುಭಕೃತ್ ನಾಮ ಸಂವತ್ಸರ’ ಚಿತ್ರ ಕೈಗೆತ್ತಿಕೊಂಡಿದ್ದಾರೆ. Zee ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿ ‘ಲಕ್ಷ್ಮಿ ನಿವಾಸ’ದಲ್ಲಿ ಸಿದ್ದೇಗೌಡ ಉರೂಫ್ ನಟ ಧನಂಜಯ್ ಈ ಚಿತ್ರದ ನಾಯಕ. ಸದ್ಯ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ತೆಲುಗು ನಟ ನರೇಶ್ ವಿಜಯ ಕೃಷ್ಣ ಅವರನ್ನು ತಮ್ಮ ತಂಡಕ್ಕೆ ಸ್ವಾಗತ ನೀಡಿದೆ.
ನರೇಶ್ ಶುಭಕೃತ್ ನಾಮ ಸಂವತ್ಸರ ಸಿನಿಮಾ ತಂಡ ಸೇರಿಕೊಂಡಿದೆ. ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ಕುಡುಕನ ಪಾತ್ರದಲ್ಲಿ ನರೇಶ್ ನಟಿಸಿದ್ದಾರೆ. ಅಂದಹಾಗೇ ಶುಭಕೃತ್ ನಾಮ ಸಂವತ್ಸರ ಸಿನಿಮಾ ಹಬ್ಬದ ಹಿನ್ನೆಲೆಯಲ್ಲಿ ಸಾಗುವ ಕೌಟುಂಬಿಕ ಕಥೆ. ಆದರೆ ಈ ಕತೆಗೆ ಕ್ರೈಮ್-ಥ್ರಿಲ್ಲರ್ ಟಚ್ ಕೊಟ್ಟು ಸಜ್ಜನ್ ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ.
ಈ ಸಿನಿಮಾಗೆ ಫೋರ್ ವಾಲ್ಸ್ ನಿರ್ಮಾಣ ತಂಡ ಸಾಥ್ ಕೊಡುತ್ತಿದೆ. ಎಸ್.ವಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಗೆ ಬರುತ್ತಿದೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಶೂಟಿಂಗ್ ನಡೆಸಲಾಗುತ್ತಿದೆ.
ಕರಾವಳಿಯಲ್ಲಿ ಸುಸಜ್ಜಿತ ಸ್ಟುಡಿಯೋ ರೆಡಿ ಆಗುತ್ತೆ: ರಾಜ್ ಬಿ. ಶೆಟ್ಟಿ!
ಮಂಗಳೂರು: ಕರಾವಳಿಯಲ್ಲಿ ಸುಸಜ್ಜಿತ ಸ್ಟುಡಿಯೊ ನಿರ್ಮಾಣವಾಗಲಿ ಎಂದು ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಕರಾವಳಿ ಉತ್ಸವದಲ್ಲಿ ಭಾಗಿಯಾದ ಸಂದರ್ಭದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಜಿಲ್ಲಾಡಳಿತ ತುಳು ಚಲನಚಿತ್ರ ನಿರ್ಮಾಪಕರ ಸಂಘದ ಸಹಕಾರದೊಂದಿಗೆ ಭಾರತ್ ಸಿನಿಮಾಸ್ನಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ‘ಕರಾವಳಿ ಫಿಲಂ ಫೆಸ್ಟಿವಲ್’ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಸಿನಿಮಾ ನೋಡುವ ಅಭಿರುಚಿ ಇರಬೇಕು !
ಈ ವೇಳೆ, ರಾಜ್ ಬಿ. ಶೆಟ್ಟಿ ಮಾತು ಮುಂದುವರೆಸುತ್ತಾ, ತುಳುವಿನಲ್ಲಿ ಸಿನಿಮಾ ನಿರ್ಮಾಣ ಮಾಡುವ ಹಂಬಲವಿದೆ. ಸಣ್ಣ ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗಬೇಕು, ತೊಡಗಿಸಿದ ಹಣ ವಾಪಸ್ ಬರಬೇಕು ಇಂತಹ ಸವಾಲುಗಳೂ ಇವೆ. ಸಿನಿಮಾ ನೋಡುವ ಅಭಿರುಚಿ ಇರುವಲ್ಲಿ ಒಳ್ಳೆಯ ಕಥೆಗಳು, ಉತ್ತಮ ಸಿನಿಮಾಗಳು ಹುಟ್ಟುತ್ತವೆ. ಕರಾವಳಿಯಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಕಾಣುತ್ತಿದೆ. ಕರಾವಳಿಯಲ್ಲಿ ಸಿನಿಮಾ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಸುಸಜ್ಜಿತ ಸ್ಟುಡಿಯೊ ನಿರ್ಮಾಣದಂತಹ ಯೋಜನೆ ಜಾರಿಗೆ ಸರ್ಕಾರ, ಆಡಳಿತ ಯೋಚಿಸಬೇಕಾಗಿದೆ. ಇದು ಸ್ಥಳೀಯರಿಗೆ ಉದ್ಯೋಗ, ಆದಾಯ ನೀಡುವ ವೇದಿಕೆಯಾಗಬೇಕು ಎಂದರು. ಕರಾವಳಿಯಲ್ಲಿ ಪ್ರಾದೇಶಿಕ ಭಾಷೆ ಸಿನಿಮಾಗಳಿಗೆ ಒಂದೆರಡು ವರ್ಷಗಳಿಂದ ಸಹಾಯಧನ ಸಿಗುತ್ತಿಲ್ಲ. ಹೀಗಾದಾಗ, ಸಿನಿಮಾ ನಿರ್ಮಾಣಕ್ಕೆ ಕೈ ಹಾಕಲು ಹಿಂದೇಟು ಹಾಕುವಂತಾಗುತ್ತದೆ. ಸರ್ಕಾರ ಸಹಾಯಧನ ನೀಡಬೇಕು’ ಎಂದು ಚಿತ್ರ ನಿರ್ಮಾಪಕ ರಿಚರ್ಡ್ ಕ್ಯಾಸ್ತಲಿನೊ ಮಾತನಾಡಿದರು.
Telugu actor joins ‘Shubhakrit Naama Samvatsara’ team..Glimpse release on Naresh’s birthday- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











