ಮಂಗಳೂರು: Tulu Times | ಕರಾವಳಿಯಲ್ಲಿ ಸುಸಜ್ಜಿತ ಸ್ಟುಡಿಯೊ ನಿರ್ಮಾಣವಾಗಲಿ ಎಂದು ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಕರಾವಳಿ ಉತ್ಸವದಲ್ಲಿ ಭಾಗಿಯಾದ ಸಂದರ್ಭದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಜಿಲ್ಲಾಡಳಿತ ತುಳು ಚಲನಚಿತ್ರ ನಿರ್ಮಾಪಕರ ಸಂಘದ ಸಹಕಾರದೊಂದಿಗೆ ಭಾರತ್ ಸಿನಿಮಾಸ್‌ನಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ‘ಕರಾವಳಿ ಫಿಲಂ ಫೆಸ್ಟಿವಲ್’ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: WPL 2026: ಪ್ಲೇಆಫ್‌ಗೆ ಎಂಟ್ರಿಕೊಟ್ಟ ಆರ್ಸಿಬಿ
ಸಿನಿಮಾ ನೋಡುವ ಅಭಿರುಚಿ ಇರಬೇಕು !
ಈ ವೇಳೆ, ರಾಜ್ ಬಿ. ಶೆಟ್ಟಿ ಮಾತು ಮುಂದುವರೆಸುತ್ತಾ, ತುಳುವಿನಲ್ಲಿ ಸಿನಿಮಾ ನಿರ್ಮಾಣ ಮಾಡುವ ಹಂಬಲವಿದೆ. ಸಣ್ಣ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಬೇಕು, ತೊಡಗಿಸಿದ ಹಣ ವಾಪಸ್ ಬರಬೇಕು ಇಂತಹ ಸವಾಲುಗಳೂ ಇವೆ. ಸಿನಿಮಾ ನೋಡುವ ಅಭಿರುಚಿ ಇರುವಲ್ಲಿ ಒಳ್ಳೆಯ ಕಥೆಗಳು, ಉತ್ತಮ ಸಿನಿಮಾಗಳು ಹುಟ್ಟುತ್ತವೆ. ಕರಾವಳಿಯಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಕಾಣುತ್ತಿದೆ. ಕರಾವಳಿಯಲ್ಲಿ ಸಿನಿಮಾ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಸುಸಜ್ಜಿತ ಸ್ಟುಡಿಯೊ ನಿರ್ಮಾಣದಂತಹ ಯೋಜನೆ ಜಾರಿಗೆ ಸರ್ಕಾರ, ಆಡಳಿತ ಯೋಚಿಸಬೇಕಾಗಿದೆ. ಇದು ಸ್ಥಳೀಯರಿಗೆ ಉದ್ಯೋಗ, ಆದಾಯ ನೀಡುವ ವೇದಿಕೆಯಾಗಬೇಕು ಎಂದರು. ಕರಾವಳಿಯಲ್ಲಿ ಪ್ರಾದೇಶಿಕ ಭಾಷೆ ಸಿನಿಮಾಗಳಿಗೆ ಒಂದೆರಡು ವರ್ಷಗಳಿಂದ ಸಹಾಯಧನ ಸಿಗುತ್ತಿಲ್ಲ. ಹೀಗಾದಾಗ, ಸಿನಿಮಾ ನಿರ್ಮಾಣಕ್ಕೆ ಕೈ ಹಾಕಲು ಹಿಂದೇಟು ಹಾಕುವಂತಾಗುತ್ತದೆ. ಸರ್ಕಾರ ಸಹಾಯಧನ ನೀಡಬೇಕು’ ಎಂದು ಚಿತ್ರ ನಿರ್ಮಾಪಕ ರಿಚರ್ಡ್ ಕ್ಯಾಸ್ತಲಿನೊ ಮಾತನಾಡಿದರು.
ಇದನ್ನೂ ಓದಿ: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶೂ ಬದಲು ಚಪ್ಪಲಿ ಯೋಜನೆ
ಮಂಗಳೂರು ಸ್ಮಾರ್ಟ್ ಸಿಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್, ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್. ಧನರಾಜ್, ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್‌ಬೈಲ್, ಪ್ರಮುಖರಾದ ಯತೀಶ್ ಬೈಕಂಪಾಡಿ, ರವಿ ಕಳಸ, ಬಾಲಕೃಷ್ಣ ಶೆಟ್ಟಿ, ಶ್ರೀನಿವಾಸ, ಪ್ರಕಾಶ ಪಾಂಡೇಶ್ವರ, ಸಚಿನ್ ಉಪ್ಪಿನಂಗಡಿ ಮುಂತಾದವರು ಭಾಗಿಯಾಗಿದ್ದರು.
ಇದನ್ನೂ ಓದಿ: ‘ಗಿಲ್ಲಿ’ ಬಿಗ್ ಬಾಸ್ ಕನ್ನಡ 12ರ ವಿಜೇತ : ರೆಕಾರ್ಡ್ ದಾಖಲಿಸಿದ ಮತ
A well-equipped studio will be ready on the coast: Raj B. Shetty!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











