ಬ್ರೇಕಿಂಗ್ ನ್ಯೂಸ್
ಕರ್ನಾಟಕಮಂಗಳೂರು

ಮುಲ್ಕಿ: ಜೋಡಿಕೊಲೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ

ಮುಲ್ಕಿ: Tulu Times | ಮುಲ್ಕಿಯ ಮುತ್ತಯ್ಯಕೆರೆ ಆಗಿಂದಕಾಡು ಎಂಬಲ್ಲಿ ನಡೆದ ಜೋಡಿಕೊಲೆ ಪ್ರಕರಣದ ಆರೋಪಿ ಅಲ್ಫೋನ್ಸ್ ಸಲ್ದಾನ ಎಂಬಾತನಿಗೆ ಜೀವಾವಧಿ ಶಿಕ್ಷೆ ನೀಡಲು ಕೋರ್ಟ್‌ ತೀರ್ಪು ನೀಡಿದೆ. ಸೋಮವಾರ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಜೀವಾವಧಿ ಶಿಕ್ಷೆ ವಿಧಿಸಿ  ತೀರ್ಪು ನೀಡಿದ್ದಾರೆ.

ಘಟನೆ ಏನಾಗಿತ್ತು..?

ಮರದ ಗೆಲ್ಲು ಕಡಿಯುವ ವಿಚಾರಕ್ಕೆ ಸಂಬಂಧಿಸಿ, ಅಲ್ಫೋನ್ಸ್ ಸಲ್ದಾನ 2020ರ ಎಪ್ರಿಲ್ 29ರಂದು ಆರೋಪಿಯು ಮನೆ ಸಮೀಪದ ವಿನ್ಸಿ ಯಾನೆ ವಿನ್ಸೆಂಟ್ ಡಿಸೋಜ ಮತ್ತವರ ಪತ್ನಿ ಹೆಲೆನ್ ಡಿಸೋಜ ಯಾನೆ ಹೆಲೆನ್ ರೋಸಿ ರೋಡ್ರಿಗಸ್ ಅವರನ್ನು  ಕೊಲೆ ಮಾಡಿದ್ದ.  ಮುಲ್ಕಿ ಠಾಣೆಯ ನಿರೀಕ್ಷಕ ಜಯರಾಮ ಡಿ.ಗೌಡ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್ ಸಲ್ಲಿಸಿದ್ದರು. ಆರಂಭದಲ್ಲಿ 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಮಲ್ಲಿಕಾರ್ಜುನ ವಿಚಾರಣೆ ನಡೆಸಿದ್ದರು. ಆರೋಪಿಯು ಜೀವಾವಧಿ ಶಿಕ್ಷೆಯೊಂದಿಗೆ 2 ಲಕ್ಷ ರೂ. ದಂಡ ಪಾವತಿ ಮಾಡಬೇಕು ಎಂದು ಕೋರ್ಟ್ ಆದೇಶಿಸಿದೆ. ಸರಕಾರಿ ಅಭಿಯೋಜಕರಾದ ಜುಡಿತ್ ಓಲ್ಗಾ ಮಾರ್ಗರೇಟ್ ವಾದಿಸಿದ್ದರು.

ಮೂಡಬಿದಿರೆ: ಹೊಟೇಲ್‌ ಉದ್ಯಮ ಶುರುಮಾಡಬೇಕು ಅಂದುಕೊಂಡಿದ್ದ ಯುವಕ ಆತ್ಮಹತ್ಯೆ!

ಮೂಡಬಿದಿರೆ: ಪ್ರತ್ಯೇಕ ಪ್ರಕರಣದಲ್ಲಿ, ನಾಗರಕಟ್ಟೆಯ ರಿಂಗ್ ರೋಡ್ ಬಳಿ ಹೊಟೇಲ್ ವ್ಯವಹಾರ ಪ್ರಾರಂಭಿಸಲು ಯೋಜಿಸಿದ್ದ ಮೂಡಬಿದಿರೆಯ ದೀಕ್ಷಿತ್ (35) ಎಂಬ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೈಮೂಡಬಿದಿರೆಯ

ಹೊಟೇಲ್ ಆರಂಭಿಸುವ ಸಿದ್ದತೆಯಲ್ಲಿದ್ದ ಯುವಕನಿಗೆ ಏನಾಯ್ತು..?

ಸಾಕಷ್ಟು ಜನ ಯುವಕರು ಹೊಟೇಲ್ ಶುರು ಮಾಡಬೇಕು ಎಂದು ಕನಸು ಕಂಡಿರುತ್ತಾರೆ. ಅಂತಹದ್ದೇ ಕನಸು ಹೊತ್ತು ಸಾಗುತ್ತಿದ್ದ ಮೂಡಬಿದಿರೆಯ ನಾಗರಕಟ್ಟೆ-ಬಂಟಿಕಟ್ಟೆ ಕ್ರಾಸ್ ರಸ್ತೆ ಬಳಿ ಕಬ್ಬಿನ ಹಾಲಿನ ಅಂಗಡಿ ನಡೆಸುತ್ತಿರುವ ಶ್ರೀನಿವಾಸ್ ಎಂಬುವವರ ಪುತ್ರ ದೀಕ್ಷಿತ್ (35) ಮಾನಸಿಕವಾಗಿ ನೊಂದು ನೇಣಿಗೆ ಕೊರಳು ಒಡ್ಡಿದ್ದಾರೆ.

ಈತ ಮೊದಲು ದುಬೈನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದ್ದು, ಕೆಲವು ಸಮಯಗಳ ಹಿಂದೆ ದುಬೈನಿಂದ ಹಿಂದಿರುಗಿ ಬಂದಿದ್ದಾರೆ. ನಂತರ ದೀಕ್ಷಿತ್, ನಾಗರಕಟ್ಟೆಯ ರಿಂಗ್ ರೋಡ್ ಬಳಿ ಹೊಟೇಲ್ ವ್ಯವಹಾರ ಪ್ರಾರಂಭಿಸಲು ಯೋಚನೆ ಮಾಡಿದ್ದಾರೆ. ಹೊಟೇಲ್ ಉದ್ಯಮ ಶುರು ಮಾಡಿದ್ದಾರೆ ಎಂದು ಕನಸು ಕಂಡು, ಅದಕ್ಕೆ ಬೇಕಾದಂತಹ ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿದ್ದರು.

ಇವರ ತಾಯಿ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ದೀಕ್ಷಿತ್ ಮನೆಯ ಕೋಣೆಯೊಂದರ ಕಿಟಕಿ ಸರಳಿಗೆ ಶಾಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮೂಡಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Mulki: Accused in double murder case gets life sentence- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 158

You cannot copy content of this page