ಬೆಂಗಳೂರು : Tulu Times | ಶೂ ಬದಲು ಚಪ್ಪಲಿ… ಈ ಯೋಜನೆ ಶಾಲಾ ಮಕ್ಕಳಿಗೆ ಹೊಸದಲ್ಲ. 2015ರಲ್ಲಿಯೂ ಶೂ ಬದಲು ಚಪ್ಪಲಿ ನೀಡುವ ಯೋಜನೆ ಇತ್ತು. ಆದರೆ ಕಾರಣಾಂತರಗಳಿಂದ ಅದನ್ನು ಕೈಬಿಡಲಾಗಿತ್ತು. ಈಗ ಮತ್ತೆ ಈ ಯೋಜನೆಯನ್ನು ಪುನರ್ ಪರಿಶೀಲಿಸಲಾಗುತ್ತಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳ ಸೌಕರ್ಯ ಮತ್ತು ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಶೂ ಬದಲು ಚಪ್ಪಲಿ ನೀಡುವುದು ಮಳೆ ಮತ್ತು ಬೇಸಿಗೆಯಲ್ಲಿ ಸುಲಭವಾಗುತ್ತದೆ. ಈ ಯೋಜನೆ ಜಾರಿಯಾದರೆ, ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಇಲಾಖೆಯು ಜಿಲ್ಲಾ ಮಟ್ಟದಲ್ಲಿ ಮಾಹಿತಿ ಸಂಗ್ರಹಿಸಿ, ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿರುವುದು ವರದಿಯಾಗಿದೆ
ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನೀಡುತ್ತಿದ್ದ ಶೂ ಮತ್ತು ಸಾಕ್ಸ್ ಬದಲು ಈ ಬಾರಿ ಚಪ್ಪಲಿ ನೀಡುವ ಸಾಧ್ಯತೆ ಇದೆ. ಈ ಯೋಜನೆಗೆ ಶಿಕ್ಷಣ ಇಲಾಖೆ ಪ್ಲಾನ್ ಮಾಡುತ್ತಿದ್ದು, ಹವಾಮಾನ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಸೌಕರ್ಯವಾಗುವಂತೆ ಈ ಬದಲಾವಣೆಯನ್ನು ತರಲು ಇಲಾಖೆ ತಯಾರಿ ನಡೆಸುತ್ತಿದೆ. ಇದಕ್ಕೆ ಬೇಡಿಕೆ ಇರುವ ಜಿಲ್ಲೆಗಳ ಮಾಹಿತಿ ಸಂಗ್ರಹಕ್ಕೆ ಸೂಚನೆ ನೀಡಲಾಗಿದೆ.
ಶೈಕ್ಷಣಿಕ ಜೀವನವನ್ನು ಸುಗಮಗೊಳಿಸುವ ಉದ್ದೇಶ ;
ಶಿಕ್ಷಣ ಇಲಾಖೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಒಂದು ಜೊತೆ ಶೂ ಮತ್ತು ಎರಡು ಜತೆ ಸಾಕ್ಸ್ ವಿತರಿಸುತ್ತಿತ್ತು. ಇದಕ್ಕೆ ನಿಗದಿಪಡಿಸಿದ ಮೊತ್ತವು ತರಗತಿಯ ಅನುಸಾರ ಬದಲಾಗುತ್ತದೆ. ಉದಾಹರಣೆಗೆ, 1ರಿಂದ 5ನೇ ತರಗತಿಯ ವಿದ್ಯಾರ್ಥಿಗೆ ತಲಾ 265 ರೂಪಾಯಿ, 6 ರಿಂದ 8ನೇ ತರಗತಿಗೆ 295 ರೂಪಾಯಿ ಇತ್ಯಾದಿ…. ಈ ಯೋಜನೆಯು ವಿದ್ಯಾರ್ಥಿಗಳಿಗೆ ಸಮವಸ್ತ್ರದ ಜೊತೆಗೆ ಪಾದರಕ್ಷೆಯನ್ನು ಉಚಿತವಾಗಿ ನೀಡುವ ಮೂಲಕ ಅವರ ಶೈಕ್ಷಣಿಕ ಜೀವನವನ್ನು ಸುಗಮಗೊಳಿಸುವ ಉದ್ದೇಶ ಹೊಂದಿತ್ತು.
ಇನ್ನು ಮಳೆಗಾಲದಲ್ಲಿ ಸಾಕ್ಸ್ ಒದ್ದೆಯಾಗಿ ಸ್ಮೆಲ್ ಬರುವ ಸಾಧ್ಯತೆ ಇದೆ. ಬೇಸಿಗೆಯಲ್ಲಿ ದೀರ್ಘಕಾಲ ಶೂ ಧರಿಸಿದರೆ ಪಾದಕ್ಕೆ ಸೋಂಕು ತಗುಲುವ ಅಪಾಯವಿದೆ. ಇದರಿಂದ ವಿದ್ಯಾರ್ಥಿಗಳ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂಬ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಚಪ್ಪಲಿ ನೀಡುವ ಯೋಜನೆಯನ್ನು ಪರಿಗಣಿಸಿದೆ. ಇನ್ನೂ ಚಪ್ಪಲಿಗೆ ಆದ್ಯತೆ ಯಾಕೆ ಎಂಬುದನ್ನು ನೋಡುವುದಾದರೆ, ಮಳೆ ಮತ್ತು ಬೇಸಿಗೆಯಲ್ಲಿ ಧರಿಸಲು ಸುಲಭ, ಸೋಂಕು ತಪ್ಪಿಸುವುದು ಮತ್ತು ಸಾಕ್ಸ್ ಸಮಸ್ಯೆ ಇಲ್ಲದಿರುವುದು ಪ್ರಮುಖ ಕಾರಣಗಳು. ಈ ಯೋಜನೆಯನ್ನು ಜಾರಿಗೆ ತರಲು ಇಲಾಖೆ ಸಕ್ರಿಯವಾಗಿದೆ.
Chappals instead of shoes scheme in government and aided schools – ತುಳು ಟೈಮ್ಸ್
ಇದನ್ನೂ ಓದಿ : ಗೋವಾ ಮಾದರಿಯ ಬೀಚ್ ಪ್ರವಾಸೋದ್ಯಮಕ್ಕೆ ಕರ್ನಾಟಕದ ಗುರಿ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/XyP1Yl5GcG0?si=_SJWmeFra8tQb4en











