ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಸುಬ್ರಹ್ಮಣ್ಯ: ಕುಮಾರಧಾರ ನದಿಯಲ್ಲಿ ಮುಳುಗಿ ಯುವಕರಿಬ್ಬರು ಸಾವು

ಸುಬ್ರಹ್ಮಣ್ಯ: Tulu Times| ಕುಮಾರಧಾರ ನದಿಯಲ್ಲಿ ಮುಳುಗಿ ಕೊಲ್ಲಮೊಗ್ರದ ಯುವಕರಿಬ್ಬರು ಸಾವನ್ನಪ್ಪಿದ ಘಟನೆ  ಕುಲ್ಕುಂದದಲ್ಲಿ ನಡೆದಿದೆ.

ಸುಬ್ರಹ್ಮಣ್ಯದಲ್ಲಿ ಅಂಗಡಿ ಇಟ್ಟುಕೊಂಡಿರುವ ಕೊಲ್ಲಮೊಗ್ರದ ಹರಿಪ್ರಸಾದ್ ಹಾಗೂ ಮತ್ತೊಬ್ಬ ಯುವಕನನ್ನು ಸುಜಿತ್ ಕೊಲ್ಲಮೊಗ್ರ ಎಂದು ಗುರುತಿಸಲಾಗಿದೆ. ಇಬ್ಬರು  ನದಿಗೆ ಈಜಲು ತೆರಳಿರುವ ವೇಳೆ ಮುಳುಗಿ ಸಾವನ್ನಪ್ಪಿರುವುದಾಗಿ ಹೇಳಲಾಗಿದೆ. ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸುಬ್ರಹ್ಮಣ್ಯ ಕಾಲೇಜು ಹತ್ತಿರದಲ್ಲಿ ಕಾರ್ಯಾಚರಿಸುತ್ತಿರುವ ಅನುಗ್ರಹ ಹಾರ್ಡ್ ವೇ‌ರ್ ಸಂಸ್ಥೆಯ ಮಾಲಕರಾದ ಕೊಲ್ಲಮೊಗ್ರದ ಹರಿಪ್ರಸಾದ್ ಮಲ್ಲಾಜೆ ಹಾಗೂ ಅಲ್ಲಿಯೇ  ಕೊಲ್ಲಮೊಗ್ಗದ ಸುಚಿತ್ ಗೋಳ್ಯಾಡಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಇವರಿಬ್ಬರು  ಕುಲ್ಕುಂದ ಸಮೀಪ ಕುಮಾರಧಾರ ನದಿಗೆ ಸ್ನಾನ ಮಾಡಲೆಂದು ತೆರಳಿದ್ದರು. ಈ ಸಂದರ್ಭದಲ್ಲಿ ಸುಜಿತ್  ನೀರಿನಲ್ಲಿ ಮುಳುಗಿದ್ದು, ಅವರನ್ನು ರಕ್ಷಿಸಲು ಹರಿಪ್ರಸಾದ್ ರವರು ಮುಂದಾಗಿದ್ದಾರೆ.  ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ಘಟನೆ ತಿಳಿದ ತಕ್ಷಣ ಮೇಲೆತ್ತುವ ಕಾರ್ಯ ನಡೆಸಲಾಗಿದೆ.  ಇಬ್ಬರೂ ಕೂಡ ಅವಿವಾಹಿತರಾಗಿದ್ದು,  ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:‌ ಕಾರ್ಕಳದಲ್ಲಿ ವೃದ್ಧರೊಬ್ಬರು ನೇಣಿಗೆ ಶರಣು!

ಮಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದವನ ಬಂಧನ

ಮಂಗಳೂರು: ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದವನನ್ನು ಕದ್ರಿ ಪೊಲೀಸರು ಬಂಧಿಸಿದಾರೆ. ಕೇರಳ ಎರ್ನಾಕುಲಂನ ಜೂಡ್ ಮಾಥ್(20) ಎಂಬಾತ ಬಂಧಿತ ವ್ಯಕ್ತಿ.

ಮಂಗಳೂರು ಪೂರ್ವ ಪೊಲೀಸ್ ರಾಣಾ ವ್ಯಾಪ್ತಿಯ ಪದವು ಗ್ರಾಮದ ಕೈಲಾಸ ಕಾಲೋನಿ ಹತ್ತಿರ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರದ ಹಿಂದೆ ಇರುವ ಖಾಲಿ ಜಾಗದಲ್ಲಿ ಯುವಕನೊಬ್ಬನು ಬೈಕ್ ನಲ್ಲಿ ನಿಷೇಧಿತ MDMA ಎಂಬ ಮಾದಕ ವಸ್ತುವನ್ನು ವಶದಲ್ಲಿರಿಸಿಕೊಂಡು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾನೆಂದು ಮಾಹಿತಿ ಮೇರೆಗೆ ದಿನಾಂಕ 17-01-2026 ರಂದು ಮಂಗಳೂರು ಪೂರ್ವ ಠಾಣಾಧಿಕಾರಿಯವರಿಗೆ ದೊರೆತ ಖಚಿತ ಮಾಹಿತಿಯಂತೆ ದಾಳಿ ನಡೆಸಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು 5.20 ಗ್ರಾಂ ತೂಕದ MDMA ಮಾದಕ ವಸ್ತು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಪಲ್ಸರ್ ಎನ್.ಎಸ್ ಬೈಕ್ ಸಮೇತ ಒಟ್ಟು ರೂ 70,000/- ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.

Subrahmanya: Two youths drown in Kumaradhara river- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page