ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಬಾಡಿ ಶೇಮಿಂಗ್ ಬಗ್ಗೆ ನಟಿ ರಚಿತಾ ಬೋಲ್ಡ್ ಟಾಕ್

ಬೆಂಗಳೂರು: Tulu Times | ‘ಕಲ್ಟ್’ ಸಿನಿಮಾದ ಪ್ರಚಾರದಲ್ಲಿ ಭಾಗಿಯಾದ ನಟಿ ರಚಿತಾರಾಮ್‌ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ಈ ಪ್ರಶ್ನೆಗೆ ಡಿಂಪಲ್ ಕ್ವೀನ್ ಪ್ರತಿಕ್ರಿಯೆ ನೀಡಿದ್ದಾರೆ.

ನಟಿ ರಚಿತಾರಾಮ್‌ ಗೆ 2026ರ ಆರಂಭದಲ್ಲೇ ಅದೃಷ್ಟ ಒಲಿದು ಬಂದಿದೆ.ದುನಿಯಾ ವಿಜಯ್ ನಟನೆಯ ‘ಲ್ಯಾಂಡ್‌ಲಾರ್ಡ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅದೇ ಇನ್ನೊಂದು ಕಡೆ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ‘ಗಿಲ್ಲಿ’ ಬಿಗ್ ಬಾಸ್ ಕನ್ನಡ 12ರ ವಿಜೇತ : ರೆಕಾರ್ಡ್ ದಾಖಲಿಸಿದ ಮತ

ಮುಟ್ಟಾಗುವುದಕ್ಕೂ ಐದು ದಿನ ಮುನ್ನ ಬಾಡಿ ಕೋಲ್ಡ್ ಆಗುತ್ತೆ: ರಚಿತಾರಾಮ್

ರಚಿತಾ ರಾಮ್  ಮಾಧ್ಯಮದವರಿಗೆ ಬಾಡಿ ಶೇಮಿಂಗ್ ಪ್ರಶ್ನೆಗೆ ಡಿಂಪಲ್ ಕ್ವೀನ್ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ರಚಿತಾ ರಾಮ್‌ಗೂ ಬಾಡಿ ಶೇಮಿಂಗ್ ಅನುಭವಗಳು ಆಗಿವೆ. ಅದನ್ನು ಅವರು ಸಮರ್ಥವಾಗಿ ಎದುರಿಸಿದ್ದಾರೆ. ಹೀಗಾಗಿ ಈ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಹೆಣ್ಣು ಮಕ್ಕಳು ಯಾಕೆ ದಪ್ಪ ಆಗುತ್ತಾರೆ? ಅವರಿಗೆ ಎದುರಾಗುವ ದೈಹಿಕ ಸಮಸ್ಯೆಗಳ ಬಗ್ಗೆ ರಚಿತಾ ರಾಮ್ ಮಾತಾಡಿದ್ದಾರೆ. ಕೆಲವರು ಮಾನಸಿಕ ಒತ್ತಡದಿಂದಲೂ ದಪ್ಪ ಆಗುತ್ತಾರೆ.ಇಲ್ಲಿ ಡಯೆಟ್ ಮಾಡಿದರೂ ದಪ್ಪ ಆಗುತ್ತಾರೆ.  ಕೆಲವರಿಗೆ ಪಿಸಿಒಡಿ ಹಾಗೂ ಪಿಸಿಒಸಿ ಸಮಸ್ಯೆ ಇರುತ್ತೆ. ಎಲ್ಲರೂ ಡಯೆಟ್ ಮಾಡುತ್ತೇವೆ ಎಂದರು. ಬಾಡಿ ಶೇಮಿಂಗ್‌ನಿಂದ ಅವಮಾನಕ್ಕೆ ಒಳಗಾಗುವವರು ಮುಟ್ಟಾಳರು. ಒಂದು ಜೀವ.. ಒಂದು ಜೀವನ. ಯಾಕೆ ಎಲ್ಲರೂ ನೆಗೆಟಿವ್ ಕಾಮೆಂಟ್‌ಗಳಿಗೆ ಕಿವಿ ಕೊಡುತ್ತಿದ್ದಾರೆ. ಏನಕ್ಕೆ.. ಮಾತಾಡುವವರು ಮಾತಾಡುತ್ತಲೇ ಇರುತ್ತಾರೆ.” ಎಂದು ರಚಿತಾ ರಾಮ್ ಹೇಳಿದ್ದಾರೆ.
ನಮ್ಮ ದೇಹವನ್ನು ನಾವು ಪೂಜಿಸಬೇಕು. ಇದು ನಮ್ಮ ದೇಹ. ನಾವು ಯಾಕೆ ಬೇರೆಯವರಿಗೋಸ್ಕರ ಖಿನ್ನತೆಗೆ ಒಳಗಾಗಬೇಕು. ನನಗೆ ಏನು ಬೇಕು ಅಂತ ನನಗೆ ಗೊತ್ತಿದೆ. ನಾನು ಹೇಗೆ ವರ್ಕ್‌ಔಟ್ ಮಾಡಬೇಕು. ಇನ್ನೊಂದು ಗೊತ್ತಾ ಕೆಲವರು ಐದು ಗಂಟೆ ನಿದ್ದೆ ಮಾಡಿದರೆ ದಪ್ಪ ಆಗುತ್ತಾರೆ ಎಂದು ರಚಿತಾ ರಾಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

Actress Rachita’s bold talk about body shaming- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page