ಬ್ರೇಕಿಂಗ್ ನ್ಯೂಸ್
ಕರ್ನಾಟಕಬೆಳ್ತಂಗಡಿ

ಉಜಿರೆಯಲ್ಲಿ ಅಪಘಾತದಲ್ಲಿ ಗಾಯಗೊಂಡ ಮಂಚ ಗುರಿಪಳ್ಳ ಇವರಿಗೆ ವಾಟರ್ ಬೆಡ್ ಹಸ್ತಾಂತರ!

 ಉಜಿರೆ: Tulu Times | ಉಜಿರೆಯಲ್ಲಿ ರಸ್ತೆ ದಾಟುತ್ತಿದ್ದಾಗ ಬಸ್ಸು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ  ಗುರಿಪಳ್ಳ ನಿವಾಸಿ ಮಂಚ ಮುಗೇರ ಇವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರು  ವಾಟರ್ ಬೆಡ್ ಹಸ್ತಾಂತರಿಸಿದರು.

ಜ.17 ರಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಗುರಿಪಳ್ಳ ಅವರು ನಿವಾಸಿ ಮಂಚ ಮುಗೇರ ಅವರನ್ನು ಭೇಟಿಯಾಗಿದ್ದಾರೆ. ಮಂಚ ಮುಗೇರ ಅವರ  ತಲೆಗೆ ಗಂಭೀರ ಗಾಯಗೊಂಡು ಮಂಗಳೂರಿನ ಜನಪ್ರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಂತರ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ಷಿತ್ ಶಿವರಾಂ  ರವರು ಇವರ ಆರೋಗ್ಯ ವಿಚಾರಿಸಿ, ವಾಟರ್ ಬೆಡ್ ಹಸ್ತಾಂತರಿಸಿದರು.

ವೈದ್ಯರಿಂದ ರೋಗಿಯ ಆರೋಗ್ಯದ ಬಗ್ಗೆ, ವಿಚಾರಿಸಿ ಮಾಹಿತಿ ಪಡೆದುಕೊಂಡರು. ಪತ್ನಿ ಗಿರಿಜಾ, ಮಗ ಶ್ರೀ ಲೋಕನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ನಾಗೇಶ್ ಎಂ. ಯುವ ವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಕುಟುಂಬ ಸದಸ್ಯರಾದ ಪ್ರವೀಣ, ಹರೀಶ್, ಸರಸ್ಕೃತಿ ಜಗದೀಶ್, ಪ್ರಮುಖರಾದ ಬೆಳ್ತಂಗಡಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಸೌಮ್ಯ ಲಾಯಿಲ, ಗ್ರಾಮೀಣ ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷರಾದ ಯಶೋದರ ಗೌಡ ಕೊಡೋಳು, ಕೇಶವ ಎಂ ಉಪಸ್ಥಿತರಿದ್ದರು.

ಕಾರ್ಕಳದಲ್ಲಿ ವೃದ್ಧರೊಬ್ಬರು ನೇಣಿಗೆ ಶರಣು!

ಕಾರ್ಕಳ: ಅಜೆಕಾರು ಮರ್ಣೆ ಗ್ರಾಮದಲ್ಲಿ ವೈದ್ಯರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ದೇವರಾಯ ಹೆಗ್ಡೆ (80) ಮೃತ ದುರ್ದೈವಿಯಾಗಿದ್ದಾರೆ. ದೇವರಾಯ ಹೆಂಡತಿ ಒಂದು ವರ್ಷದ ಹಿಂದೆ ನಿಧನರಾಗಿದ್ದಾರೆ. ದೇವರಾಯ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಜ. 15ರ ರಾತ್ರಿ ಅವರು ಊಟ ಮಾಡಿ ಮಲಗಿ, ಜ.16ರ ಬೆಳಗ್ಗೆ, ಸೊಸೆ ಮನೆಯ ಹಿಂಬಾಗಿಲು ತೆರೆದು ಹೊರಗೆ ಹೋದಾಗ ಮನೆಯ ಹಿಂಬದಿಯ ಮಾಡಿನ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಖಿನ್ನತೆಯಿಂದ ದೇವರಾಯ ಹೆಗ್ಡೆ ಜೀವನದಲ್ಲಿ ಜಿಗುಪ್ಪೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಗ ದಾಮೋದರ ಹೆಗ್ಡೆ ದೂರು ನೀಡಿದ್ದಾರೆ. ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Mancha Guripalla, who was injured in an accident in Ujire, was handed over a water bed!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 127

You cannot copy content of this page