ಬ್ರೇಕಿಂಗ್ ನ್ಯೂಸ್
ಕರ್ನಾಟಕರಾಜಕೀಯ

ವೈಯಕ್ತಿಕ ದ್ವೇಷ: ಖಾಸಗಿ ವಿಡಿಯೋ ವೈರಲ್‌ ಮಾಡಿದ ಕಾಂಗ್ರೆಸ್‌ ಮುಖಂಡ – ತಂದೆಯಿಂದ ದೂರು

Mysuru: ಜಮೀನು ದಾರಿ ವಿಚಾರದ ದ್ವೇಷದ ಹಿನ್ನಲೆ ಕಾಂಗ್ರೆಸ್‌ ಮುಖಂಡನೊಬ್ಬ ತಳ ಮಟ್ಟಕ್ಕೆ ಇಳಿದು ನೀಚ ಕೃತ್ಯ ಎಸಗಿದ್ದಾನೆ. ವೈಯಕ್ತಿಕ ದ್ವೇಷದ ಕಾರಣಕ್ಕೆ ವ್ಯಕ್ತಿಯೊಬ್ಬರ ಮಗಳ ಜೊತೆಗಿನ ಅಶ್ಲೀಲ ವಿಡಿಯೋ ಸೆರೆಹಿಡಿದು ವೈರಲ್‌ ಮಾಡಿದ್ದಾನೆ.

ಕೆ.ಆರ್.ನಗರ ತಾಲೂಕು ಕಾಂಗ್ರೆಸ್ ಮುಖಂಡ ಲೋಹಿತ್ ಅಲಿಯಾಸ್​​ ರಾಜಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಯೊಂದು ವೈರಲ್​​ ಆಗಿದ್ದು ಯುವತಿಯ ತಂದೆ ಪೊಲೀಸ್‌ ಠಾಣಾ ಮೆಟ್ಟಿಲೇರಿದ್ದಾರೆ. ವೈಯಕ್ತಿಕ ಲಾಭಕ್ಕಾಗಿ ಮಗಳೊಂದಿಗಿನ ಅಶ್ಲೀಲ ವಿಡಿಯೋ ಹರಿಬಿಟ್ಟಿದ್ದಾಗಿ ತಂದೆ ದೂರು ನೀಡಿದ್ದಾರೆ. ಈ ಕಾಂಗ್ರೆಸ್ ಮುಖಂಡ ವಿರುದ್ಧ ನಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್​ ದಾಖಲಾಗಿದೆ.

ಪ್ರಕರಣದ ಸಾರಾಂಶ:
ಅ. 16ರಂದು ಸೋಮೇಗೌಡ ಎಂಬುವರ ದೂರಿನನ್ವಯ ಕೇಸ್‌ ದಾಖಲಾಗಿದೆ. ಮೂರು ತಿಂಗಳ ಹಿಂದೆ ಹೊಳೆನರಸೀಪುರ ತಾಲೂಕಿನ ಮರಹಳ್ಳಿ ಗ್ರಾಮದ ವ್ಯಕ್ತಿ ಜೊತೆಗೆ ಮಗಳ ಮದುವೆ ಮಾಡಿದ್ದು, ನನ್ನ ಮಗಳು ಮತ್ತು ಅಳಿಯ ಚೆನ್ನಾಗಿದ್ದರು.

ದೀಪಾವಳಿ ಹಬ್ಬದ ಹಿನ್ನೆಲೆ ನನ್ನ ಮಗಳು ನಮ್ಮ ಮನೆಗೆ ಬಂದಿದ್ದಳು. ಹೀಗಿರುವಾಗ ಅ 16ರಂದು ಬೆಳಿಗ್ಗೆ 10 ಗಂಟೆಗೆ ನನ್ನ ಸಂಬಂಧಿಕರು ನಮ್ಮ ಜಮೀನಿನ ಬಳಿ ಭೇಟಿಯಾಗಿದ್ದಾರೆ. ನಿಮ್ಮ ಮಗಳು ಮತ್ತು ನಿಮ್ಮೂರಿನ ಲೋಹಿತ್​​ ಅಲಿಯಾಸ್​ ರಾಜಿ ಇಬ್ಬರ ಅಶ್ಲೀಲ ವಿಡಿಯೋ ಮಲ್ಲಿಕಾರ್ಜುನ ಎಂಬುವವರ ವಾಟ್ಸಾಪ್​​ ನಂಬರ್​ಗೆ ಬಂದಿದ್ದು, ಆತನು ನನ್ನ ವಾಟ್ಸಾಪ್​​ ನಂಬರ್​ಗೆ ಕಳುಹಿಸಿದ್ದಾರೆ. ಏನೆಂದು ವಿಡಿಯೋ ನೋಡಲಾಗಿ ಅದು ನಿಮ್ಮ ಮಗಳ ಮತ್ತು ಲೋಹಿತ್​ ಅಶ್ಲೀಲ ವಿಡಿಯೋ ಆಗಿತ್ತು. ಬಳಿಕ ಡಿಲೀಟ್​ ಮಾಡಿರುವುದಾಗಿ ತಿಳಿಸಿದ್ದಾರೆ.

ನಮಗೂ ನಮ್ಮೂರಿನ ಕಾಂಗ್ರೆಸ್‌ ಮುಖಂಡ ಲೋಹಿತ್​​ ಎಂಬುವನಿಗೂ ಜಮೀನು ದಾರಿ ವಿಚಾರವಾಗಿ ಆಗಾಗ ಗಲಾಟೆಯಾಗಿದ್ದು, ನಿನಗೆ ಮತ್ತು ನಿಮ್ಮ ಕುಟುಂಬಕ್ಕೆ ಒಂದು ಗತಿ ಕಾಣಿಸುತ್ತೇನೆ ನೋಡು, ಒಂದಲ್ಲ ಒಂದು ದಿನ ನಿಮ್ಮನ್ನು ಕೊಲೆ ಮಾಡದೇ ಬಿಡುವುದಿಲ್ಲವೆಂದು ಪದೇ ಪದೇ ಹೇಳುತ್ತಿದ್ದನು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ದ್ವೇಷದಿಂದ ನಮ್ಮ ಕುಟುಂಬದ ಮರ್ಯಾದೆಯನ್ನು ಬೀದಿ ಪಾಲು ಮಾಡುವ ದುರುದ್ದೇಶದಿಂದ ನನ್ನ ಮಗಳೊಂದಿಗೆ ತೊಡಗಿದ ವಿಡಿಯೋವನ್ನು ಮೊಬೈಲ್​​ನಲ್ಲಿ ರೆಕಾರ್ಡ್ ಮಾಡಿಕೊಂಡು ಎಲ್ಲರಿಗೂ ವಾಟ್ಸಾಪ್​​ನಲ್ಲಿ ಕಳುಹಿಸಿದ್ದಾನೆ. ನನ್ನ ಮಗಳ ಮತ್ತು ನಮ್ಮ ಸಂಸಾರವನ್ನು ಹಾಳು ಮಾಡಿರುತ್ತಾನೆ. ಆದ್ದರಿಂದ ಲೋಹಿತ್ ಅಲಿಯಾಸ್​ ರಾಜಿ ಎಂಬುವನ ಮೇಲೆ ಕಾನೂನು ಕ್ರಮ ಜರುಗಿಸಿ ನನಗೆ ಮತ್ತು ನನ್ನ ಮಗಳಿಗೆ ನ್ಯಾಯ ಕೊಡಿಸುವಂತೆ ತಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Puttur ಟ್ರಾಫಿಕ್‌ ಪೊಲೀಸರ ಆಕ್ರಮಣಕಾರಿ ವರ್ತನೆ -ಸೂಕ್ತ ಕ್ರಮದ ಭರವಸೆ 


ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page